More

    ಇನ್ಫೋಸಿಸ್​ ಕಂಪನಿ ಹೆಸರಲ್ಲಿ ಸೈಬರ್​ ಖದೀಮರಿಂದ ಲಕ್ಷಾಂತರ ರೂಪಾಯಿ ವಂಚನೆ

    ಬೆಂಗಳೂರು: ಪ್ರತಿಷ್ಠಿತ ಇನ್ಫೋಸಿಸ್​ ಕಂಪನಿ ಹೆಸರಲ್ಲಿ ಸೈಬರ್​ ಖದೀಮರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಇನ್ಫೋಸಿಸ್​ನಿಂದ ಜಾಬ್ ಆಫರ್ ಎಂದು ಕರೆ ಮಾಡಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಇನ್ಫೋಸಿಸ್ ಹೆಸರು ಕೇಳಿದ ತಕ್ಷಣ ಫುಲ್ ಖುಷಿಯಾಗಿದ್ದ ವ್ಯಕ್ತಿಯೊಬ್ಬ ಅಂತಹ ದೊಡ್ಡ ಕಂಪನಿಯಲ್ಲಿ ಕೆಲ್ಸ ಸಿಗುತ್ತೆ ಅಂತಾ ಕರೆ ಮಾಡಿದವರು ಕೇಳಿದ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.

    ಇದಾದ ಬಳಿಕ ಮತ್ತೆ ಕರೆ ಮಾಡಿ ಆ ಫೀಸ್ ಈ ಫೀಸ್ ಅಂತಾ 4 ಲಕ್ಷಕ್ಕೂ ಹೆಚ್ಚು ಹಣವನ್ನು ಸೈಬರ್​ ಖದೀಮರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಆದರೆ, ಅಕೌಂಟ್​ಗೆ ಹಣ ಬಂದ ತಕ್ಷಣ ಮೊಬೈಲ್ ನಂಬರ್​ ಸ್ವಿಚ್ ಆಫ್ ಆಗಿದೆ. ಎಷ್ಟೇ ಫೋನ್​ ಮಾಡಿದರೂ ಸ್ವೀಕರಿಸಿದಿದ್ದಾಗ ತಾನೂ ಮೋಸಹೋಗಿರುವುದು ವ್ಯಕ್ತಿಗೆ ಗೊತ್ತಾಗಿದ್ದು, ನಾಲ್ಕು ಲಕ್ಷ ರೂ. ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಾಗಿದೆ. (ಏಜೆನ್ಸೀಸ್​)

    VIDEO: ಈತ ಭಾರತೀಯ, ಆತ ಪಾಕಿಸ್ತಾನಿ… 74 ವರ್ಷಗಳ ಬಳಿಕ ಒಂದಾದ ಸಹೋದರರು! ಭಾವನಾತ್ಮಕ ವಿಡಿಯೋ ವೈರಲ್‌

    ಪಾದಯಾತ್ರೆಗೆ ಕ್ಷಣಕ್ಕೊಂದು ತಿರುವು: ಬಿಡದಿಯಲ್ಲಿ ಊಟದ ವ್ಯವಸ್ಥೆ ರದ್ದು, 5 ಮಂದಿ ಮಾತ್ರವೇ ಪಾದಯಾತ್ರೆ ಮಾಡ್ತಾರೆ…

    ರಾತ್ರೋರಾತ್ರಿ ಕೋಟ್ಯಧಿಪತಿಯಾದ ವೃದ್ಧ: ದಿಢೀರನೇ ಭಾರೀ ಹಣ ಬಂದ್ರೂ ಹೆದರಿ ನಡುಗುತ್ತಿರುವ ವೃದ್ಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts