ಬೆಂಗಳೂರು: ನಟಿ ಮೇಘನಾ ಕುಟುಂಬದಲ್ಲಿಂದು ಸಂಭ್ರಮ ಮನೆ ಮಾಡಿದೆ. ಏಕೆಂದರೆ ಇಂದು ಜ್ಯೂನಿಯರ್ ಚಿರುವಿನ ನಾಮಕರಣ. ದಿವಂಗತ ನಟ ಚಿರಂಜೀವಿ ಸರ್ಜಾ ಪುತ್ರನ ಹೆಸರು ಬಹಿರಂಗವಾಗಿದೆ.
ಜ್ಯೂನಿಯರ್ ಚಿರುಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂಭ್ರಮದಲ್ಲಿ ಸರ್ಜಾ ಕುಟುಂಬ ಭಾಗಿಯಾಗಿದೆ.
ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಮೇಘನಾ ರಾಜ್ ಅಜ್ಜಿ ಲಕ್ಷ್ಮಿ ದೇವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. 10 ತಿಂಗಳ ನಂತರ ಮಗನಿಗೆ ನಾಮಕರಣ ಮಾಡಲಾಗಿದೆ. ನಗರದ ಚಾನ್ಸರಿ ಪೆವಿಲಿಯನ್ ಹೊಟೆಲ್ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ. ಇಷ್ಟು ದಿನ ಜ್ಯೂ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿ ಇನ್ಮುಂದೆ ರಾಯನ್ ರಾಜ್ ಸರ್ಜಾ ಹೆಸರಿನಿಂದ ಚಿರಪರಿಚಿತವಾಗಲಿದೆ.
ಅಂದಹಾಗೆ ಸಂಸ್ಕೃತದಲ್ಲಿ ರಾಯನ್ ಅಂದ್ರೆ ಯುವರಾಜ ಎಂಬ ಅರ್ಥ ಬರುತ್ತದೆ. ನಾಮಕರಣ ಹಿನ್ನೆಲೆಯಲ್ಲಿ ಚಿರು ಕುಟುಂಬದಲ್ಲಿ ಸಂತೋಷ ಇಮ್ಮಡಿಯಾಗಿದ್ದು, ಚಿರು ಮಗುವಿಗೆ ಬಂಧುಬಳಗದವರು ಶುಭ ಹಾರೈಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಕಿಚ್ಚನ ಕಟೌಟ್ ಮುಂದೆ ಕೋಣ ಕಡಿದ ಪ್ರಕರಣ: ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ
ಐಡಾ ಚಂಡಮಾರುತ ಆರ್ಭಟಕ್ಕೆ ನ್ಯೂಯಾರ್ಕ್ನಲ್ಲಿ 44 ಮಂದಿ ದಾರುಣ ಸಾವು..!
ಹಿಂಪಡೆದ ಕ್ರಿಮಿನಲ್ ಕೇಸ್ಗಳ ವಿವರ ಕೇಳಿದ ಹೈಕೋರ್ಟ್: ನಿರಾಳರಾಗಿದ್ದ ಜನಪ್ರತಿನಿಧಿಗಳಿಗೆ ಮತ್ತೆ ಸಂಕಷ್ಟ