More

    ನನಗೆ ಅಧಿಕಾರ ಬೇಕಿಲ್ಲ, ನಾನು ಜನರ ಸೇವೆ ಮಾಡಬೇಕಷ್ಟೇ: ಪ್ರಧಾನಿ ಮೋದಿ

    ನವದೆಹಲಿ: ಆಯುಷ್ಮಾನ್​ ಭಾರತ್​ ಯೋಜನೆಯ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಅಧಿಕಾರ ಬೇಕಿಲ್ಲ, ನಾನು ಜನರ ಸೇವೆ ಮಾಡಬೇಕು ಎಂದರು.

    ಪತ್ರಿ ತಿಂಗಳಾಂತ್ಯದ ಭಾನುವಾರದಂದು ನಡೆಯುವ ಬಾನುಲಿ ರೆಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ 83ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ಆಯುಷ್ಮಾನ್​ ಭಾರತ್​ ಯೋಜನೆಯು ಬಡವರಿಗೆ ತುಂಬಾ ನೆರವು ನೀಡಿದೆ ಎಂದು ಹೇಳಿದರು.

    ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಸ್ಟಾರ್ಟ್‌ಅಪ್‌, ಪ್ರಕೃತಿಯನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಿದರು. ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲ ಮತ್ತು ಜನರು ಜಾಗರೂಕರಾಗಿರಬೇಕು ಎಂದು ಹೇಳುವ ಮೂಲಕ ಅವರು ಕೊನೆಗೊಳಿಸಿದರು.

    ಸ್ಟಾರ್ಟ್​ಅಪ್​ ಸಂಸ್ಕೃತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ನಾವು ಭಾರತದ ಬೆಳವಣಿಗೆಯ ಒಂದು ಮಹತ್ವದ ಘಟ್ಟದಲ್ಲಿದ್ದೇವೆ. ಯುವಕರು ಉದ್ಯೋಗಾಕಾಂಕ್ಷಿಗಳು ಮಾತ್ರವಲ್ಲದೆ, ಉದ್ಯೋಗ ಸೃಷ್ಟಿಕರ್ತರೂ ಆಗಿದ್ದಾರೆ. ಭಾರತದಲ್ಲಿ 70 ಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ. ಯುನಿಕಾರ್ನ್ ಖಾಸಗಿಯಾಗಿ ನಡೆಸಲ್ಪಡುವ ಆರಂಭಿಕ ಕಂಪನಿಯಾಗಿದ್ದು 1 ಶತಕೋಟಿ ಡಾಲರ್​ಗೂ ಹೆಚ್ಚು ಮೌಲ್ಯವನ್ನು ಹೊಂದಿದೆ ಎಂದರು. ಆಲೋಚನೆ, ಆವಿಷ್ಕಾರ ಮತ್ತು ಯಾವುದನ್ನು ಕೂಡ ಮಾಡುತ್ತೇನೆಂಬ ಉತ್ಸಾಹ ಮತ್ತು ಸಾಮರ್ಥ್ಯ ಎಂಬ ಮೂರು ರೀತಿಯ ವ್ಯಕ್ತಿತ್ವವು ದೇಶದ ಯುವಕರಲ್ಲಿ ಇದೆ ಎಂದು ತಿಳಿಸಿದರು.

    ಇನ್ನು ಎರಡು ದಿನಗಳಲ್ಲಿ ಡಿಸೆಂಬರ್​ ತಿಂಗಳು ಬರಲಿದೆ. ಈ ತಿಂಗಳಲ್ಲಿ ನೌಕಾಪಡೆ ಹಾಗೂ ಸಶಸ್ತ್ರ ಪಡೆಗಳ ಧ್ವಜ ದಿನ ಆಚರಿಸಲಾಗುತ್ತದೆ. ಅಲ್ಲದೆ, ಡಿಸೆಂಬರ್ 16 ರಂದು ದೇಶವು 1971ರ ಯುದ್ಧದ ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ನಾನು ನಮ್ಮ ಸಶಸ್ತ್ರ ಪಡೆಗಳನ್ನು ಸ್ಮರಿಸಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

    ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

    ರಾಡ್​ನಿಂದ ಕುಟಂಬದ ಮೇಲೆ ಹಲ್ಲೆ: ತಡೆಯಲು ಬಂದ ಇನ್ಸ್​ಪೆಕ್ಟರ್​ ಸೇರಿ ಐವರ ಬರ್ಬರ ಹತ್ಯೆ

    ಈಗಷ್ಟೇ ಚೇತರಿಕೆ ಕಾಣುತ್ತಿರುವ ಸಿನಿಮಾ ಕ್ಷೇತ್ರದ ಮೇಲೆ ಮತ್ತೆ ರೂಪಾಂತರಿ ಕರೊನಾತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts