More

    ಸಾಮಾನ್ಯ ಮಹಿಳೆಯಿಂದ ಇದು ಸಾಧ್ಯವಾ? ನಿಗೂಢ ಸಾವಿಗೀಡಾದ ಮಹಿಳೆಯ ಮೊಬೈಲ್​ ನೋಡಿ ಪೊಲೀಸರೇ ಶಾಕ್​

    ಕೊಯಿಕ್ಕೋಡ್​: ಕೇರಳದಲ್ಲಿ ನಿಗೂಢವಾಗಿ ಮೃತಪಟ್ಟಿರುವ ಬಿಜಿಶಾ ಎಂಬಾಕೆಯ ಸಾವಿನ ಪ್ರಕರಣದಲ್ಲಿ ಆಕೆಯ ಆರ್ಥಿಕ ವ್ಯವಹಾರವನ್ನು ಬಯಲಿಗೆ ಎಳೆಯುವ ಮೂಲಕ ಕೇರಳ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.

    ಅವಿವಾಹಿತೆಯಾಗಿರುವ ಬಿಜಿಷಾ 2021ರ ಡಿಸೆಂಬರ್​ 12ರಂದು ಜೊಯಿಲ್ಯಾಂಡಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಆತ್ಮಹತ್ಯೆ ಹಿಂದಿನ ಪ್ರೇರಣೆಯನ್ನು ಕಂಡುಹಿಡಿಯುವಲ್ಲಿ ಪೊಲೀಸರು ವಿಫಲವಾಗಿದ್ದರು. ಪ್ರಕರಣ ನಡೆದ ಒಂದು ತಿಂಗಳ ಬಳಿಕ ಇದೀಗ ಆಕೆಯ ಸಾವಿನ ಹಿಂದಿನ ಪ್ರೇರಣೆಯನ್ನು ಪೊಲೀಸರು ಬಯಲು ಮಾಡಿದ್ದಾರೆ. ಯುಪಿಐ ಆ್ಯಪ್​ ಮೂಲಕ ತನ್ನ ಎರಡು ಬ್ಯಾಂಕ್​ ಖಾತೆಗಳಿಂದ ಬರೋಬ್ಬರಿ 1 ಕೋಟಿ ರೂ. ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.

    ಆಕೆಯ ಆಪ್ತರಿಗಾಗಲಿ ಅಥವಾ ಕುಟುಂಬಕ್ಕಾಗಲಿ ಹಣದ ವ್ಯವಹಾರದ ಬಗ್ಗೆ ಮಾಹಿತಿ ಇಲ್ಲ. ಇದಲ್ಲದೇ ಆಕೆಯ ಮದುವೆಗಾಗಿ ಇಟ್ಟಿದ್ದ 35 ಸವರನ್​ ಚಿನ್ನವನ್ನು ಸಹ ಬ್ಯಾಂಕ್ ಸಾಲಕ್ಕೆ ಒತ್ತೆ ಇಡಲಾಗಿತ್ತು. ಬಿಜಿಶಾ ಸಾವಿನ ನಂತರ ಬ್ಯಾಂಕ್​ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಟುಂಬವು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದೆ.

    ಸಂಪೂರ್ಣ ವಹಿವಾಟುಗಳು UPI ಅಪ್ಲಿಕೇಶನ್‌ಗಳ ಮೂಲಕ ನಡೆದಿರುವುದಿಂದ ಯಾವುದೇ ಮಾಹಿತಿಯನ್ನು ಹಿಂಪಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪೋಲೀಸರ ಪ್ರಕಾರ, ಹಣವನ್ನು ಸಾಲ ಪಡೆದವರಿಗೆ ಪಾವತಿ ಅಪ್ಲಿಕೇಶನ್‌ಗಳ ಮೂಲಕ ವಹಿವಾಟು ನಡೆಸುವಂತೆ ಹೇಳಲಾಗಿದೆ. ಆಕೆ ಆ್ಯಪ್‌ಗಳ ಮೂಲಕ ತನ್ನ ವಹಿವಾಟಿನ ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾಳೆ.

    ಬಿ.ಇಡಿ ಪದವೀಧರರಾಗಿರುವ ಬಿಜಿಶಾ ಖಾಸಗಿ ಟೆಲಿಕಾಂ ಕಂಪನಿಯೊಂದರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟೊಂದು ಹಣದ ವ್ಯವಹಾರ ಮಾಡಿರುವುದನ್ನು ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಹಣದ ವ್ಯವಹಾರವೇ ಆಕೆಯ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಡಿಸೆಂಬರ್​ 12ರಂದು ಎಂದಿನಂತೆ ಮನೆಗೆ ಮರಳಿದ ಬಳಿಕ ಆಕೆಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಆತ್ಮಹತ್ಯೆಯ ಹಿಂದಿನ ಸತ್ಯಾಂಶ ಬೆಳಕಿಗೆ ಬರಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ವೇಗದ ಮಿತಿ ಉಲ್ಲಂಘಿಸಿದ ಕಾರು ಮಾಲೀಕನಿಗೆ ವಿಧಿಸಿದ ದಂಡದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

    ದೊಡ್ಡ ಮಟ್ಟಕ್ಕೆ ಹರಡಬೇಡಿ: ಹಿಜಾಬ್​ ವಿವಾದ ಕುರಿತ ತುರ್ತು ವಿಚಾರಣೆ ತಿರಸ್ಕರಿಸಿದ ಸುಪ್ರೀಂಕೋರ್ಟ್​

    ಜಿ‌ಟಿಡಿ ಹಣಿಯಲು ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್? ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುವೆ ಎಂದ ದಳಪತಿ

    ಎಚ್‌ಐವಿ ಸೋಂಕು ಕಂಡು ಹಿಡಿದ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮೊಂಟಾಗ್ನಿಯರ್ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts