More

    ನಿಮ್ಮ ಬಳಿಯಿರೋ ಎಲ್ಲ ಸರ್ಕಾರಿ ವಸ್ತುಗಳನ್ನು ಹಿಂತಿರುಗಿಸಿ: ಕಾಬುಲ್​ ನಿವಾಸಿಗಳಿಗೆ ತಾಲಿಬಾನ್ ತಾಕೀತು!​

    ಕಾಬುಲ್​: ಅಫ್ಘಾನಿಸ್ತಾನ ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಸರ್ಕಾರ ರಚನೆಗೆ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಕಾಬುಲ್​ ನಿವಾಸಿಗಳಿಗೆ ತಾಲಿಬಾನಿಗಳು ಕರೆಯೊಂದನ್ನು ನೀಡಿದ್ದು, ನಿಮ್ಮ ಬಳಿಯಿರುವ ಸರ್ಕಾರಿ ವಾಹನ, ಸಶ್ತ್ರಾಶ್ತ್ರ ಹಾಗೂ ಮದ್ದು ಗುಂಡುಗಳನ್ನು ಹಿಂತಿರುಗಿಸುವಂತೆ ತಾಲಿಬಾನ್​ ವಕ್ತರಾ ಝಬಿಹುಲ್ಲಾ ಮುಜಾಹಿದ್ ಕಾಬುಲ್​ ನಿವಾಸಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

    ಸರ್ಕಾರಿ ಆಸ್ತಿಗಳು ಸೇರಿದಂತೆ ಯಾವೆಲ್ಲ ವಸ್ತುಗಳು ಸರ್ಕಾರಕ್ಕೆ ಸೇರಿದೆವೆಯೋ ಅದನ್ನೆಲ್ಲ ಮರಳಿಸುವಂತೆ ತಾಲಿಬಾನ್​ ಕರೆ ನೀಡಿದೆ. ಒಂದು ವೇಳೆ ಹಿಂತಿರುಗಿಸದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ಸಹ ತಾಲಿಬಾನಿಗಳು ನೀಡಿದ್ದಾರೆ.

    ಇದರೊಂದಿಗೆ ಎಲ್ಲ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಮರಳಿ ಕೆಲಸ ಆರಂಭಿಸುವಂತೆಯೂ ಸಂದೇಶ ರವಾನೆಯಾಗಿದೆ. ಇನ್ನೇನು ಅಮೆರಿಕ ಸ್ಥಳಾಂತರ ಪ್ರಕ್ರಿಯೆ ಮುಗಿಯಲಿದ್ದು, ಅಮೆರಿಕ ಯೋಧರು ಆಫ್ಘಾನ್​ ನೆಲವನ್ನು ಶಾಶ್ವತವಾಗಿ ತೊರೆಯಲಿದ್ದಾರೆ. ಇದಾದ ಬಳಿಕ ತಾಲಿಬಾನಿಗಳು ಸರ್ಕಾರ ರಚಿಸುವ ಪ್ಲಾನ್​ ಮಾಡಿಕೊಂಡಿದೆ.

    ಇನ್ನು ತಾಲಿಬಾನಿಗಳ ಆಡಳಿತವನ್ನು ನೆನೆದು ಭಯಭೀತಗೊಂಡಿರುವ ಆಫ್ಘಾನ್ನರು ಬೇರೆ ಬೇರೆ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಲಕ್ಷಾಂತರ ಮಂದಿ ಕಾಬುಲ್​ ವಿಮಾನ ನಿಲ್ದಾಣ ಮುಂದೆಯೇ ತಮ್ಮ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿ ಐಎಸ್​-ಕೆ ಉಗ್ರ ಸಂಘಟನೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಕಾಬುಲ್​ನಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. (ಏಜೆನ್ಸೀಸ್​)

    ಮೈಸೂರು ಗ್ಯಾಂಗ್​ರೇಪ್ ಕೇಸ್​: ಕೃತ್ಯಕ್ಕೆ ಕಾರಣ ಬಿಚ್ಚಿಟ್ಟ ಆರೋಪಿಗಳ ಮಾತು ಕೇಳಿ ಪೊಲೀಸರೇ ಶಾಕ್!

    ಗುಜರಾತ್‌ನಲ್ಲಿ ಸಂಸ್ಕೃತ ಭಾಷೆ ಉಳಿಸುವ ಕೆಲಸ- ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮಾಹಿತಿ

    ದಂಡ ವಸೂಲಿ ಮಾಡ್ತಿದ್ದ ಪೊಲೀಸರಿಗೆ ಕ್ಲಾಸ್​: ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ವಿರುದ್ಧ ತಿರುಗಿಬಿದ್ದ ಕೆಲ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts