More

    ನನ್ನನ್ನು ಅಣ್ಣ ಅಥವಾ ಅಂಕಲ್​ ಎಂದು ಕರೆಯಬೇಡಿ! ಪ್ರಯಾಣಿಕರಿಗೆ ಕಾರು ಚಾಲಕನ ವಿಶೇಷ ಮನವಿ

    ನವದೆಹಲಿ: ಕಿರಾಣಿ ಅಂಗಡಿಯವರು, ರಿಕ್ಷಾ ಓಡಿಸುವವರು ಹಾಗೂ ಕಾರು ಚಾಲಕರು ಸೇರಿದಂತೆ ಹಲವರನ್ನು ಭಯ್ಯಾ (ಅಣ್ಣ) ಅಥವಾ ಅಂಕಲ್​ ಎಂದು ಕರೆಯುವುದು ಭಾರತದಲ್ಲಿ ತುಂಬಾ ಸಾಮಾನ್ಯ. ಇದು ರೂಢಿಗತವಾಗಿ ಬಂದಿದೆ. ನೀವು ಏಕೆ ಈ ರೀತಿ ಕರೆಯುತ್ತೀರಾ ಎಂದು ಕೇಳಿದರೆ, ಹಿಂದಿನಿಂದಲೂ ಹೀಗೆ ಕರೆಯುತ್ತಿದ್ದಾರೆ. ಹೀಗಾಗಿ ನಾವು ಕೂಡ ಕರೆಯುತ್ತೇವೆ ಎನ್ನುತ್ತಾರೆ. ಆದರೆ, ಈ ರೀತಿ ಕರೆಯಿಸಿಕೊಳ್ಳುವುದು ಬಹುತೇಕರಿಗೆ ಇಷ್ಟವಿರುವುದಿಲ್ಲ. ಅನೇಕ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿರುವವರನ್ನು ನಾವು ನೋಡಿದ್ದೇವೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಕಾರು ಚಾಲಕನೊಬ್ಬ ಮಾಡಿರುವ ತಮಾಷೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ತನ್ನ ಹೆಸರನ್ನು ಹೊರತುಪಡಿಸಿ ಬೇರೆ ಏನನ್ನು ಕರೆಯಬೇಡಿ ಎಂದು ಕಾರು ಚಾಲಕನೊಬ್ಬ ತನ್ನ ಪ್ರಯಾಣಿಕರನ್ನು ಮನವಿ ಮಾಡಿಕೊಂಡಿದ್ದಾನೆ. ಸೋಹಿನಿ ಎಂ ಹೆಸರಿನ ಟ್ವಿಟರ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಲಾಗಿದ್ದು, ಫೋಟೋದಲ್ಲಿರುವ ಕಾರಿನ ಒಳಾಂಗಣ ದೃಶ್ಯದಲ್ಲಿ ಮುಂಭಾಗದ ಸೀಟಿನ ಹಿಂಬದಿಯಲ್ಲಿ “ನನ್ನನ್ನು ಭಯ್ಯಾ (ಅಣ್ಣ) ಅಥವಾ ಅಂಕಲ್​ ಎಂದು ಕರೆಯಬೇಡಿ” ಎಂದು ಬರೆಸಿದ್ದಾನೆ.

    ಚಾಲಕನು ತನ್ನ ಹೆಸರನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಕರೆಯಬೇಡಿ ಎಂದು ಪ್ರಯಾಣಿಕರಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಇದೀಗ ಸೋಹಾನಿ ಅವರು ಮಾಡಿರುವ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಚಾಲಕನ ಹಾಸ್ಯಪ್ರಜ್ಞೆಗೆ ಬಹುಪರಾಕ್​ ಎಂದಿದ್ದಾರೆ. ಫೋಟೋ ನೋಡಿದವರು ತಮ್ಮದೇ ರೀತಿಯಲ್ಲಿ ಕಾಮೆಂಟ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ…(ಏಜೆನ್ಸೀಸ್​)

    ಅನ್ಯ ಜಾತಿ ಯುವಕನ ಜತೆ ಮಗಳು ಪರಾರಿ: ಮರ್ಯಾದೆಗೆ ಅಂಜಿ ಸಾವಿನ ಹಾದಿ ಹಿಡಿದ ತಂದೆ, ತಾಯಿ, ಸಹೋದರ

    ಜಮ್ಮು ಕಾಶ್ಮೀರದ ಕಾರಾಗೃಹ ಡಿಜಿಪಿ ಭೀಕರ ಕೊಲೆ: ಹತ್ಯೆಯ ಹೊಣೆ ಹೊತ್ತ PAFF ನಿಂದ ಕೇಂದ್ರ ಸರ್ಕಾರಕ್ಕೆ ಸವಾಲು

    ವಿಶ್ವದ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಶಿವನ ದೇವಸ್ಥಾನದ ಅದ್ಭುತ ದೃಶ್ಯ: ನಿಮ್ಮ ಹುಬ್ಬೇರಿಸೋ ವಿಡಿಯೋ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts