More

    ರಾಜ್ಯ ಸರ್ಕಾರದ ವಿರುದ್ಧ ಹೊಸ ಬಾಂಬ್ ಎಸೆದ ಎಎಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್​ ರಾವ್

    ಬಾಗಲಕೋಟೆ: ಒಂದು ವರ್ಷವಾದರೂ ನನ್ನ ರಾಜೀನಾಮೆ ಅಂಗೀಕಾರ ಮಾಡಿಲ್ಲ. ನನ್ನನ್ನು ಯಾವುದರಲ್ಲಾದರೂ ಸಿಕ್ಕಿಸಬಹುದು ಅಂತ ಇನ್ನೂ ರಾಜೀನಾಮೆ ಸ್ವೀಕಾರ ಮಾಡಿಲ್ಲ. ಬಿಜೆಪಿ ಸೇರಿದರೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು ಎಂದು ಸರ್ಕಾರದ ವಿರುದ್ಧ ಎಎಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್​ ರಾವ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದವರು 70 ವರ್ಷದಲ್ಲಿ ದೇಶವನ್ನು ಲೂಠಿ ಮಾಡಿ ಹಾಳು ಮಾಡಿದ್ದನ್ನು, ಇವರು (ಬಿಜೆಪಿ) 7 ವರ್ಷದಲ್ಲಿ ಮಾಡಿದ್ದಾರೆ. ಅಲ್ಲದೆ, ಭಯದ ವಾತಾವರಣವನ್ನೂ ಉಂಟು ಮಾಡಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.

    ಹೆದರುವಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ
    ಯಾರೂ ಶ್ರೀಮಂತರು ಆಗಿರಬಾರದು. ಜೇಬಲ್ಲಿ ಐದು ರೂಪಾಯಿ ಇದ್ರೆ ಭಯದಿಂದ ಬದುಕಬೇಕು. ಎಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬರುತ್ತಾರೆ ಅಂತ ಹೆದರಬೇಕು. ಆ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಸ್ಥಾನಕ್ಕೆ ಕಳೆದ ವರ್ಷ ಸೆಪ್ಟಂಬರ್ 16ರಂದು ರಾಜೀನಾಮೆ ಕೊಟ್ಟಿದ್ದೇನೆ. ಆಲ್ ಇಂಡಿಯಾ ಸರ್ವಿಸಸ್ ಪ್ರಕಾರ ನನ್ನ ಪಿಂಚಣಿ ರೆಡಿ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮೌಖಿಕವಾಗಿ 15 ಬಾರಿ ಹಾಗೂ ನಾಲ್ಕು ಸಲ ಪತ್ರ ಬರೆದುಕೊಟ್ಟಿದ್ದೇನೆ. ಆದರೂ ಈವರೆಗೂ ನನ್ನ ರಾಜೀನಾಮೆ ಅಂಗೀಕರಿಸಿಲ್ಲ ಎಂದರು. ನಾನು ಬಿಜೆಪಿ ಸೇರಿದ್ರೆ ಇದೆಲ್ಲ ತೊಂದ್ರೆ ಆಗಲ್ಲ ಅಂತ ಪರೋಕ್ಷವಾಗಿ ಹೇಳಿದ್ದಾರೆ. ನನ್ನದಿರಲಿ, ನಮ್ಮ ಕೇಂದ್ರ ನಾಯಕರಾದ ಸಿಸೋಡಿಯಾ ಅವರಿಗೆ ಗಾಳ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಸ್ವಾಭಿಮಾನ ಇರೋರು ಯಾರು ಸರ್ಕಾರದಲ್ಲಿ ಉಳಿಯಲ್ಲ
    ಇನ್ನಷ್ಟು ಪೊಲೀಸ್ ಅಧಿಕಾರಿಗಳು ರಾಜೀನಾಮೆ ಕೊಟ್ಟು ತಮ್ಮ ಜೊತೆಗೆ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಸ್ಕರ್​ ರಾವ್​, ಚುನಾವಣೆ ಹತ್ತಿರ ಬರಲಿ, ನಿಮಗೆ ಎಲ್ಲ ಗೊತ್ತಾಗುತ್ತದೆ. ಈಗ ಅವರ ಹೆಸರು ಹೇಳಿದ್ರೆ ಅವರಿಗೆ ಸರ್ಕಾರ ಬಿಡ್ತದಾ? ನೋಡಿ ಸ್ವಾಭಿಮಾನ ಇರೋರು ಯಾರು ಸರ್ಕಾರದಲ್ಲಿ ಉಳಿಯಲ್ಲ. ಸ್ವಾಭಿಮಾನ ತ್ಯಾಗ ಮಾಡಿಯೇ ಸರ್ಕಾರದಲ್ಲಿ ಇರಬೇಕಾಗಿದೆ. ಎಲ್ಲಾ ಕಡೆಗೂ 40, 50 ಪರ್ಸೆಂಟ್ ದುಡ್ಡು ಕೊಡಿ ಅಂದ್ರೆ, ಸ್ವಾಭಿಮಾನ ಇರೋ ಯಾರಿಗಾದ್ರೂ ಇದು ಕಷ್ಟ. ಬಹಳ ಜನಕ್ಕೆ ನೌಕರಿಯೇ ಬೇಡ, ಇದಕ್ಕಾದ್ರೂ ರಾಜಕೀಯಕ್ಕೆ ಬಂದು ಬಿಡೋಣ ಅನಿಸುತ್ತದೆ. ಬರ್ತಾರೋ ಬಿಡ್ತಾರೋ ಅದು ಬೇರೆ. ಆದರೆ, ಸರ್ಕಾರಿ ನೌಕರಿಯೇ ಬೇಡ ಅಂತಿದ್ದಾರೆ ಎಂದರು.

    ಸರ್ಕಾರದ ಒಳಗಿನ ಅನೇಕ ಮಾಹಿತಿಗಳಿವೆ
    ನನ್ನ ಬಳಿಯೂ ಸರ್ಕಾರದ ಒಳಗಿನ ಅನೇಕ ಮಾಹಿತಿಗಳಿವೆ. ಸಮಯ, ಸಂದರ್ಭ ಬಂದಾಗ ಬಹಿರಂಗ ಪಡಿಸುವ ಬಗ್ಗೆ ನೋಡೋಣ. ಸರ್ಕಾರದ ಒಳಗೆ ಇದ್ದಾಗ ನಮಗೂ ಸಾಕಷ್ಟು ವಿಷಯಗಳು ಇರುತ್ತದೆ. ಅದು ಸರ್ಕಾರದ ನೀತಿಗಳ ಬಗ್ಗೆಯೂ ಇರುತ್ತದೆ ಮತ್ತು ವೈಯಕ್ತಿಕವಾಗಿಯೂ ಇರುತ್ತದೆ. ಅದರ ಬಗ್ಗೆ ಬೀದಿಯಲ್ಲಿ ಒದರಿಕೊಂಡು ಹೋಗುವ ಅವಶ್ಯಕತೆ ಇರಲ್ಲ. ಅವಶ್ಯಕತೆ ಬರೋವಾಗ ಆ ಬಗ್ಗೆ ಮಾತಾಡೋಣ ಎಂದು ಸ್ಫೋಟಕ ಹೇಳಿಕೆ ನೀಡಿದರು.

    ವೈಯಕ್ತಿಕ ಲಾಭಕ್ಕಾಗಿ ಹೇಳಲ್ಲ
    ಹಾಗಾದ್ರೆ ನಿಮ್ಮ ಬಳಿ ಕೆಲವು ಅಸ್ತ್ರ ಇವೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಭಾಸ್ಕರ್​ ರಾವ್​, ಆ ಮನೆ ಒಳಗೆ ಇದ್ದ ಮೇಲೆ ಇದ್ದೆ ಇರ್ತವೆ. ಸದ್ಯಕ್ಕೆ ಸಮಯ ಬಂದಿಲ್ಲ. ನಾನು ವೈಯಕ್ತಿಕ ಲಾಭಕ್ಕಾಗಿ ಹೇಳಲ್ಲ. ನನಗೆ ತೊಂದ್ರೆ ಬಂದಾಗ ಆವಾಗ ರಕ್ಷಣೆ ಮಾಡಿಕೊಳ್ಳಲು ಅಷ್ಟೆ. ಅದು ಡಿಫೆನ್ಸ್ ನಾಟ್ ಫಾರ್ ಅಫೆನ್ಸ್ ಅಂತಾರಲ್ಲ ಆ ರೀತಿ. ನಿಮ್ಮ ನೌಕರಿಯೇ ಬೇಡ, ನಿಮ್ಮ ಸರ್ಕಾರವೇ ಬೇಡ ಅಂತ ನನ್ನಂತೆ ಸಾವಿರಾರು ಜನರು ಇದ್ದಾರೆ. ಆಯ್ತು ಹೋಗ್ರಪ್ಪ ಅಂತ ಬಿಡಲು ಸರ್ಕಾರಕ್ಕೆ ಏನ್ ಕಷ್ಟ? ನನ್ನ ರಾಜೀನಾಮೆ ಅಂಗೀಕರಿಸುವಂತೆ ಮತ್ತೆ ಕೇಳಿಕೊಳ್ಳಲ್ಲ. ಅದಾಗಿಯೇ ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದರು.

    ಬಿಗ್​ಬಾಸ್​ನಿಂದ ಸ್ಫೂರ್ತಿ ಗೌಡ ಎಲಿಮಿನೇಟ್​ ಆಗಿದ್ದೇ ರಾಕೇಶ್​ ಅಭಿಮಾನಿಗಳಿಗೆ ಖುಷಿಯೋ ಖುಷಿ! ಕಾರಣ ಹೀಗಿದೆ…

    ಮಾಜಿ ಸಿಎಂ ಬಿಎಸ್​ವೈ ಕಾರಿನ ಹಿಂದೆ ಹೋಗಲು ಪೈಪೋಟಿ: ಅಪಘಾತದ ಬೆನ್ನಲ್ಲೇ ವಾಗ್ವಾದಕ್ಕಿಳಿದ ನಾಯಕರು

    ವೀರ ಸಾವರ್ಕರ್ ಭಾರತ ಮಾತೆಯ ಹೆಮ್ಮೆಯ ಪುತ್ರ: ರಥಯಾತ್ರೆಗೆ ಚಾಲನೆ ನೀಡಿ ಮಾಜಿ ಸಿಎಂ ಬಿಎಸ್​ವೈ ಭಾಷಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts