More

    ತಪ್ಪಾಗಿ ತಿಳಿದು ಫೈರಿಂಗ್​: ನಾಗಾಲ್ಯಾಂಡ್​ನಲ್ಲಿ ಗುಂಡಿನ ದಾಳಿಗೆ ಗ್ರಾಮಸ್ಥರ ಸಾವು

    ಕೊಹಿಮಾ: ಶನಿವಾರ ರಾತ್ರಿ ನಾಗಾಲ್ಯಾಂಡ್​ನ ಮಾನ್​ ಜಿಲ್ಲೆಯ ಒಟಿಂಗ್​ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಧಿಕ ಮಂದಿ ಗ್ರಾಮಸ್ಥರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದುವರೆಗೂ ಘಟನಾ ಸ್ಥಳದಲ್ಲಿ 6 ಶವಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇನ್ನು ಹೆಚ್ಚಿನ ಶವಗಳು ಸಿಗಬಹುದೆಂದು ಅಂದಾಜಿಸಲಾಗಿದೆ.

    ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಇದು “ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ. ನ್ಯಾಯವನ್ನು ಒದಗಿಸಲು “ಉನ್ನತ ಮಟ್ಟದ” ವಿಶೇಷ ತನಿಖಾ ತಂಡವು ” ಪ್ರಕರಣದ ತನಿಖೆಯನ್ನು ಮಾಡುತ್ತದೆ ಎಂದಿದ್ದಾರೆ. ಸಮಾಜದ ಎಲ್ಲ ವರ್ಗದವರೂ ಶಾಂತಿಯಿಂದ ಇರಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

    ಬಂಡುಕೋರರ ಬಗ್ಗೆ ದೊರೆತ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ತಿರು-ಓಟಿಂಗ್ ರಸ್ತೆಯಲ್ಲಿ ದಾಳಿ ನಡೆಸಲು ಹೊಂಚು ಹಾಕಿದ್ದರು. ಆದರೆ ಗ್ರಾಮಸ್ಥರನ್ನು ದಂಗೆಕೋರರು ಎಂದು ತಪ್ಪಾಗಿ ಭಾವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

    ಘಟನೆಯ ನಂತರ ಕೋಪಗೊಂಡ ಸ್ಥಳೀಯರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ವಾಹನಗಳು ಭದ್ರತಾ ಪಡೆಗಳಿಗೆ ಸೇರಿದವು ಎಂದು ವರದಿಯಾಗಿದೆ. ಘಟನೆಯಲ್ಲಿ ಓರ್ವ ಭದ್ರತಾ ಪಡೆಯ ಯೋಧನು ಸಹ ಹುತಾತ್ಮರಾಗಿದ್ದಾರೆ. (ಏಜೆನ್ಸೀಸ್​)

    ನನ್ಮೇಲೆ ರೇಪ್​ ಆಗಿದೆ ಎಂದು ತಾಯಿಯ ವಿರುದ್ಧವೇ 13 ವರ್ಷದ ಮಗನ ದೂರು: ತನಿಖೆಯಲ್ಲಿ ಸತ್ಯಾಂಶ ಬಯಲು

    ‘ಯಾಹೂ’ನಲ್ಲಿ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪುನೀತ್ ಪಡೆದ ಸ್ಥಾನವಿದು…​ ​

    ಯುವತಿಯ ದ್ವಿಚಕ್ರ ವಾಹನದ ನಂಬರ್​​ ಪ್ಲೇಟ್​ನಲ್ಲಿ ಸೆಕ್ಸ್ ಪದ! RTO ಎಡವಟ್ಟಿನಿಂದ ಮಾನಸಿಕ ಆಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts