More

    ಕಟ್ಟಿಗೆ ತರಲು ಮನೆಯ ಹಿಂಭಾಗಕ್ಕೆ ಹೋದವಳ ಸಾವು: ಮುಸುಕುಧಾರಿ ಯುವಕರಿಬ್ಬರು ವಿಷ ಕುಡಿಸಿದ ಆರೋಪ

    ಕಲಬುರಗಿ: ಅನುಮಾನಾಸ್ಪದ ರೀತಿಯಲ್ಲಿ ಅಪ್ರಾಪ್ತೆಯೊಬ್ಬಳು ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ಪಾಣೆಗಾಂವ್​ ಗ್ರಾಮದಲ್ಲಿ ನಡೆದಿದೆ.

    ಪಾಯಲ್ (15) ಮೃತ ಹುಡುಗಿ. ನಿನ್ನೆ (ಅ.8) ಸಂಜೆ ಕಟ್ಟಿಗೆ ತರಲೆಂದು ಮನೆಯ ಹಿಂಭಾಗಕ್ಕೆ ತೆರಳಿದಾಗ ಹುಡುಗಿ ಮೃತಪಟ್ಟಿದ್ದಾಳೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಇಬ್ಬರು ಯುವಕರು ವಿಷ ಕುಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪಾಣೆಗಾಂವ್ ಗ್ರಾಮದ ಸುನೀಲ್ ಮತ್ತು ಆತನ ಸ್ನೇಹಿತ ವಿಷ ಕುಡಿಸಿದ್ದಾರೆಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಫರಹತಬಾದ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭವಾಗಿದ್ದು, ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. (ದಿಗ್ವಿಜಯ ನ್ಯೂಸ್​)

    ಸುಶಾಂತ್‌ಗೆ ಡ್ರಗ್ಸ್ ಕೊಟ್ಟವನೇ ಆರ್ಯಂಗೂ ನೀಡಿದ್ನಾ? ನಿರ್ಮಾಪಕನ ಮನೆ ಮೇಲೆ ರೇಡ್‌!

    ಸಿಲಿಕಾನ್ ಸಿಟಿಯಲ್ಲಿ ವಿಜಯಾನಂದ ಚಿತ್ರದ ಭರ್ಜರಿ ಆಡಿಷನ್: ಮಾಸಾಂತ್ಯದಿಂದ ಶೂಟಿಂಗ್​ ಶುರು

    ಕಾಮಿಡಿ ಮಾಡಿ ಬೇಜಾರಿಲ್ಲ ಆದ್ರೆ ಟ್ರೋಲ್​ ಮಾಡಿ ಕುಟುಂಬಕ್ಕೆ ನೋವು ಕೊಡ್ಬೇಡಿ: ರವಿಯ ನೋವಿನ ಮನವಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts