More

    ರಾಜಸ್ಥಾನ ವಿರುದ್ಧ 3 ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನ ಬಹುದೊಡ್ಡ ದಾಖಲೆ ಮುರಿದ ಹರ್ಷಲ್​ ಪಟೇಲ್!​ ​

    ದುಬೈ: ಸರ್ವಾಂಗೀಣ ನಿರ್ವಹಣೆ ಮೂಲಕ ಗಮನಸೆಳೆದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು.

    ದುಬೈ ಸ್ಟೇಡಿಯಂನಲ್ಲಿ ಬುಧವಾರ ನಡೆದ ಕಾದಾಟದಲ್ಲಿ ವಿರಾಟ್ ಕೊಹ್ಲಿ ಬಳಗ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಲೀಗ್‌ನಲ್ಲಿ 7ನೇ ಜಯ ದಾಖಲಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ.

    ವಿಶೇಷವೆಂದರೆ, ಪ್ರಸ್ತುತ ಪರ್ಪಲ್​ ಕ್ಯಾಪ್​ ಹೊಂದಿರುವ ಆರ್​ಸಿಬಿ ಬೌಲರ್​ ಹರ್ಷಲ್​ ಪಟೇಲ್​, ಐಪಿಎಲ್​ ಇತಿಹಾಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಿಮ ಓವರ್​ನಲ್ಲಿ ಮೂರು ವಿಕೆಟ್​ ಕಬಳಿಸುವ ಮೂಲಕ ಐಪಿಎಲ್​ ಸೀಸನ್​ ಒಂದರಲ್ಲಿ ಹೆಚ್ಚು ವಿಕೆಟ್​ ಪಡೆದ ಅನ್​ಕ್ಯಾಪ್ಡ್​ ಪ್ಲೇಯರ್​ (ಏಕದಿನ, ಟಿ20, ಟೆಸ್ಟ್​ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸೀಸನ್​ನಲ್ಲಿ ಹರ್ಷಲ್​ ಪಟೇಲ್​ 11 ಪಂದ್ಯಗಳಲ್ಲಿ 26 ವಿಕೆಟ್​ ಕಬಳಿಸಿದ್ದಾರೆ.

    ಈ ಹಿಂದೆ ತಮ್ಮದೇ ತಂಡದ ಸಹ ಆಟಗಾರ ಯಜುವೇಂದ್ರ ಚಹಾಲ್​ ಈ ಸಾಧನೆ ಮಾಡಿದ್ದರು. 2015 ಐಪಿಎಲ್​ ಸೀಸನ್​ನಲ್ಲಿ ಚಹಾಲ್​ 23 ವಿಕೆಟ್​ ಕಬಳಿಸಿದ್ದರು. ದೆಹಲಿ ಕ್ಯಾಪಿಟಲ್ಸ್‌ನಿಂದ ಆರ್‌ಸಿಬಿ ತಂಡ ಸೇರಿರುವ ಹರ್ಷಲ್‌, ಗೇಮ್​ ಚೇಂಜರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬುಧವಾರ ರಾಜಸ್ಥಾನ ರಾಯಲ್ಸ್​ ವಿರುದ್ಧ ಮೂರು ವಿಕೆಟ್ ಕಬಳಿಸುವುದರೊಂದಿಗೆ ಹರ್ಷಲ್ ಪಟೇಲ್, ಒಂದು ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆರ್‌ಸಿಬಿ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.

    ಹರ್ಷಲ್ ಈ ವರ್ಷದ ಐಪಿಎಲ್‌ನಲ್ಲಿ ಕೊಹ್ಲಿಯ ನೆಚ್ಚಿನ ಬೌಲರ್ ಆಗಿದ್ದಾರೆ. 30 ವರ್ಷದ ಅವರು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್​ ಪಡೆದಿದ್ದರು. ತಮ್ಮ ಬೌಲಿಂಗ್​ ದಾಳಿಯನ್ನು ಹರ್ಷಲ್​ ಹೀಗೆ ಮುಂದುವರಿಸಿದರೆ, ಐಪಿಎಲ್​ ಸೀಸನ್​ ಒಂದರಲ್ಲಿ ಅತಿಹೆಚ್ಚು ವಿಕೆಟ್​ ಪಡೆದ ಆಟಗಾರನೆಂಬ ದಾಖಲೆ ಬರೆದಿರುವ ಡ್ವೈನ್​ ಬ್ರಾವೋ ದಾಖಲೆಯನ್ನು ಮುರಿಯಬಹುದು.

    2013ರ ಐಪಿಎಲ್​ ಸೀಸನ್​ನಲ್ಲಿ ಸಿಎಸ್​ಕೆ ಪರ ಡ್ವೈನ್​ ಬ್ರಾವೋ 32 ವಿಕೆಟ್​ ಪಡೆದಿದ್ದರು. (ಏಜೆನ್ಸೀಸ್​)

    ರಾಯಲ್ಸ್ ಎದುರು ಸುಲಭ ಜಯ ಸಾಧಿಸಿದ ಆರ್‌ಸಿಬಿ, ಪ್ಲೇಆಫ್ ಹಂತ ಮತ್ತಷ್ಟು ಸನಿಹ

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಬಿಜೆಪಿ ಮಾಜಿ ಶಾಸಕರ ವಿವಾದಾತ್ಮಕ ಹೇಳಿಕೆ

    ಸಮಂತಾರ ಈ ನಡೆಯಿಂದ ಅಭಿಮಾನಿಗಳು ಫುಲ್​ ಖುಷ್! ಮನಸ್ಸು ಬದಲಿಸಿದ್ರಾ ಸೌತ್​ ಬ್ಯೂಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts