More

    PHOTO! ಹಾಟ್​​​ ಅವತಾರದಲ್ಲಿ ದೀಕ್ಷಾ ಸೇಠ್​: ಬಿಕಿನಿ ಫೋಟೋ ಹರಿಬಿಟ್ಟ ಜಗ್ಗುದಾದನ ಬೆಡಗಿ

    ಹೈದರಾಬಾದ್​: ನಟಿ ದೀಕ್ಷಾ ಸೇಠ್​ ಅವರು ಕನ್ನಡದಲ್ಲಿ ನಟಿಸಿದ್ದು ಒಂದೇ ಸಿನಿಮಾ ಆದರೂ ಕನ್ನಡಿಗರಿಗೆ ತುಂಬಾ ಪರಿಚಿತರಾಗಿದ್ದಾರೆ. ಏಕೆಂದರೆ, ಮೊದಲ ಚಿತ್ರದಲ್ಲೇ ನಟ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆ ಚಿತ್ರದ ಹೆಸರು ಜಗ್ಗುದಾದ. ಇದೀಗ ತಮ್ಮ ಹಾಟ್​ ಅವತಾರದಿಂದ ದೀಕ್ಷಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ದೀಕ್ಷಾ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. ತೆಲುಗಿನಲ್ಲಿ 6, ಹಿಂದಿಯಲ್ಲಿ 3 ಹಾಗೂ ತಮಿಳು ಮತ್ತು ಕನ್ನಡದಲ್ಲಿ ತಲಾ ಒಂದೊಂದು ಸಿನಿಮಾಗಳಲ್ಲಿ ದೀಕ್ಷಾ ನಟಿಸಿದ್ದಾರೆ. ಸದ್ಯ ಸಿನಿಮಾ ಅವಕಾಶಗಳಿಲ್ಲದೆ, ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೂ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ದೀಕ್ಷಾ ತಮ್ಮ ಬೋಲ್ಡ್​ ಫೋಟೋಗಳನ್ನು ಆಗಾಗ ಹರಿಬಿಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

    ಈ ಬಾರಿ ದೀಕ್ಷಾ, ತಮ್ಮ ಬಿಕಿನಿ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದು, ಜಾಲತಾಣದಲ್ಲಿ ಕಿಚ್ಚು ಹಚ್ಚಿದ್ದಾರೆ. ಫೋಟೋಗೆ ಬಿಕಿನಿ ಬಮ್​ ಎಂದು ಅಡಿಬರಹ ನೀಡಿದ್ದಾರೆ. ಸಿನಿಮಾದಿಂದ ದೂರ ಉಳಿದಿದ್ದರೂ ತಮ್ಮ ಗ್ಲಾಮರ್​ ಅನ್ನು ಹಾಗೇ ಉಳಿಸಿಕೊಂಡಿರುವ ದೀಕ್ಷಾ, ಎರಡನೇ ಇನ್ನಿಂಗ್ಸ್​ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ. ತಾವು ನಟಿಸಿದ ಸಿನಿಮಾಗಳಲ್ಲಿಯೂ ದೀಕ್ಷಾ, ತಮ್ಮ ಬೋಲ್ಡ್​ ನಟನೆಯಿಂದಲೇ ಸುದ್ದಿ ಮಾಡಿದ್ದಾರೆ.

    ದೀಕ್ಷಾ ಅವರ ಬಿಕಿನಿ ಫೋಟೋಗೆ ಸಾವಿರಾರು ಲೈಕ್ಸ್​ಗಳು ಹರಿದುಬಂದಿವೆ. ಅವರ ಮೈಮಾಟಕ್ಕೆ ಸೋತಿರುವ ಅಭಿಮಾನಿಗಳು, ನಿಮ್ಮ ಲುಕ್​ ಸಖತ್ತಾಗಿದೆ. ತುಂಬಾ ಹಾಟ್​ ಆಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ, ಮತ್ತೆ ಸಿನಿಮಾ ಕಡೆ ಬನ್ನಿ ಎಂದು ಮನವಿ ಮಾಡಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ದೀಕ್ಷಾ ಅವರು ಕೊನೆಯದಾಗಿ ಕಾಣಸಿಕೊಂಡ ಸಿನಿಮಾ ಸಾತ್​ ಕದಮ್​. ಇದು 2016ರಲ್ಲಿ ಬಿಡುಗಡೆಯಾಯಿತು. (ಏಜೆನ್ಸೀಸ್​)

    ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

    ಆಪ್ತೆಯ ಮನೆಯಲ್ಲಿ 20 ಕೋಟಿ ನಗದು ಪತ್ತೆ: ಇಡಿ ಅಧಿಕಾರಿಗಳಿಂದ ಬಂಗಾಳ ಸಚಿವನ ಬಂಧನ

    ಮೀನುಗಾರನ ಬಾಳಲ್ಲಿ ಭಾಗ್ಯದ ಬಾಗಿಲು ತೆರೆದ 32 ಕೆಜಿ ಗಾತ್ರದ ಮೀನು: ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts