ಗಂಡ, ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಹತ್ಯೆ ಮಾಡಿದ ತಾಲಿಬಾನಿಗಳು

ಕಾಬುಲ್​: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆಂದು ವರದಿಯಾಗಿದೆ. ಆಫ್ಘಾನ್​ನ ಘೋರ್​ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್​ನಲ್ಲಿ ಘನ ಘೋರ ಕೃತ್ಯ ನಡೆದಿದೆ. ಮಹಿಳಾ ಅಧಿಕಾರಿಯನ್ನು ಬಾನು ನೆಗರ್​ ಎಂದು ಗುರುತಿಸಲಾಗಿದೆ. ತಾಲಿಬಾನಿಗಳ ಹಲ್ಲೆಯಿಂದ ಆಕೆಯ ಮುಖ ತುಂಬಾ ವಿರೂಪಗೊಂಡಿದೆ. ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನೆಗರ್​ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. … Continue reading ಗಂಡ, ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಹತ್ಯೆ ಮಾಡಿದ ತಾಲಿಬಾನಿಗಳು