More

    ಚಿನ್ನಾಭರಣ ಮಳಿಗೆ ದೋಚಿ ರಾಜಸ್ಥಾನದಲ್ಲಿ ಅಡಗಿದ್ದ ದರೋಡೆಕೋರರ ಹೆಡೆಮುರಿ ಕಟ್ಟಿದ ಬೆಂಗ್ಳೂರು ಪೊಲೀಸರು!

    ಬೆಂಗಳೂರು: ಆಭರಣ ಮಳಿಗೆಯಲ್ಲಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸುವಾಗ ಗುಂಡಿನ ಚಕಮಕಿ ನಡೆದಿದೆ.

    ಪೊಲೀಸರ ಮೇಲೆಯೇ ದರೋಡೆಕೋರರು ಗುಂಡು ಹಾರಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳೀಯ ಖಾಕಿ ಪಡೆಯ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಮೈಲಸಂದ್ರದಲ್ಲಿ ರಾಮದೇವ್ ಬ್ಯಾಂಕರ್ಸ್‌ ಆ್ಯಂಡ್ ಜುವೆಲರ್ಸ್‌ ಮಳಿಗೆ ಸೋಮವಾರ ಬೆಳಗ್ಗೆ ನಾಲ್ವರು ಗ್ರಾಹಕರ ಸೋಗಿನಲ್ಲಿ ಹೋಗಿ ಮಳಿಗೆ ಮಾಲೀಕ ಧರ್ಮೇಂದ್ರ ಎಂಬಾತನಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದರು. ಕೈ ಕಾಲು ಕಟ್ಟಿ ಹಾಕಿ ಲಾಕರ್‌ನಲ್ಲಿದ್ದ 3.5 ಕೆ.ಜಿ ಚಿನ್ನದ ಆಭರಣಗಳು, 30 ಕೆಜಿ ಬೆಳ್ಳಿ ವಸ್ತುಗಳು, 80 ಸಾವಿರ ರೂ. ದೋಚಿದ್ದರು. ಈ ಕುರಿತು ತನಿಖೆ ಕೈಗೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ರಾಜಸ್ಥಾನದಲ್ಲಿ ಆರೋಪಿಗಳು ಅಡಗಿರುವ ವಿಷಯ ತಿಳಿದು ಬೆನ್ನತ್ತಿದ್ದರು. ಸ್ಥಳೀಯ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ಕೈಗೊಂಡಾಗ ಉದಯಪುರದಲ್ಲಿ ಆರೋಪಿಗಳನ್ನು ಹಿಡಿಯಲು ಹೋದಾಗ ಖಾಕಿ ಪಡೆ ಮೇಲೆ ಗುಂಡು ಹಾರಿಸಿದ್ದಾರೆ.

    ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರು ವಶಕ್ಕೆ ಪಡೆದು ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಸ್ಥಳೀಯ ಠಾಣೆಗೆ ಹಾಜರುಪಡಿಸಿ ಬೆಂಗಳೂರಿಗೆ ಕರೆತರುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಂದು ಪಂಜಾಬ್​ ಸಿಎಂ ಮದುವೆ: ವಧು ಗುರುಪ್ರೀತ್​ ಕೌರ್​ ವಯಸ್ಸೆಷ್ಟು? ಇಲ್ಲಿದೆ ಅವರ ಸಂಪೂರ್ಣ ಪರಿಚಯ​

    ಶಾಸಕ ಜಮೀರ್ ಆಸ್ತಿ ಮೌಲ್ಯಮಾಪನ; ಆದಾಯಕ್ಕಿಂತ ಶೇ. 2034 ಹೆಚ್ಚು ಆಸ್ತಿ?

    ಬಿ ಸ್ವತ್ತುಗಳಿಗೆ ಎರಡು ತಿಂಗಳಲ್ಲಿ ಎ ಖಾತೆ ಪರಿವರ್ತನೆ ಭಾಗ್ಯ: ರಾಜ್ಯಾದ್ಯಂತ ಲಕ್ಷಾಂತರ ಮಂದಿಗೆ ಅನುಕೂಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts