More

    ಪವನ್ ಒಡೆಯರ್ ನಿರ್ಮಾಣದ ಡೊಳ್ಳು’ ಚಿತ್ರಕ್ಕೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ 5 ಪ್ರಶಸ್ತಿಗಳು!

    ಗೋವಾ: 52ನೇ ಭಾರತ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ ಗೋವಾದಲ್ಲಿ ನಡೆಯುತ್ತಿದೆ. ಈ ಸಿನಿಮಾ ಉತ್ಸವದಲ್ಲಿ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗಿದ್ದ ‘ಡೊಳ್ಳು’ ಸಿನಿಮಾಗೆ ಅತ್ಯತ್ತಮ ಸಿನಿಮಾ ಪ್ರಶಸ್ತಿ ನೀಡಿ, ಸನ್ಮಾನಿಸಲಾಗಿದೆ.

    ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರವು ಇನೊವೆಟಿವ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು. ಈ ಹಿಂದೆ ಢಾಕಾ ಸಿನಿಮಾ ಉತ್ಸವದಲ್ಲೂ ಈ ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಜೊತೆಗೆ ಬೋಸ್ಟನ್ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ, ಕಲೈಡೊ ಚಿತ್ರೋತ್ಸವದಲ್ಲಿ ಒಂದು ಪ್ರಶಸ್ತಿ ಸಹ ಮುಡಿಗೇರಿಸಿಕೊಂಡಿದೆ ಈ ಸಿನಿಮಾ ತಂಡ.

    ಪವನ್ ಒಡೆಯರ್ ನಿರ್ಮಾಣದ ಡೊಳ್ಳು' ಚಿತ್ರಕ್ಕೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ 5 ಪ್ರಶಸ್ತಿಗಳು!

    ಪವನ್ ಒಡೆಯರ್ ಅವರು ನಿರ್ಮಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹೊಸಬರಾದ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಡೆಯರ್ ಮೂವೀಸ್’ನಲ್ಲಿ ನಿರ್ಮಾಣವಾದ ಈ ಸಿನಿಮಾಗೆ 5ಕ್ಕೂ ಹೆಚ್ಚು ಗೌರವಯುತ ಪ್ರಶಸ್ತಿಗಳು ಬಂದಿರುವುದು ಪವನ್ ಅವರಿಗೆ ಅತ್ಯಂತ ಸಂತಸ ತಂದಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಗೋವಾದಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಿನಿಮಾ ತಂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಖುಷಿಯ ವಿಚಾರ ಹಂಚಿಕೊಂಡಿದೆ.

    ನಮ್ಮ ನಾಡಿನ ಜನಪದ ಕಲೆಯೊಂದನ್ನು ಈಗಿನ ಜನರೇಷನ್ ಮಕ್ಕಳಿಗೆ ಪರಿಚಯಿಸುವುದರ ಸಲುವಾಗಿ, ‘ಡೊಳ್ಳು’ ಸಿನಿಮಾ ಮಾಡಲಾಗಿದೆ. ಇನ್ನು ಕೇವಲ ಮನರಂಜನೆ ಅಲ್ಲದೇ ಈ ಸಿನಿಮಾದಲ್ಲಿ ಒಂದೊಳ್ಳೆ ಮೆಸೆಜ್ ಸಹ ಇದೆ. ಹೌದು, ಜನಪದ ಕಲೆಯಾದ ‘ಡೊಳ್ಳು’ ಕಲೆ ಸದ್ಯ ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಇದೇ ಕಲೆಯನ್ನು ನಂಬಿಕೊಂಡು ಬದುಕುತ್ತಿರುವ ಕಲಾವಿದರ ಕಷ್ಟಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ. ಇನ್ನು 2ನೇ ಭಾರತ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಹಲವಾರು ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಬೇರೆ ಇನ್ಯಾವ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ಲಭಿಸಲಿವೆ ಎಂದು ಕಾದುನೋಡಬೇಕಿದೆ.

    ಬದಲಾದ ಸಮಂತಾ ನಿಲುವು: ಮಾಜಿ ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ರಾ ಸೌತ್​ ಬ್ಯೂಟಿ!

    LLB ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್​: ಠಾಣಾಧಿಕಾರಿಯ ಕರಾಳ ಮುಖ ಮತ್ತೊಮ್ಮೆ ಬಯಲು..!

    ಮೇಕೆ ಕಳ್ಳರಿಂದ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣ: ಬಂಧಿತ ಮೂವರಲ್ಲಿ ಇಬ್ಬರ ವಯಸ್ಸು 9 ಮತ್ತು 14

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts