More

    ಇಸ್ರೋದಿಂದ ಅತ್ಯಂತ ಚಿಕ್ಕ ರಾಕೆಟ್​ ಉಡಾವಣೆ: 750 ಶಾಲಾಮಕ್ಕಳು ನಿರ್ಮಿಸಿದ ಉಪಗ್ರಹ ಹೊತ್ತ ಸಾಗಿದ SSLV-D1

    ವಿಶಾಖಪಟ್ಟಣ: ಭಾರತೀಯ ಬಾಹಾಕ್ಯಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ತನ್ನ ಮೊದಲ ಅತ್ಯಂತ ಚಿಕ್ಕದಾದ ರಾಕೆಟ್​ ಅನ್ನು ಭಾನುವಾರ (ಆ. 7) ಬೆಳಗ್ಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿತು.

    ಎಸ್​ಎಸ್​ಎಲ್​-ಡಿ1 ಹೆಸರಿನ ಚಿಕ್ಕ ರಾಕೆಟ್,​ ಭೂ ವೀಕ್ಷಣೆ ಉಪಗ್ರಹ (ಇಒಎಸ್​-02) ಮತ್ತು ವಿಧ್ಯಾರ್ಥಿ ನಿರ್ಮಿತ ಉಪಗ್ರಹ ಅಜಾದಿಸ್ಯಾಟ್​ ಅನ್ನು ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಹೊತ್ತು ನಭಕ್ಕೆ ಜಿಗಿಯಿತು.

    ವಿಶೇಷವೇನೆಂದರೆ, ಇಸ್ರೋ ಇದೇ ಮೊದಲ ಬಾರಿಗೆ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ದಿಂದ ಸಣ್ಣ ರಾಕೆಟ್​ ಅನ್ನು ಉಡಾವಣೆ ಮಾಡಿದೆ, ಇದನ್ನು ಭೂಮಿಯ ಕಡಿಮೆ ಕಕ್ಷೆಯಲ್ಲಿ ಉಪಗ್ರಹಗಳನ್ನು ನಿಯೋಜಿಸಲು ಬಳಸಲಾಗುತ್ತದೆ.

    ಸ್ವಾತಂತ್ರ್ಯ ದಿನದ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 750 ಶಾಲೆ ಬಾಲಕಿಯರು ನಿರ್ಮಿಸಿದ ಉಪಗ್ರಹವನ್ನು ಎಸ್​ಎಸ್​ಎಲ್​-ಡಿ1 ಹೊತ್ತು ಸಾಗಿದೆ. ಎಸ್​ಎಸ್​ಎಲ್​ವಿ 34 ಮೀ. ಎತ್ತರವಾಗಿದ್ದು, ಪಿಎಸ್​ಎಲ್​ವಿ ಗಿಂತ ಸುಮಾರು 10 ಮೀ ಕಡಿಮೆ ಇದೆ. ಪಿಎಸ್​ಎಲ್​ವಿಯ 2.8 ಮೀಟರ್‌ಗಳಿಗೆ ಹೋಲಿಸಿದರೆ ಎರಡು ಮೀಟರ್‌ಗಳಷ್ಟು ವಾಹನದ ವ್ಯಾಸವನ್ನು ಹೊಂದಿದೆ.

    ಎಸ್‌ಎಸ್‌ಎಲ್‌ವಿ 120 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿಯನ್ನು ಹೊಂದಿದ್ದರೆ, ಪಿಎಸ್‌ಎಲ್‌ವಿ 320 ಟನ್‌ಗಳನ್ನು ಹೊಂದಿದೆ, ಇದು 1,800 ಕೆಜಿಯಷ್ಟು ಪೇಲೋಡ್‌ಗಳನ್ನು ಸಾಗಿಸಬಲ್ಲದು. (ಏಜೆನ್ಸೀಸ್​)

    ಬಿಗ್​ಬಾಸ್​​​ ಒಟಿಟಿಗೆ ಚಾಲನೆ; ಆರ್ಯವರ್ಧನ್​, ರೂಪೇಶ್ ಶೆಟ್ಟಿ​, ಸೋನು ಗೌಡ ಪ್ರವೇಶ..

    ವಿಡಿಯೋದಲ್ಲಿ ಕಣ್ಣೀರಿಡುತ್ತಾ ಗಂಡನ ಕರಾಳ ಮುಖ ಬಿಚ್ಚಿಟ್ಟು ಅಮೆರಿಕದಲ್ಲಿ ಸಾವಿನ ಹಾದಿ ಹಿಡಿದ ಭಾರತೀಯ ಮಹಿಳೆ

    ಇಷ್ಟು ದಿನ ನನ್ಗೆ ನಿತ್ಯಾ ಬೇಕೇ ಬೇಕು ಅಂತಿದ್ದ ಯುವಕ ಈಗ ಆಕೆಯ ಆ ಒಂದು ಮಾತಿಗೆ ಕೊಟ್ಟಿದ್ದು ಖಡಕ್​ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts