More

    VIDEO| ನಡುರಸ್ತೆಯಲ್ಲೇ ಕಾರಿನಲ್ಲಿ ಸಾಹಸ ಮಾಡಲು ಹೋದ ಚಾಲಕ: ಮುಂದೇನಾಯ್ತು ನೀವೇ ನೋಡಿ

    ಶಿಮ್ಲಾ: ವಾಹನಗಳಿರುವುದು ಸುರಕ್ಷಿತ ಪ್ರಯಾಣಕ್ಕೆ ಎಂಬುದನ್ನೇ ಕೆಲವರು ಮರೆತು ಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿಕೊಂಡು, ತಾವೂ ಅಪಾಯಕ್ಕೆ ಸಿಲುಕುವುದಲ್ಲದೆ, ಇತರೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಾರೆ. ಇಂಥದ್ದೆ ಘಟನೆ ಇದೀಗ ಹಿಮಾಚಲ ಪ್ರದೇಶದ ಸೋಲನ್​ ಜಿಲ್ಲೆಯಲ್ಲಿ ನಡೆದಿದೆ.

    ರಸ್ತೆಯಲ್ಲಿ ಕಾರಿನಲ್ಲಿ ಸಾಹಸ ಮಾಡುವಾಗ ನಿಯಂತ್ರಣದ ಕಳೆದುಕೊಂಡ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಕಾರು ಹಾರಿದ ಘಟನೆ ಜುಲೈ 26ರ ಮಂಗಳವಾರ ಸೋಲನ್​ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಕಾರು ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕಾರು ಮಾತ್ರ ಜಖಂಗೊಂಡಿದೆ.

    ಈ ಘಟನೆ ಸೋಲನ್​ನ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದೆ.

    ಕಾರು ಚಾಲಕನನ್ನು ಅಮೃತಸರ ನಿವಾಸಿ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಕಾರು ಚಾಲಕ ಡ್ರೈವಿಂಗ್​ ಮಾಡುತ್ತಾ ಸಾಹಸ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಡಿವೈಡರ್​ಗೆ ಡಿಕ್ಕಿ ಹೊಡೆಯುವ ಕಾರು, ಪಕ್ಕದ ರಸ್ತೆಗೆ ಹಾರುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಲನ್​ ಪೊಲೀಸರು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    VIDEO| ಊಟದಲ್ಲಿ ಹಾವಿನ ತಲೆ ಕಂಡು ಬೆಚ್ಚಿಬಿದ್ದ ವಿಮಾನ ಸಿಬ್ಬಂದಿ: ಭಯಾನಕ ವಿಡಿಯೋ ವೈರಲ್​!

    ನೀವು ಹೀಗೆ ಮಾಡಿದ್ರೆ ಮೊಸಳೆಗಳು ನಿಮ್ಮನ್ನು ಕಚ್ಚದೇ ಬಿಡುವುದಿಲ್ಲ: ಬಿಜೆಪಿಗೆ ಸಿಎಂ ಮಮತಾ ವಾರ್ನಿಂಗ್​

    ಏನಾಯ್ತು ರಾಕಿ ಭಾಯ್​ಗೆ? ಯಾಕಿಷ್ಟು ಸೈಲೆಂಟ್​ ಆಗಿದ್ದಾರೆ? ಆದಷ್ಟು ಬೇಗ ಯಶ್​ ಇದನ್ನು ಮಾಡಲೇಬೇಕಿದೆ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts