More

    ಕೆಎಸ್​ಆರ್​ಟಿಸಿ ಟಿಕೆಟ್​ ವಿತರಣಾ ಯಂತ್ರ ಸ್ಫೋಟ: ಕಂಡಕ್ಟರ್​ಗೆ ಗಂಭೀರ ಗಾಯ

    ತಿರುವನಂತಪುರಂ: ಬಸ್​ ಕಂಡಕ್ಟರ್​ ಬಳಿಯಿರುವ ಟಿಕೆಟ್​ ವಿತರಣಾ ಯಂತ್ರವೂ ಕೂಡ ಸುರಕ್ಷಿತವಲ್ಲ ಎಂಬುದಕ್ಕೆ ಕೇರಳದಲ್ಲಿ ನಡೆದಿರುವ ಈ ಆತಂಕಕಾರಿ ಘಟನೆ ತಾಜಾ ಉದಾಹರಣೆಯಾಗಿದೆ.

    ಯಂತ್ರವೂ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಕಂಡಕ್ಟರ್​ ಎಂಎಂ ಮುಹಮ್ಮದ್​ ಎಂಬುವರ ಒಂದು ಕೈಗೆ ಸುಟ್ಟ ಗಾಯಗಳಾಗಿವೆ. ಪೆರುಂಬವೂರ್​ ನಿವಾಸಿಯಾಗಿರುವ ಮುಹಮ್ಮದ್, ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕಂಡಕ್ಟರ್​ ಆಗಿದ್ದಾರೆ.

    ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್‌ನ ಟಿಕೆಟ್ ಯಂತ್ರವೂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಂತ್ರವೂ ಬತ್ತೇರಿ ಕೆಎಸ್​ಆರ್​ಟಿಸಿ ಡಿಪೋಗೆ ಸೇರಿದ್ದಾಗಿದೆ. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಿಬ್ಬಂದಿ ವಿಶ್ರಾಂತಿ ಕೊಠಡಿಯಲ್ಲಿ ಈ ಘಟನೆ ನಡೆದಿದೆ.

    ಇದೇ ಸಂದರ್ಭದಲ್ಲಿ ಈ ಅಪಘಾತದ ಬಗ್ಗೆ ಕೆಎಸ್ಆರ್​ಟಿಸಿ ತನಿಖೆ ಆರಂಭಿಸಿದೆ. ಮೈಕ್ರೋಎಫ್​ಎಕ್ಸ್​ ಕಂಪನಿ ಈ ಯಂತ್ರವನ್ನು ತಯಾರಿಸಿದ್ದು, ಶಾರ್ಟ್​ ಸೆರ್ಕ್ಯೂಟ್​ನಿಂದ ಸ್ಫೋಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಹಿಂದಿನ ಎಲ್​ಡಿಎಫ್​ ಸರ್ಕಾರದ ಆಳ್ವಿಕೆ ವೇಳೆ ಇದನ್ನು ಖರೀದಿಸಲಾಗಿದ್ದು, ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕೆಎಸ್‌ಆರ್‌ಟಿಸಿ ಗುತ್ತಿಗೆಯನ್ನು ಸಾರ್ವಜನಿಕ ವಲಯದ ಕಂಪನಿಯ ಬದಲಿಗೆ ಖಾಸಗಿ ಕಂಪನಿಗೆ ನೀಡಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. (ಏಜೆನ್ಸೀಸ್​)

    ಪ್ರೇಯಸಿಗೆ ಜಾಮೀನು ಕೊಡಿಸಲು ಹೋಗಿ ಮರಣದಂಡನೆಗೆ ಗುರಿ: ವಿಷದ ಇಂಜೆಕ್ಸನ್​ ನೀಡಿ ಪ್ರಿಯಕರನ ಹತ್ಯೆ

    ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ… ಉಗ್ರರ ದಾಳಿಗೆ ಪಾಕ್​ನ 10 ಸೈನಿಕರ ಸಾವು

    ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್: ಕೋವಿಶೀಲ್ಡ್, ಕೊವ್ಯಾಕ್ಸಿನ್​ಗೆ ಅನುಮತಿ; ಲಸಿಕೆ ಅಭಿಯಾನಕ್ಕೆ ಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts