More

    ಅಂಗಾಂಗ ದಾನದ ಬಗ್ಗೆ ನಿರ್ಭಯಾ ಅಪರಾಧಿಗಳ ಮನವೊಲಿಸಲು ಭೇಟಿಗೆ ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಕೀಲರು

    ನವದೆಹಲಿ: ವಕೀಲ ಆರ್​. ಕಪೂರ್​ ಎಂಬುವವರು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಭೇಟಿಯಾಗಲು ಅನುಮತಿ ಕೋರಿ ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ನಿರ್ಭಯಾ ಪ್ರಕರಣದ ಅಪರಾಧಿಗಳನ್ನು 22ರಂದು ಗಲ್ಲಿಗೇರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನದ ಬಗ್ಗೆ ಅವರ ಮನವೊಲಿಸಲು ತೆರಳಲು ಅನುಮತಿ ಕೋರಲಾಗಿದೆ.

    ರ‍್ಯಾಕೊ ಎಂಬ ಎನ್​ಜಿಒ ಸಂಸ್ಥೆ ಪರ ವಕೀಲರಾದ ಆರ್​. ಕಪೂರ್​ ಅವರು ಈ ಮೊದಲು ತಿಹಾರ್​ ಜೈಲಿಗೆ ತೆರಳಿ ಅಧಿಕಾರಿಗಳಿಗೆ ಅಪರಾಧಿಗಳ ಭೇಟಿ ಬಗ್ಗೆ ಮನವಿ ಮಾಡಿದ್ದರು. ಆದರೆ ತಿಹಾರ್​ ಅಧಿಕಾರಿಗಳು ಕೋರ್ಟ್​ ಆದೇಶ ಬೇಕು ಎಂದ ಹಿನ್ನೆಲೆಯಲ್ಲಿ ಪಟಿಯಾಲ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣ ನಮ್ಮ ಜೀವಿತಾವಧಿಯನ್ನು ಕೊಲ್ಲುತ್ತಿರುವಾಗ ಮತ್ತೆ ನಮಗೆ ಮರಣದಂಡಣೆ ಶಿಕ್ಷೆ ಏಕೆ? ಮರಣದಂಡಣೆ ಶಿಕ್ಷೆಯಿಂದ ಮುಕ್ತಿ ನೀಡುವಂತೆ ನಿರ್ಭಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ

    ನಿರ್ಭಯಾ ಪ್ರಕರಣದ ನಾಲ್ವರು ಅರೋಪಿಗಳಲ್ಲಿ ಒಬ್ಬನಾದ ಅಕ್ಷಯ್​ಸಿಂಗ್​ ಠಾಕೂರ್​ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೀಗೆ ಮನವಿ ಮಾಡಿದ್ದ.

    ದೆಹಲಿಯಲ್ಲಿ ವಾಯು ಮತ್ತು ನೀರಿನ ಮಾಲಿನ್ಯದಿಂದಾಗಿ ಆಯುಷ್ಯ ಕಡಿಮೆಯಾಗುತ್ತಿದೆ. ಪ್ರಕರಣದಲ್ಲಿ ತಾನು ತಪ್ಪಾಗಿ ಸಿಲುಕಿದ್ದೇನೆ ಎಂದು ಅಕ್ಷಯ್ ಆ ಅರ್ಜಿಯಲ್ಲಿ ಉಲ್ಲೇಖಿಸಿದ್ದ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts