More

    ಮಾಸ್ಕ್​ ಹಾಕದ ಮಹಿಳೆಯನ್ನು ಠಾಣೆಗೆ ಕರೆದೊಯ್ಯುವ ನೆಪದಲ್ಲಿ ಪೇದೆ​ ಮಾಡಿದ್ದನ್ನು ಕೇಳಿದ್ರೆ ಕೋಪ ಬರದೇ ಇರದು!

    ಸೂರತ್​: ಸರಿಯಾಗಿ ಮಾಸ್ಕ್​ ಧರಿಸಿಲ್ಲದಿದ್ದಕ್ಕೆ ಪೊಲೀಸ್​ ಕಾನ್ಸ್​ಟೇಬಲ್​ ಓರ್ವ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿರುವ ಘಟನೆ ಕಳೆದ ವರ್ಷ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.

    2020ರ ಲಾಕ್​ಡೌನ್​ ವೇಳೆ 33 ವರ್ಷದ ಸಂತ್ರಸ್ತ ವಿವಾಹಿತೆ ಮಾಸ್ಕ್​ ಧರಿಸದೇ ಮನೆಯಿಂದ ಹೊರಗಡೆ ಬಂದಿದ್ದಳು. ಈ ವೇಳೆ ಆಕೆಯನ್ನು ತಡೆದ ನರೇಶ್​ ಕಪಾಡಿಯಾ ಎಂಬ ಕಾನ್ಸ್​ಟೇಬಲ್​ ಮಾಸ್ಕ್​ ಬಗ್ಗೆ ಪ್ರಶ್ನಿಸುವುದನ್ನು ಬಿಟ್ಟು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದ. ಸೂರತ್​ನ ಪಲಸನಾ ಏರಿಯದಲ್ಲಿ ಈ ಘಟನೆ ನಡೆದಿತ್ತು.

    ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೆದರಿಸಿ ಆಕೆಯನ್ನು ಪಲಸನಾದಿಂದ ಅಪಹರಣ ಮಾಡಿದ್ದ. ನಿರ್ಜನ ಪ್ರದೇಶವೊಂದಕ್ಕೆ ಕೊಂಡೊಯ್ದು ಮಹಿಳೆಯ ಕೈಗೆ ಬೇಡಿಯನ್ನು ಹಾಕಿ, ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮಾಡಿ ಅತ್ಯಾಚಾರ ಮಾಡಿದ್ದ. ಅಲ್ಲದೆ, ಆಕೆಯ ಬೆತ್ತಲೆ ಫೋಟೋಗಳನ್ನು ಸಹ ಕ್ಲಿಕ್ಕಿಸಿದ್ದ.

    ಇದಾದ ಬಳಿಕ ಫೋಟೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್​ ಮಾಡಿ ಅನೇಕ ಬಾರಿ ಮಹಿಳೆಯನ್ನು ಆರೋಪಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅನೇಕ ದಿನಗಳವರೆಗೆ ಎಲ್ಲವನ್ನು ಸಹಿಸಿಕೊಂಡಿದ್ದ ಮಹಿಳೆ ಆರೋಪಿಯ ಕಿರುಕುಳ ತಾಳಲಾರದೇ ಕೊನೆಗೆ ಮಂಗಳವಾರ ಠಾಣೆಗೆ ದೂರು ನೀಡಿದ್ದಾಳೆ.

    ಆದರೆ. ನರೇಶ್​ ಪತ್ನಿ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ಅವರ ಪತಿ ತಮ್ಮ ನಿವಾಸಕ್ಕೆ ಬಂದು ಜಾತಿ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾರೆಂದು ಆರೋಪಿ ನರೇಶ್ ಕಪಾಡಿಯಾ ಅವರ ಪತ್ನಿ ಆರೋಪಿಸಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಸಂತ್ರಸ್ತೆ ಮತ್ತು ಅವರ ಪತಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    2020ರ ಲಾಕ್​ಡೌನ್ ಸಮಯದಲ್ಲಿ, ಪಲಸನಾದಲ್ಲಿ ಹಾಲು ಖರೀದಿಸಲು ಸಂತ್ರಸ್ತೆ ಹೋಗುತ್ತಿದ್ದಾಗ ಆರೋಪಿ ನರೇಶ್​ ಆಕೆಯನ್ನು ಅಪಹರಿಸಿದ್ದ. ಮಾಸ್ಕ್​ ಧರಿಸದ ಕಾರಣ ಮಹಿಳೆಯ ವಿರುದ್ಧ ಗರಂ ಆಗಿದ್ದ ಆರೋಪಿ ನರೇಶ್​, ಮಹಿಳೆಯನ್ನು ಠಾಣೆಗೆ ಕರೆದೊಯ್ಯುವ ಬದಲು, ಆಕೆಯನ್ನು ನವಸಾರಿ ರಸ್ತೆಗೆ ಕರೆದೊಯ್ದು ವಿಕೃತಿ ಮೆರೆದಿದ್ದ. ಇದನ್ನು ಸಂತ್ರಸ್ತ ಮಹಿಳೆ ಸ್ವತಃ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

    ಮೊಬೈಲ್​ ಸೇರಿದಂತೆ ಎಲೆಕ್ಟ್ರಾನಿಕ್ಸ್​ ವಸ್ತುಗಳನ್ನು ಸಾಗಿಸ್ತಿದ್ದ ಟ್ರಕ್​ ಪಲ್ಟಿ: ಸಿಕ್ಕಿದ್ದನ್ನು ಕದ್ದೊಯ್ದ ಸ್ಥಳೀಯರು

    ಸುಳ್ಳು ಹೇಳಿ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಧವೆಗೆ ಭಾರೀ ಆಘಾತ ನೀಡಿದ ಪತಿ!

    ತಹಸೀಲ್ದಾರ್​ ಕಾರಿನ ಮೇಲೆ ಹಾಡಹಗಲಲ್ಲೇ ದಾಳಿ ಮಾಡಿದ ಯುವಕ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts