More

    ತಲೆ ಬೋಳಿಸಿಕೊಳ್ಳುವೆ ಎಂದು ಹೇಳಿದ್ದೆ, ಅಂದು ತಲೆ ತುಂಬ ಕೂದಲಿತ್ತು ಇಂದು ಇಲ್ಲವಾಗಿದೆ: ಎಚ್​ಡಿಕೆ ವ್ಯಂಗ್ಯ

    ಕೋಲಾರ: ರಾಜ್ಯದ ಇವತ್ತಿನ ಪರಿಸ್ಥಿತಿಗೆ ಕಾಂಗ್ರೆಸ್​ ಕಾರಣ. ಮೈತ್ರಿ ಸರ್ಕಾರವನ್ನು ಉಳಿಸಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರು ಹೇಳಿದರು.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್​ ಬಿಟ್ಟು ಸಮವಸ್ತ್ರ ಧರಿಸಿ ಬಂದರೆ ಮಾತ್ರ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದು ಎಂಬ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯಿಸಿ, ಯಾವುದೇ ಸಮಾಜದ ಮಕ್ಕಳಾಗಲಿ ಮುಕ್ತವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರೆಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.

    ಮುಸ್ಲಿಂ ಸಮುದಾಯದವರಿಗೆ ವ್ಯಾಪರಕ್ಕೆ ನಿರ್ಭಂದ ವಿಚಾರವಾಗಿ ಮಾತನಾಡಿ, ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ. ರಾಜ್ಯಕ್ಕೆ ಈ ರೀತಿಯ ಪರಿಸ್ಥಿತಿ ಬರುತ್ತೆ ಎಂದು ನಾನು ಊಹಿಸಿರಲಿಲ್ಲ. ಶಾಲಾ ಮಕ್ಕಳಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.

    ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಆದ್ರೂ ರಾಜ್ಯದ ಇವತ್ತಿನ ಪರಿಸ್ಥಿತಿಗೆ ಅವರೇ ಕಾರಣ. ಮೈತ್ರಿ ಸರ್ಕಾರದ ಉಳಿವಿಗಾಗಿ ನಮಗೆ ಇಷ್ಟವಿಲ್ಲದಿದ್ರು ಪ್ರಯತ್ನ ಪಟ್ಟೆ. ಕಾಂಗ್ರೇಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡಿದ್ದೇವೆ. 2004ರಲ್ಲಿ ಕಾಂಗ್ರೆಸ್​ಗೆ ಬೆಂಬಲ ಕೊಟ್ಟಿದ್ದವು. ಕಳೆದ ವರ್ಷ ಬಿಜೆಪಿಗೆ 104 ಸ್ಥಾನ ಪಡೆಯಲು ಸಿದ್ದರಾಮಯ್ಯ ಕಾರಣ. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎಂಬ ಹೇಳಿಕೆಯಿಂದ ಆ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯ್ತು ಎಂದರು.

    2014 ರಲ್ಲಿ ಅಡಿಪಾಯ ಹಾಕಿ ಇದುವರೆಗೂ ನೀರು ಕೊಟ್ಟಿಲ್ಲ‌. ಇನ್ನೂ 50 ವರ್ಷ ಆದ್ರೂ ರಾಷ್ಟ್ರೀಯ ಪಕ್ಷಗಳಿಂದ ನೀರು ಕೊಡಲು ಆಗಿಲ್ಲ‌. ಅಂದೆ ಒಂದು ವರ್ಷದಲ್ಲಿ ನೀರು ಕೊಟ್ರೆ ತಲೆ ಬೋಳಿಸಿಕೊಳ್ಳುವೆ ಎಂದಿದ್ದೆ. ಅಂದು ತಲೆ ತುಂಬ ಕೂದಲಿತ್ತು, ಇಂದು ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.

    ಎರಡು ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನ ಹಾಳು ಮಾಡುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಬಳಿ ಬೇರೆ ಯಾವುದೆ ವಿಷಯ ಇಲ್ಲ. ಸಿದ್ದರಾಮಯ್ಯ ಅವರನ್ನ ನಂಬಿ ಮುಸಲ್ಮಾನರು ಸಹ ಬೀದಿಗೆ ಬಂದಿದ್ದಾರೆ. ಅವರಲ್ಲೂ ಸಹ ಮರು ಚಿಂತನೆ ಆರಂಭವಾಗಿದೆ ಎಂದರು.

    ಅವಧಿಗೂ ಮುನ್ನ ಚುನಾವಣೆ ನಡೆದ್ರೆ ನಾವು ಸಹ ಚುನಾವಣೆಗೆ ಸಿದ್ಧ. ಇಂದಿನ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಸೈಕಲ್ ಥಾನ್ ವಿಚಾರವಾಗಿ ಮಾತನಾಡಿ, ಕೋಲಾರದಲ್ಲೂ ಕೋಮು ಸಂಘರ್ಷಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಕೋಲಾರ ಶಾಂತಿಯಾಗಿತ್ತು. ಈಗ ಹಾಳು ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು. (ದಿಗ್ವಿಜಯ ನ್ಯೂಸ್​)

    ಸಂಸದೆ ಸುಮಲತಾ ಅಂಬರೀಷ್​ಗೆ ಓಪನ್​ ಚಾಲೆಂಜ್​ ಹಾಕಿದ ಜೆಡಿಎಸ್​ ಶಾಸಕ ಡಿ.ಸಿ. ತಮ್ಮಣ್ಣ

    ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ಒಂದು ಕಂಪನಿಯ ಮ್ಯಾನೇಜರ್..!​

    50 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​: ನಿಶ್ಚಿತಾರ್ಥಕ್ಕೆ ಹೊರಟವರಲ್ಲಿ 7 ಮಂದಿ ಸಾವು, 45 ಮಂದಿ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts