More

    ಹುಣಸೂರಿನಲ್ಲಿ ಮನಕಲಕುವ ಘಟನೆ: ಐದು ರೂಪಾಯಿ ನಾಣ್ಯ ನುಂಗಿ ಮಗು ಸಾವು

    ಮೈಸೂರು: ಮಕ್ಕಳು ಮನೆಯಲ್ಲಿರಲಿ ಅಥವಾ ಹೊರಗಡೆ ಆಟವಾಡುತ್ತಿರಲಿ ಪಾಲಕರು ತುಂಬಾ ಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ ಅನಾಹುತಗಳಿಗೆ ಎಡೆಮಾಡಿಕೊಡಬೇಕಾಗುತ್ತದೆ ಎಂಬುದಕ್ಕೆ ಈ ದುರಂತ ಘಟನೆ ತಾಜಾ ಉದಾಹರಣೆ ಆಗಿದೆ.

    ನಾಲ್ಕು ವರ್ಷದ ಹೆಣ್ಣು ಮಗವೊಂದು ಐದು ರೂಪಾಯಿ ನಾಣ್ಯವನ್ನು ನುಂಗಿ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಖುಷಿ ಮೃತ ದುರ್ದೈವಿ. ಮಗು ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿತ್ತು. ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಮಗು ನುಂಗಿದೆ. ತಕ್ಷಣ ಮಗುವನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ವೇಳೆಯೇ ಮಗು ಮೃತಪಟ್ಟಿದೆ.

    ಮಗುವಿನ ಸಾವಿನ ಸುದ್ದಿ ಕೇಳಿದ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ದೀಪವಾಗವಾಗಿದ್ದ ಮಗಳ ಬಾರದ ಲೋಕಕ್ಕೆ ತೆರಳಿದ್ದು, ಮನೆಯಲ್ಲಿ ದುಃಖದ ಕಾರ್ಮೋಡ ಕವಿದಿದೆ. ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿದ್ದರೆ ಇಂತಹ ಅನಾಹುಗಳು ಸಂಭವಿಸುತ್ತಲೇ ಇರುತ್ತದೆ. ಹೀಗಾಗಿ ಮಕ್ಕಳ ಮೇಲೆ ನಿಗಾ ಇರಲಿ. (ದಿಗ್ವಿಜಯ ನ್ಯೂಸ್​)

    ನೆಲದ ಮೇಲೆ ಕುಳಿತು ಕುರಿಗಾಯಿಗಳ ಜತೆ ಪುನೀತ್​ ಊಟ​: ರಾಜಕುಮಾರನ ಸರಳತೆಗೆ ಎಲ್ಲರೂ ಫಿದಾ!

    ಗಂಡ, ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಹತ್ಯೆ ಮಾಡಿದ ತಾಲಿಬಾನಿಗಳು

    ಮೂರೂವರೆ ಲಕ್ಷ ಪಡಿತರ ಚೀಟಿ ಅನರ್ಹ; ಆಹಾರ ಇಲಾಖೆ ಸ್ಪಷ್ಟನೆ, ಆರ್ಥಿಕ ಸಬಲರು ಯೋಜನೆಯಿಂದ ಹೊರಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts