More

    ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್​!

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ವಿರುದ್ಧದ ಜನಾಕ್ರೋಶಕ್ಕೆ ಹೆದರಿ ದೇಶ ತೊರೆದಿದ್ದ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ಮತ್ತೆ ಶ್ರೀಲಂಕಾಕ್ಕೆ ಮರಳಿದ್ದಾರೆ.

    ಜನರ ತೀವ್ರ ಪ್ರತಿಭಟನೆಯ ಬಳಿಕ ಜುಲೈ 13ರಂದು ರಾಜಪಕ್ಸ ದೇಶವನ್ನು ತೊರೆದಿದ್ದರು. ಇದೀಗ ಶುಕ್ರವಾರ ಮಧ್ಯರಾತ್ರಿಯೇ ಕೊಲಂಬೊ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ತಮ್ಮ ಪಕ್ಷದ ಸಚಿವರು ಮತ್ತು ಸಂಸದರು ಏರ್​ಪೋರ್ಟ್​ಗೆ ತೆರಳಿ ರಾಜಪಕ್ಸ ಅವರನ್ನು ಬರಮಾಡಿಕೊಂಡರು.

    ಪ್ರಸ್ತುತ ರಾಜಪಕ್ಸ ಅವರು ಸರ್ಕಾರ ನಿಯೋಜನೆ ಮಾಡಿರುವ ಕೊಲಂಬೊದ ನಿವಾಸದಲ್ಲಿ ವಾಸವಿದ್ದಾರೆ. ದೇಶವನ್ನು ತೊರೆದ ಬಳಿಕ ರಾಜಪಕ್ಸ ಅವರು ವಿಸಿಟರ್​ ವೀಸಾ ಅಡಿಯಲ್ಲಿ ಮಾಲ್ಡೀವ್ಸ್​, ಸಿಂಗಾಪೂರ್​ ಮತ್ತು ಥಾಯ್ಲೆಂಡ್​ನಲ್ಲಿ ನೆಲೆಸಿದ್ದರು. ಸದ್ಯ ಅವರ ವಿರುದ್ಧ ಲಂಕಾದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

    ದ್ವೀಪ ರಾಷ್ಟ್ರ ಶ್ರೀಲಂಕಾ ಹಿಂದೆಂದೂ ಕಾಣದಂತಹ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಕೊಳ್ಳಲಾರದಷ್ಟು ಗಗನಕ್ಕೇರಿದೆ. ಇಂಧನ ಪಡೆಯಲು ವಾರಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಅರಾಜಕತೆ ಲಂಕಾದಲ್ಲಿ ನಿರ್ಮಾಣವಾಗಿದ್ದು, ಇದರಿಂದ ರೊಚ್ಚಿಗೆದ್ದ ಲಂಕಾ ಜನರು ಜುಲೈ 13ರಂದು ಅಧ್ಯಕ್ಷ ಗೋತಬಯ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ, ಅಲ್ಲಿಯೆ ಬೀಡು ಬಿಟ್ಟಿದ್ದರು.

    ಜನಾಕ್ರೋಶ ಮತ್ತು ಬಂಧನದ ಸಾಧ್ಯತೆಯಿಂದ ಪಾರಾಗಲು ಅಧ್ಯಕ್ಷ ಹುದ್ದೆಯಲ್ಲಿ ಇರುವಾಗಲೇ ಗೋತಬಯ ರಾಜಪಕ್ಸ ಅವರು ಜುಲೈ 13ರಂದು ದೇಶ ಬಿಟ್ಟು ಹಾರಿದ್ದರು. ಬಳಿಕ ಮಾಲ್ಡೀವ್ಸ್​ನಿಂದಲೇ ರಾಜೀನಾಮೆ ಘೋಷಣೆ ಮಾಡಿದ್ದರು. ಬಳಿಕ ಮಾಲ್ಡೀವ್ಸ್​ನಿಂದ ಸಿಂಗಾಪೂರ್​ಗೆ ಹಾರಿದ್ದರು. ತಮ್ಮ ಕುಟುಂಬ ಸಮೇತ ಅಲ್ಲಿಯೇ ಇದ್ದ ಗೋತಬಯ ಇದೀಗ ಮರಳಿ ತವರಿಗೆ ಬಂದಿದ್ದಾರೆ. ಮುಂದೆ ಯಾವ ಬೆಳವಣಿಗೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ನಿನ್ಗೆ ಮಾನ-ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ?… ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ಗರಂ, ವಿಡಿಯೋ ವೈರಲ್​

    ಸಿಎಂಗೆ ಐಟಿ ಕಂಪನಿಗಳಿಂದ ಶಾಕಿಂಗ್​ ಪತ್ರ! ಬೆಂಗಳೂರನ್ನು ತೊರೆಯಲು ಐಟಿ ಕಂಪನಿಗಳ ನಿರ್ಧಾರ?

    ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರೀ ವಾಹನಗಳಿಗೆ ನಿರ್ಬಂಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts