More

    ಆಸ್ತಿಗಾಗಿ ದಂಪತಿ ಕೊಲೆ ಪ್ರಕರಣ: ಐದು ವರ್ಷಗಳ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ

    ಹಾಸನ: ಆಸ್ತಿಗಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಐದು ವರ್ಷಗಳ ಬಳಿಕ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

    ಹಾಸನ ಜಿಲ್ಲೆ ಚನ್ನರಾಯಪಟ್ಟಣದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಶ್ರೀ ಮಲ್ಲಿಕಾರ್ಜುನ ಎಸ್. ಸಂಶಿ ಅವರು ತೀರ್ಪು ಹೊರಡಿಸಿದ್ದು, ಆರೋಪಿಗಳಾದ ಜಗದೀಶ, ಲತೇಶ, ಪಕ್ರನಾಗರಾಜ ಹಾಗೂ ದೀಪಕ್​ಗೆ ಜಿವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ.

    ಆಸ್ತಿಗಾಗಿ ದಂಪತಿ ಕೊಲೆ ಪ್ರಕರಣ: ಐದು ವರ್ಷಗಳ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ

    2015 ಜೂನ್​ 17ರಂದು ಮೋಹನ್ ಮತ್ತು ಪವಿತ್ರ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿಯಲ್ಲಿ ಕೊಲೆ ನಡೆದಿತ್ತು. ದಂಪತಿ ಸ್ಕೂಟರ್​ನಲ್ಲಿ ಹೋಗುವಾಗ ಹಿಂದಿನಿಂದ ಟಾಟಾ ಸುಮೋ ಗುದ್ದಿಸಿ ಕೊಲೆ ಮಾಡಲಾಗಿತ್ತು.

    ಚನ್ನರಾಯಪಟ್ಟಣ ಪೊಲೀಸರು ಪ್ರಕರಣವನ್ನು ಭೇದಿಸಿ ಕೊಲೆ ಕೇಸ್​ ದಾಖಲಿಸಿದ್ದರು. ಜಗದೀಶ ಎಂಬುವನು ತನ್ನ ಹೆಂಡತಿಯ ಅಕ್ಕ ಮತ್ತು ಆಕೆಯ ಗಂಡನನ್ನ ಕೊಂದರೆ ಮಾವನ ಮನೆ ಆಸ್ತಿ ತನಗೇ ಸೇರುತ್ತದೆ ಎಂದು ಕೊಲೆಗೆ ಪ್ಲಾನ್ ಮಾಡಿದ್ದ. ಲತೇಶ್ ಹಾಗೂ ದೀಪಕ್​ಗೆ ಹಣದ ಆಮೀಷ ತೊರಿಸಿ ಕೊಲೆ ಮಾಡಲು ಸೂಚಿಸಿದ್ದ. ಪ್ಲಾನ್​ನಂತೆ ದಂಪತಿ ಸ್ಕೂಟರ್​ನಲ್ಲಿ ಹೋಗುವಾಗ ಹಿಂದಿನಿಂದ ಟಾಟಾ ಸುಮೋ ಗುದ್ದಿಸಿ ಕೊಲೆ ಮಾಡಿದ್ದರು.

    ಸರ್ಕಾರದ ಪರವಾಗಿ ಪಿಪಿ ಕೆ.ಎಸ್. ನಾಗೇಂದ್ರ ಅವರು ವಾದ ಮಂಡಿಸಿದ್ದರು. ಸತತ ಐದು ವರ್ಷಗಳ ಬಳಿಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣ ಭೇದಿಸಿದ ಪೊಲೀಸರು

    ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

    ಯೋಧನ ಮೃತದೇಹ ಹಸ್ತಾಂತರಿಸಿ ಹಿಂತಿರುಗುತ್ತಿದ್ದ ಪೊಲೀಸ್​ ಸಿಬ್ಬಂದಿಯ ಪ್ರಾಣ ಹೊತ್ತೊಯ್ದ ಜವರಾಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts