More

    ಸಮಸ್ಯೆ ಬಗೆಹರಿಸುವ ಸೋಗಿನಲ್ಲಿ ಸಿಕ್ಕಸಿಕ್ಕವರಿಗೆ ಪಂಗನಾಮ ಹಾಕ್ತಿದ್ದ ಚಾಲಾಕಿ ಮಹಿಳೆಯರ ಬಂಧನ!

    ಕೊಡಗು: ಜನರ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಶಾಸ್ತ್ರ ಹೇಳುವ ನೆಪದಲ್ಲಿ ಸಾಮಾನ್ಯ ಜನರಿಗೆ ವಂಚನೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಲಕ್ಷ್ಮೀ (22) ಆರ್. ಲಕ್ಷ್ಮೀ(23) ಮತ್ತು ಸುಜಾತಾ(22) ಎಂದು ಗುರುತಿಸಲಾಗಿದೆ. ಇವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಿವಾಸಿಗಳು. ಶಾಸ್ತ್ರ ಹೇಳಿ ಸಮಸ್ಯೆ ಬಗೆಹರಿಸುವ ನೆಪದಲ್ಲಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

    ಇದನ್ನೂ ಓದಿರಿ: ಉತ್ತರಾಖಂಡದ 51 ದೇವಾಲಯ ಸರ್ಕಾರದಿಂದ ಮುಕ್ತ; ನಿರ್ಧಾರ ಪ್ರಕಟಿಸಿದ ಸಿಎಂ ತೀರಥ್ ರಾವತ್

    ಕುಶಾಲನಗರದ ಲಕ್ಷ್ಮೀ ಎಂಬವರ ಮನೆಯಿಂದ 135 ಗ್ರಾಂ ಚಿನ್ನಾಭರಣ, 31,000 ರೂಪಾಯಿ ನಗದು ಪಡೆದು ವಂಚಿಸಿದ್ದ, ಈ ಸಂಬಂಧ ಮೋಸ ಹೋದ ಮಹಿಳೆ ದ ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

    ಈ ವಂಚನೆ ಜಾಲದಲ್ಲಿ ಇನ್ನು ಅನೇಕರು ಇರುವ ಶಂಕೆ ವ್ಯಕ್ತವಾಗಿದ್ದು, ವಂಚಕಿಯರ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. (ದಿಗ್ವಿಜಯ ನ್ಯೂಸ್​)

    ರಾತ್ರೋರಾತ್ರಿ ಸ್ಟಾರ್​ ಆದ ಬಳಿಕ ಅನುಭವಿಸಿದ ನೋವಿನ ಕತೆ ಬಿಚ್ಚಿಟ್ಟ ಆರ್​ಸಿಬಿ ಗರ್ಲ್​..!

    ಪಬ್​ಜಿ ಪಿಶಾಚಿ; ಹೋದೆಯಾ ಅಂದ್ರೆ ಬಂತು ಗವಾಕ್ಷಿಯಿಂದ!

    ಕ್ಯಾಂಡಿ ಕ್ರಶ್​ಗ ಒಂಬತ್ತ ತುಂಬಿ ಹತ್ತರಾಗ ಬಿತ್ತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts