More

    ಕೇರಳ ಮಾಡೆಲ್​ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!

    ಕೊಚ್ಚಿ: ಕೇರಳದ ಇಬ್ಬರು ಮಾಡೆಲ್​ಗಳ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಪಘಾತಕ್ಕೂ ಮುನ್ನ ಹೋಟೆಲ್​ನಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ತುಣುಕುಗಳನ್ನು ಪಡೆಯುವಲ್ಲಿ ಪೊಲೀಸರು ಎಡವಿದ್ದಾರೆ. ಡಿಜೆ ಪಾರ್ಟಿ ಪೋರ್ಟ್​ ಕೊಚ್ಚಿಯ ಹೋಟೆಲ್​ ಒಂದರಲ್ಲಿ ನಡೆದಿತ್ತು. ಮಿಸ್​ ಕೇರಳ ವಿಜೇತರಾಗಿದ್ದ ಮಾಡೆಲ್​ಗಳಿಬ್ಬರು ಕೂಡ ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

    ಪೊಲೀಸರು ಪೋರ್ಟ್​ ಕೊಚ್ಚಿಯ ನಂ.18 ಹೋಟೆಲ್​ ಮೇಲೆ ದಾಳಿ ಮಾಡಿ ಸಿಸಿಟಿವಿಯ ಹಾರ್ಡ್​ ಡಿಸ್ಕ್​ ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಆದಾಗ್ಯೂ ಹಾರ್ಡ್​ ಡಿಸ್ಕ್​ನಿಂದ ಡಿಜೆ ಪಾರ್ಟಿ ದೃಶ್ಯಗಳನ್ನು ಪೊಲೀಸರು ಮರಳಿ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬುಧವಾರ ಮತ್ತೊಮ್ಮೆ ಹೋಟೆಲ್​ ಮೇಲೆ ದಾಳಿ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದರು.

    ಕಾರು ಅಪಘಾತಕ್ಕೂ ಮುನ್ನ ಇಬ್ಬರು ಮಾಡೆಲ್​ಗಳು ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಪಘಾತದ ಬೆನ್ನಲ್ಲೇ ಸಿಸಿಟಿವಿಯ ಹಾರ್ಡ್​ ಡಿಸ್ಕ್​ ಅನ್ನು ತೆಗೆದುಹಾಕಿದ್ದಾರೆಂಬ ಅನುಮೂನ ಮೂಡಿದೆ. ಆದರೂ, ಪೊಲೀಸರಿಗೆ ಕೆಲವೊಂದು ಮಹತ್ವದ ಸುಳಿವುಗಳು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಹೋಟೆಲ್​ ಸಿಬ್ಬಂದಿಯನ್ನು ವಿಚಾರಣೆ ನಡೆಸಲಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

    ಪೋರ್ಟ್​ ಕೊಚ್ಚಿ ಪೊಲೀಸ್​ ಠಾಣೆ ಎದುರೇ ಹೋಟೆಲ್​ ಇದೆ. ಪಾರ್ಟಿ ಮುಗಿಸಿಕೊಂಡು ಅನ್ಸಿ ಕಬೀರ್​, ಅಂಜನಾ ಶಾಜನ್​, ಆಶಿಕ್​ ಮತ್ತು ಅಬ್ದುಲ್​ ರೆಹಮಾನ್ ಅಕ್ಟೋಬರ್​ 31ರಂದು​ ಮನೆಗೆ ಬರುತ್ತಿದ್ದರು. ಈ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಸ್​ ಕೇರಳ ವಿಜೇತರಾದ ಅನ್ಸಿ ಕಬೀರ್​ ಮತ್ತು ಅಂಜನಾ ಶಾಜನ್​ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಶಿಕ್​ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್​ ರೆಹಮಾನ್​ನನ್ನು ಮೊನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ ರೆಹಮಾನ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಭಾರೀ ಮಳೆಯ ನಡುವೆ ಸ್ಮಶಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಗೆ ಹೆಗಲು ಕೊಟ್ಟು ರಕ್ಷಿಸಿದ ಮಹಿಳಾ ಪೊಲೀಸ್​!

    ಬಸ್​ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ! ವಿದ್ಯಾರ್ಥಿಗಳ ಈ ಪಾಡು ನೋಡೋಕಾಗಲ್ಲ

    ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ಯುವ ರೈತ: ಅಂಗಾಗ ದಾನ ಮಾಡಿ ನಾಲ್ವರ ಜೀವ ಉಳಿಸಿದ

    ಇದರಲ್ಲಿ ಕರ್ನಾಟಕ ಮಾದರಿಯಾಗಲಿ ಎಂದರಂತೆ ಮೋದಿ! ಪ್ರಧಾನಿ ಜತೆಗಿನ ಮಾತುಕತೆ ವಿವರ ಬಿಚ್ಚಿಟ್ಟ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts