More

    ಕೆಲವೇ ದಿನಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನ್​ ತನ್ನ ತೆಕ್ಕೆಗೆ ಹಾಕಿಕೊಂಡಿದ್ಹೇಗೆ!?

    ಕಾಬುಲ್​: ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆದುಕೊಂಡ ಕೆಲವೇ ದಿನಗಳಲ್ಲಿ ತಾಲಿಬಾನ್​ ಬಂಡುಕೋರರು ಇಡೀ ಆಫ್ಘಾನ್​ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿರುವುದು ಎಲ್ಲರ ಹುಬ್ಬೇರಿಸಿದೆ. ಇಷ್ಟು ಬೇಗ ಒಂದು ಗುಂಪು ಇಡೀ ರಾಷ್ಟ್ರವನ್ನೇ ಹೇಗೆ ವಶಕ್ಕೆ ಪಡೆಯಿತು ಎಂಬುದು ನೋಡಿದಾಗ ಅನೇಕ ಕುತೂಹಲಕಾರಿ ಸಂಗತಿಗಳು ತೆರೆದುಕೊಳ್ಳುತ್ತವೆ.

    ದಂಗೆಕೋರರು ತಮ್ಮ ಇಡೀ ಕಾರ್ಯತಂತ್ರದಲ್ಲಿ ಬೆದರಿಕೆ, ಆಮಿಷಗಳನ್ನು ಅಳವಡಿಸಿಕೊಂಡರು. ಅಲ್ಲದೆ, ಮನೋವೈಜ್ಞಾನಿಕ ಯುದ್ಧದೊಂದಿಗೆ ಒಂದೊಂದೆ ನಗರವನ್ನು ಕಬಳಿಸುತ್ತಾ ಬಂದಿರುವುದಾಗಿ ವರದಿಯಾಗಿದೆ.

    ಕಾಗದದ ಮೇಲಿನ ಹುಲಿಗಳಾದ ಆಫ್ಘಾನ್​ ಪಡೆ
    ಮೇನಲ್ಲಿ ಅಮರಿಕ ಸೇನಾ ಪಡೆಗಳು ಅಫ್ಘಾನ್​ ನೆಲದಿಂದ ಸಂಪೂರ್ಣವಾಗಿ ಹಿಂತಿರುಗಿದವು. ಆಫ್ಘಾನ್​ ಮಿಲಿಟರಿಯು ತಾಲಿಬಾನ್ ಅನ್ನು ಸಮರ್ಥವಾಗಿ ಎದುರಿಸುತ್ತದೆ ಎಂದು ಅಮರಿಕ ನಂಬಿತ್ತು. ಸುಮಾರು 3 ಲಕ್ಷಕ್ಕೂ ಅಧಿಕ ಸಿಬ್ಬಂದಿ ಹಾಗೂ ಬಹು-ಬಿಲಿಯನ್ ಡಾಲರ್ ಉಪಕರಣಗಳು ತಾಲಿಬಾನ್​ ಶಸ್ತ್ರಾಸ್ತ್ರಗಳಿಂತ ತುಂಬಾ ಆಧುನಿಕವಾಗಿತ್ತು. ಇಷ್ಟೆಲ್ಲ ಇದ್ದರೂ ಆಫ್ಘಾನ್​ ಸೈನಿಕರು ಮಾತ್ರ ಕಾಗದದ ಮೇಲಿನ ಹುಲಿಗಳಾಗಿದ್ದರು.

    ಕಳಪೆ ನಾಯಕತ್ವದ ಪರಿಣಾಮ
    ವಾಸ್ತವವಾಗಿ ಆಫ್ಘಾನ್ ಇಂದಿನ ಪರಿಸ್ಥಿತಿಗೆ ​ಭ್ರಷ್ಟಾಚಾರ ಹಾಗೂ ಕಳಪೆ ನಾಯಕತ್ವ ಕಾರಣವಾಗಿದೆ. ಅಲ್ಲದೆ, ಹಲವು ವರ್ಷಗಳಿಂದ ತರಬೇತಿಯ ಕೊರತೆಯಿಂದ ಆಫ್ಘಾನ್ನರ ಧೈರ್ಯ ಕುಸಿಯುತ್ತಿದೆ. ಆಫ್ಘಾನ್​ನಲ್ಲಿ ಮರುಭೂಮಿಗಳು ಸಾಮಾನ್ಯವಾಗಿರುವುದರಿಂದ ಅಲ್ಲಿನ ಸೇನಾ ಬಲವು ಸಮರ್ಥನೀಯವಲ್ಲ ಎಂದು ಬಹಳ ಹಿಂದೆಯೇ ಯುಎಸ್ ಸರ್ಕಾರದ ಇನ್ಸ್‌ಪೆಕ್ಟರ್‌ಗಳು ಎಚ್ಚರಿಸಿದ್ದರು. ಕಳೆದ ಬೇಸಿಗೆಯಲ್ಲಿ ಆಫ್ಘಾನ್​ ಸೇನಾ ಪಡೆಗಳು ಲಸ್ಕರ್​ ಗಹ್​ ಸೇರಿದಂತೆ ದಕ್ಷಿಣ ಭಾಗದಲ್ಲಿ ತಾಲಿಬಾನ್​ ಬಂಡುಕೋರರನ್ನು ಸಮರ್ಥವಾಗಿ ಎದುರಿಸಿದ್ದರು. ಆದರೆ ಅವರೀಗ ನಿಯಮಿತ ಯುಎಸ್ ವಾಯುದಾಳಿ ಮತ್ತು ಮಿಲಿಟರಿ ಬೆಂಬಲವಿಲ್ಲದೆ ತಾಲಿಬಾನ್ ಅನ್ನು ಎದುರಿಸಬೇಕಾದ ಸನ್ನಿವೇಶ ಎದುರಾಯಿತು. ಅಮೆರಿಕ 20 ವರ್ಷದಿಂದ ಆಫ್ಘಾನಿಸ್ತಾನವನ್ನು ರಕ್ಷಣೆ ಮಾಡಿಕೊಂಡು ಬಂದರು ಆಫ್ಘಾನ್​ ತನ್ನ ನೆಲೆಯನ್ನು ಭದ್ರಪಡಿಸುವ ಕೆಲಸ ಮಾಡಲೇ ಇಲ್ಲ. ಮೊದಲೇ ತಮ್ಮ ಭದ್ರತಾ ಪಡೆಯ ಬಲವನ್ನು ಹೆಚ್ಚಿಸಿಕೊಂಡಿದ್ದರೆ, ಇಂದಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

    ಒಪ್ಪಂದ ಹಿಂಪಡೆದಿದ್ದು ತಾಲಿಬಾನ್​ಗೆ ವಯವಾಯ್ತು?
    ತಾಲಿಬಾನ್​​ ಬಂಡುಕೋರರ ಗುಂಪು ಸಣ್ಣದಾಗಿದ್ದರೂ, ಹೆಚ್ಚು ಪ್ರೇರಿತ ಮತ್ತು ಒಗ್ಗಟ್ಟಿನ ಕಾರಣ ಆಫ್ಘಾನ್​ ಪಡೆಗಳು ಶತ್ರುವನ್ನು ಎದುರಿಸಲಾಗದೇ ಅನೇಕ ಸೈನಿಕರು ಮತ್ತು ಸೇನಾ ಘಟಕಗಳು ಸುಲಭವಾಗಿ ಒಪ್ಪಿಸಿದರು. ಇದರಿಂದಾಗಿ ಬಂಡಾಯಗಾರರು ನಗರವನ್ನು ಒಂದೊಂದಾಗಿ ವಶಪಡಿಸಿಕೊಳ್ಳುತ್ತಾ ಬಂದರು. ಕಳೆದ ವರ್ಷ ಅಮೆರಿಕವು ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಬಂಡಾಯಗಾರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಾಗ ಆಘ್ಫಾನ್​ ಕುಸಿತದ ಸೂಚನೆ ಆರಂಭವಾಯಿತು.

    ಸುಮಾರು 2 ದಶಕಗಳ ನಿರಂತರ ಸಂಘರ್ಷದ ಬಳಿಕ ತಾಲಿಬಾನ್​ ದಂಗೆಕೋರರು ಆಫ್ಘಾನ್​ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಸದ್ಯದ ಬೆಳವಣಿಗೆಯಿಂದ ಖಿನ್ನತೆಗೆ ಜಾರಿರುವ ಆಫ್ಘನ್ನರಿಗೆ, ಅಲ್ಲಿನ ಆಡಳಿತ ಎಸಗಿದ ದ್ರೋಹವಾಗಿದೆ. ತಾಲಿಬಾನಿಗಳು ಸರ್ಕಾರಿ ಪಡೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದರ ಜತೆಗೆ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಹತ್ಯೆಗಳನ್ನು ಗುರಿಯಾಗಿಸಿಕೊಂಡು ಭಯದ ವಾತಾವರಣವನ್ನು ಆಫ್ಘಾನ್​ನಲ್ಲಿ ಹೆಚ್ಚಿಸಿದರು.

    ಭಯ ಹುಟ್ಟಿಸುವ ಮೆಸೇಜ್
    ಅವರು ತಮ್ಮ ಯೋಜಿತ ಪ್ರಚಾರ ಮತ್ತು ಮನೋವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ತಾಲಿಬಾನ್​ ಗೆಲುವಿನ ಅನಿವಾರ್ಯತೆಯನ್ನು ಸಂದೇಶದ ಮೂಲಕ ಆಫ್ಘಾನ್ನರಿಗೆ ಕಳುಹಿಸುವ ಮೂಲಕ ಬೆದರಿಕೆ ಮತ್ತು ಆಮಿಷಗಳನ್ನು ಒಡ್ಡಿದರು. ಕೆಲವು ಏರಿಯಾಗಳಲ್ಲಿ ಬಂದ ಮೆಸೇಜ್​ ನೋಡಿ ಹೆದರಿದ ಯೋಧರು ಮತ್ತು ಸ್ಥಳೀಯ ಅಧಿಕಾರಿಗಳು ಪ್ರಾಣ ಉಳಿಸಿಕೊಳ್ಳಲು ತಾಲಿಬಾನ್​ಗಳೊಂದಿಗೆ ಸಹಕರಿಸಿ ಎನ್ನುವ ಮೂಲಕ ಸುಲಭವಾಗಿ ಸೋಲನ್ನು ಒಪ್ಪಿಕೊಂಡರು.

    ಅಫ್ಘಾನ್ ಪಡೆಗಳು ತಾಲಿಬಾನ್ ಪ್ರಗತಿಯನ್ನು ತಡೆಹಿಡಿಯಲು ಸಾಧ್ಯವಾಗದೇ, ಕೊನೆಯಲ್ಲಿ ಅವರಿಗೆ ಶರಣಾದವು. ಅಫ್ಘಾನಿಸ್ತಾನ ಸರ್ಕಾರದ ಬದುಕುಳಿಯುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಕುಸಿಯುತ್ತಿದೆ, ದಂಗೆಕೋರರನ್ನು ತಡೆಹಿಡಿಯಬೇಡಿ ಎಂಬ ಅಸಹಾಯಕ ಬರಹಗಳು ಸಹ ಹೊರಬರಲಾರಂಭಿಸಿದವು. ಹೀಗಾಗಿ ಅನೇಕ ನಗರಗಳನ್ನು ನಿರಾಯಸವಾಗಿ ತಾಲಿಬಾನ್​ ತನ್ನ ತೆಕ್ಕೆಗೆ ಹಾಕಿಕೊಂಡಿತು.

    ಸುಲಭ ತುತ್ತಾದ ಆಫ್ಘಾನ್​
    ಕಾಬುಲ್​ ಕಡೆಗಿನ ತಾಲಿಬಾನ್​ ಬಂಡುಕೋರರ ಅಂತಿಮ ಯಾತ್ರೆಯು ರಕ್ತಸಿಕ್ತ ಯುದ್ಧಭೂಮಿಯಂತಿರಲಿಲ್ಲ. ತಾಲಿಬಾನಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಆರಾಮವಾಗಿ ಕುಳಿತು ನಗರಗಳು ಮತ್ತು ಪ್ರಾಂತ್ಯಗಳ ಹಸ್ತಾಂತರವನ್ನು ಔಪಚಾರಿಕಗೊಳಿಸಿದರು. ಒಂದು ವರದಿಯ ಪ್ರಕಾರ ಅಫ್ಘಾನ್ ಸರ್ಕಾರ 90 ದಿನಗಳಲ್ಲಿ ಕುಸಿಯಬಹುದು ಎಂದು ಅಮೆರಿಕ ಅಂದಾಜು ಮಾಡಿತ್ತು. ಆದರೆ, ಅಮೆರಿಕ ಹೇಳಿದ ಎರಡೇ ವಾರಗಳಲ್ಲಿ ಕಾಬುಲ್​ಗೆ ತಾಲಿಬಾನ್​ ಪ್ರವೇಶಿಸುವ ಮೂಲಕ ಇಡೀ ಆಫ್ಘಾನ್​ ಅನ್ನೇ ವಶಪಡಿಸಿಕೊಂಡಿದೆ. (ಏಜೆನ್ಸೀಸ್​)

    ಅಫ್ಘಾನಿಸ್ತಾನದಲ್ಲಿ ಗಾಯದ ಮೇಲೆ ಬರೆ- ತಾಲಿಬಾನಿಗಳು ಹೆಜ್ಜೆ ಇಡುತ್ತಲೇ ಭೂಕಂಪ: ಆತಂಕದಲ್ಲಿ ಜನತೆ

    ‘ಕಚೇರಿ ಸುತ್ತುವರೆದಿದ್ದರು, ಬುರ್ಖಾ ಹಾಕದವರನ್ನು ಕೊಲ್ಲುತ್ತಿದ್ದರು, ಜೀವ ಕೈಯಲ್ಲಿ ಹಿಡಿದು ಓಡಿದೆ…’

    ಬಡವರಿಗೆ ಹಂಚಿ ಬಿಡಿ! ಆತ್ಮಹತ್ಯೆಗೂ ಮುನ್ನ ದಂಪತಿ ಆಡಿರುವ ಮಾತುಗಳು ಕಣ್ಣೀರುವ ತರಿಸುವಂತಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts