More

    ಕಾಲುಗಳಿಲ್ಲದೇ ಹುಟ್ಟಿದ ಈ ವಿದ್ಯಾರ್ಥಿಗೆ ಸ್ನೇಹಿತರೇ ಆತ್ಮಬಲ: ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ!

    ಕೊಲ್ಲಂ: ಈ ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಸಂಬಂಧಗಳಲ್ಲಿ ಸ್ನೇಹವೂ ಒಂದು. ಒಳ್ಳೆಯ ಸ್ನೇಹ ಬಳಗವಿದ್ದರೆ ಯಾವುದೇ ಸವಾಲುಗಳನ್ನೂ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಈ ಒಂದು ಘಟನೆಯೇ ತಾಜಾ ಉದಾಹರಣೆಯಾಗಿದೆ.

    ಸ್ನೇಹಿತರು ಅಂದರೆ ಹೇಗಿರಬೇಕು ಎಂಬುದಕ್ಕೆ ಕೇರಳದ ಕಾಲೇಜು ವಿದ್ಯಾರ್ಥಿ ಅಲಿಫ್ ಮೊಹಮ್ಮದ್ ಅವರ ಸ್ನೇಹಿತರು​ ಉತ್ತಮ ಉದಾಹರಣೆಯಾಗಿದ್ದಾರೆ. ಅಲಿಫ್​ಗೆ​ ಹುಟ್ಟುವಾಗಲೇ ಕಾಲುಗಳಿಲ್ಲ. ದೇಹದ ನ್ಯೂನತೆಯೊಂದಿಗೆ ಹೊರ ಜಗತ್ತಿಗೆ ಕಣ್ತೆರೆದ ಅಲಿಫ್​, ಎಂದಿಗೂ ಎದೆಗುಂದಲಿಲ್ಲ. ಕುಟುಂಬದ ಸಾಥ್​ ಒಂದೆಡೆಯಾದರೆ, ಅವರ ಸ್ನೇಹ ಬಳಗವು ಕೂಡ ಅಲಿಫ್​ ಅಂಗವೈಕಲ್ಯವನ್ನು ಮರೆಸುತ್ತಿದ್ದಾರೆ.

    ಕಾಲುಗಳು ಇಲ್ಲದೇ ಇದ್ದರೂ ಆತ ಒಂದು ದಿನವೂ ಕಾಲೇಜಿನಿಂದ ದೂರ ಉಳಿಯದಂತೆ ಅಲಿಫ್​ ಅವರ ಫ್ರೆಂಡ್ಸ್​ ನೋಡಿಕೊಳ್ಳುತ್ತಿದ್ದಾರೆ. ಕೊಲ್ಲಂ ಜಿಲ್ಲೆಯ ಶಾಸ್ತಮಕೋಟದಲ್ಲಿರುವ ಡಿಬಿ ಕಾಲೇಜಿನಲ್ಲಿ ಅಲಿಫ್​ ಬಿ.ಕಾಂ ಓದುತ್ತಿದ್ದಾರೆ. ಅವರ ಇಬ್ಬರು ಫ್ರೆಂಡ್ಸ್​ ಕಾಲೇಜು ಆವರಣದ ಸುತ್ತಲೂ ಅಲಿಫ್​ ಅವರನ್ನು ಹೊತ್ತು ಸಾಗಿಸುತ್ತಾರೆ. ಎಲ್ಲಿಗೆ ಹೋಗಬೇಕಾದರೂ ಇಬ್ಬರು ಫ್ರೆಂಡ್ಸ್​ ಅಲಿಫ್​ಗೆ ನೆರವಾಗುತ್ತಾರೆ.

    ಅಲಿಫ್​ ಅವರನ್ನು ಅವರ ಇಬ್ಬರು ಫ್ರೆಂಡ್ಸ್​ ಸಾಗಿಸುವ ವಿಡಿಯೋವನ್ನು ವೆಡ್ಡಿಂಗ್​ ಫೋಟೋಗ್ರಾಫರ್​ ಒಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ವೀಡಿಯೊದಲ್ಲಿ ಅಲಿಫ್​ ತನ್ನ ಸಹಪಾಠಿಗಳಾದ ಅರ್ಚನಾ ಮತ್ತು ಆರ್ಯ ತೋಳುಗಳನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ.

    ವಿಡಿಯೋ ಸೆರೆಹಿಡಿದ ಫೋಟೋಗ್ರಾಫರ್​ ಜಗತ್​ ತುಳಸೀಧರನ್​ ಮಾತನಾಡಿ, ಅದೊಂದು ಉತ್ತಮ ಕ್ಷಣವಾಗಿತ್ತು. ಕಾಲೇಜಿನ ಒಳಗಿರುವ ಪ್ರತಿಯೊಬ್ಬರಿಗೂ, ಇದು ಸಾಮಾನ್ಯ ದೃಶ್ಯವಾಗಿದೆ. ಏಕೆಂದರೆ ಅಲಿಫ್ ಅನ್ನು ಯಾವಾಗಲೂ ಅವನ ಒಬ್ಬ ಅಥವಾ ಇನ್ನೊಬ್ಬ ಸ್ನೇಹಿತರು ಹೊತ್ತುಕೊಂಡು ಸಾಗುತ್ತಿರುತ್ತಾರೆ.

    ತುಳಸೀಧರನ್ ಅವರು ಕಾಲೇಜಿನಲ್ಲಿ ನಡೆದ ಯುವಜನೋತ್ಸವದಲ್ಲಿ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದಾಗ ಮೊಹಮ್ಮದ್ ಅವರನ್ನು ಅವರ ಸ್ನೇಹಿತರು ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಿದರು ಮತ್ತು ಆ ಕ್ಷಣವನ್ನು ತ್ವರಿತವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದರು. ಬಳಿಕ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. (ಏಜೆನ್ಸೀಸ್​)

    ವಿಜಯನಗರದಲ್ಲಿ ಎಸಿ ಸ್ಫೋಟ: ಗಂಡ-ಹೆಂಡತಿ, ಇಬ್ಬರು ಮಕ್ಕಳು ಮಲಗಿದ್ದಲ್ಲೇ ದುರಂತ ಸಾವು

    ಬಿಜೆಪಿ ಶಾಸಕರ ವಿರುದ್ಧ ಪ್ರತಿಭಟನೆ: ವರದಿ ಮಾಡಿದ ಪತ್ರಕರ್ತ ಸೇರಿ 8 ಮಂದಿಯ ಬಟ್ಟೆ ಬಿಚ್ಚಿಸಿದ ಪೊಲೀಸರು!

    ಬೈಕ್‌ನಲ್ಲಿ ಮೊಬೈಲ್ ಹಾಗೂ ಹಗ್ಗವನ್ನಿಟ್ಟು ಕೃಷ್ಣಾ ನದಿಗೆ ಹಾರಿ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts