More

    ಏನ್ ಹುಡುಗಾಟ ಆಡ್ತಿದ್ದೀರಾ? ಒಬ್ಬ ಗೃಹ ಸಚಿವನಾಗಿ ಜವಾಬ್ದಾರಿಯಿಂದ ಮಾತಾಡ್ಬೇಕು: ಎಚ್​ಡಿಕೆ ಆಕ್ರೋಶ

    ಮೈಸೂರು: ಗೃಹ ಸಚಿವರು ಕಾಮಿಡಿಯನ್ ರೋಲ್ ಪ್ಲೇ ಮಾಡ್ತೀದ್ದಾರಾ ಅಥವಾ ವಿಲನ್ ರೋಲ್ ಪ್ಲೇ ಮಾಡ್ತೀದ್ದಾರಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಟೀಕಿಸಿದರು.

    ಬೇರೆ ಸಮುದಾಯದ ಯುವಕರಿಂದ ದಲಿತ ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ನೀಡಿದ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

    ಏನ್ ಹುಡುಗಾಟ ಆಡುತ್ತಿದ್ದೀರಾ?
    ಯಾವುದೇ ಘಟನೆ ನಡೆದಾಗ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಬಳಿಕ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಬೇಕು. ಉರ್ದು ಮಾತನಾಡಲಿಲ್ಲ ಅಂತಾ ಕೊಲೆಯಾಗಿದೆ ಅಂತ ಹೇಳಿಕೆ ಕೊಟ್ಟಿದ್ದರು. ಈಗ ಅಪಘಾತದ ಗಲಾಟೆ ಕಾರಣಕ್ಕೆ ಎಂದು ಹೇಳಿದ್ದಾರೆ. ಏನ್ ಹುಡುಗಾಟ ಆಡುತ್ತಿದ್ದೀರಾ? ಒಬ್ಬ ಗೃಹ ಸಚಿವನಾಗಿ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಆಕ್ರೋಶ ಹೊರಹಾಕಿದರು.

    ಗೃಹ ಸಚಿವರದ್ದು ಸಣ್ಣತನದ ಹೇಳಿಕೆ
    ಗೃಹ ಸಚಿವರು ಕೊಲೆಯಾದವರು ದಲಿತ ಯುವಕ ಅಂತ ಹೇಳಿದ್ದಾರೆ. ಅವರು ಹಿಂದೂ ಧರ್ಮದ ಯುವಕ ಅಂತ ಹೇಳಿಲ್ಲ. ರಾಜ್ಯದ ಜನ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಎಚ್​​ಡಿಕೆ ಗೃಹ ಸಚಿವರು ಹೇಳಿಕೆಯನ್ನು ಖಂಡಿಸಿದರು. ಗೃಹ ಸಚಿವರದ್ದು ಸಣ್ಣತನದ ಹೇಳಿಕೆ. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಹೊರಟಿದ್ದಾರೆ. ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಅಂತಾ ಗೃಹ ಸಚಿವರು ವರ್ಣನಾತ್ಮಕವಾಗಿ ಹೇಳಿದ್ದಾರೆ. ಅಂದರೆ ಅವರ ಉದ್ದೇಶ ಏನಿತ್ತು? ಉರ್ದು ಮಾತನಾಡಲಿಲ್ಲ ಅಂತಾ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವರೇ ಹೇಳಿದ್ದಾರೆ. ಹೀಗಿರುವಾಗ ತನಿಖೆ ಏನಾಗುತ್ತೆ? ಯಾವ ನ್ಯಾಯ ಸಿಗಲು ಸಾಧ್ಯ? ಎಂದು ಪ್ರಶ್ನಿಸಿದರು.

    ನಿರ್ಮಾಪಕರಿಗೆ ನಾನು ಮನವಿ ಮಾಡುತ್ತೇನೆ
    ಮುಸ್ಲಿಂ ಯುವಕರು ಅಂತಾ ಆರೋಪಿಗಳ ಮೇಲೆ ಕನಿಕರ ತೋರಿಸಿ ಎಂದು ಹೇಳುವುದಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ. ಇತ್ತೀಚಿನ ಸಿನಿಮಾಗಳೇ ಹುಡುಗರ ಈ ರೀತಿಯ ಕೃತ್ಯಗಳಿಗೆ ಪ್ರೇರಣೆ ಮಾಡುತ್ತಿವೆ. ನಿರ್ಮಾಪಕರಿಗೆ ನಾನು ಮನವಿ ಮಾಡುತ್ತೇನೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಜನರ ಕೊಲೆಯಾದವು. ಆದರೆ, ಕೊಲೆ ವಿಚಾರದಲ್ಲಿ ಬಿಜೆಪಿ ಪ್ರಚೋದನಾಕಾರಿಯಾಗಿ ನಡೆದುಕೊಳ್ಳುತ್ತಿದೆ. ಚುನಾವಣೆಗಾಗಿ ಸಮಾಜ ಹೊಡೆಯುವ ಕೆಲಸ ಆಗಬಾರದು ಎಂದು ಹೇಳಿದರು.

    ನಮ್ಮ ರೈತರಿಗೆ ನಾಮ ಹಾಕಲು ಬರಬೇಡಿ
    ಇದೇ ವೇಳೆ ವ್ಯಾಪಾರದಲ್ಲಿ ಧರ್ಮ ಸಂಘರ್ಷದ ಬಗ್ಗೆ ಮಾತನಾಡಿದ ಎಚ್​ಡಿಕೆ, ಈಗ ಮಾವು ಮಾರಾಟಕ್ಕೆ ಗಲಾಟೆ ಶುರುವಾಗಿದೆ. ಮುಂದೆ ಹುಣಸೆ, ಸಪೋಟಕ್ಕೂ ಶುರುವಾಗುತ್ತದೆ. ಮಾವು ಮಾರಾಟ ಮಾಡುವವರು ಯಾರು? ಅದು 400-500 ಕೋಟಿ ವ್ಯವಹಾರ. ಏನೂ ವಿಶ್ವ ಹಿಂದೂ ಪರಿಷತ್​ನವರು ಬಂದು ವ್ಯಾಪಾರ ಮಾಡುತ್ತಾರಾ? ವಿಶ್ವ ಹಿಂದೂ ಪರಿಷತ್ ನವರು ರೇಷ್ಮೆ, ಮಾವಿನ ಡೀಲರ್ಸ್ ಗಳಾಗುತ್ತಾರಾ? ನಾಳೆ ಹುಣಸೇ, ಸಪೋಟ ಹಣ್ಣಿನ ವ್ಯಾಪಾರಕ್ಕೂ ಬರುತ್ತೆ? ನೀವು ಬೇಕಾದರೆ ನಾಮ ಹಾಕಿಕೊಂಡು ಓಡಾಡಿ, ನಮ್ಮ ರೈತರಿಗೆ ನಾಮ ಹಾಕಲು ಬರಬೇಡಿ ಎಂದು ಟಾಂಗ್​ ಕೊಟ್ಟರು.

    ಸುಪಾರಿಯನ್ನು ಜನರಿಂದ ಪಡೆದಿದ್ದೇನೆ
    ಬಿಜೆಪಿ ಸುಪಾರಿ ಪಡೆದು ಕುಮಾರಸ್ವಾಮಿ ಮಾತನಾಡುತ್ತಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಯಾವುದೇ ಪಕ್ಷದ ಓಲೈಕೆಯಲ್ಲಿಲ್ಲ. ನಾನು ಎರಡು ರಾಜಕೀಯ ಪಕ್ಷಗಳನ್ನು ಈ ರಾಜ್ಯದಿಂದ ಕಿತ್ತಾಕುವ ಸುಪಾರಿಯನ್ನು ಜನರಿಂದ ಪಡೆದಿದ್ದೇನೆ. ನಾನು ಯಾವ ಸಮಾಜದ ಓಲೈಕೆಗೂ ರಾಜಕಾರಣ ಮಾಡುತ್ತಿಲ್ಲ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

    ಕರ್ನಾಟಕದ ಜನದಕ್ಕೆಲ್ಲ ಮನ್ನಣೆ ಕೊಡಲ್ಲ
    ಮುಸ್ಕಾನ್‌ಗೆ ಅಲ್‌ಖೈದ ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಎಚ್​ಡಿಕೆ, ಅಲ್‌‌ಖೈದ ಹೇಳಿಕೆಯಿಂದ ನಮಗೇನು ಆಗಬೇಕಿದೆ? ಕರ್ನಾಟಕದ ಜನದಕ್ಕೆಲ್ಲ ಮನ್ನಣೆ ಕೊಡಲ್ಲ. ನಮ್ಮ ಜನ ಸೌಹಾರ್ದವಾಗಿ ಬದುಕುವವರು. ಅವರ ಹೇಳಿಕೆಯಿಂದ ರಾಜ್ಯದಲ್ಲಿ ಅಂಥ ವ್ಯತ್ಯಾಸ ಆಗಲ್ಲ ಎಂದು ಹೇಳಿದರು.

    ರಾಜ್ಯದ ಜನರ ಹಿತಕ್ಕಾಗಿ ನಾನು ಮಾತನಾಡುತ್ತೇನೆ
    ಎಚ್.ಡಿ.ಕುಮಾರಸ್ವಾಮಿ ಪ್ರತಿ ವಿಚಾರದಲ್ಲೂ ಹಿಟ್ ವಿಕೇಟ್ ಆಗುತ್ತಾರೆ ಎಂಬ ಆರ್‌.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಪೂರ್ಣ ಬಹುಮತ ಸಿಗದಿರಬಹುದು. ದೇವರ ದಯೆಯಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ನಾನು ಮತ್ತೆ ಸಿಎಂ ಆಗುವ ಆಸೆ ಏನೂ ಇಲ್ಲ. ರಾಜ್ಯದ ಜನರ ಹಿತಕ್ಕಾಗಿ ನಾನು ಮಾತನಾಡುತ್ತೇನೆ ಎಂದು ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

    ಚಂದ್ರು ಕೊಲೆ ಕೇಸ್​: ಪೊಲೀಸರು ಮತ್ತು ಅರಗ ಜ್ಞಾನೇಂದ್ರ- ಸಿ.ಟಿ.ರವಿ ಹೇಳಿಕೆ… ಒಂದಕ್ಕೊಂದು ಸಂಬಂಧವೇ ಇಲ್ಲ

    ನಿಮಗೋಸ್ಕರ ಟೀ ಶರ್ಟ್​ ಬಿಚ್ತೀನಿ: ವೀಕ್ಷಕರಿಗೆ ಕೊಟ್ಟ ಭರವಸೆ ಉಳಿಸಿಕೊಂಡ ಪೂನಂ ಪಾಂಡೆ!

    ಮಣ್ಣು ಮಾಡಿ ಬಂದ ಮಾರನೇ ದಿನವೇ ಕುಟುಂಬಸ್ಥರಿಗೆ ಕಾದಿತ್ತು ಶಾಕ್​: ತಮಿಳುನಾಡಿನಲ್ಲಿ ಅಚ್ಚರಿಯ ಘಟನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts