More

    ಚೀನಾ ಸರ್ಕಾರಿ ಪ್ರಾಯೋಜಿತ ಹ್ಯಾಕರ್​ಗಳಿಂದ ಲಡಾಖ್​ ಬಳಿಯ ಭಾರತೀಯ ಪವರ್​ ಗ್ರಿಡ್ ಮೇಲೆ ದಾಳಿ​

    ನವದೆಹಲಿ: ಚೀನಾ ಸರ್ಕಾರಿ ಪ್ರಾಯೋಜಿತ ಹ್ಯಾಕರ್​ಗಳು ಇತ್ತೀಚೆಗಷ್ಟೇ ಲಡಾಖ್ ಬಳಿಯ ಭಾರತೀಯ ವಿದ್ಯುತ್​​ ವಿತರಣಾ ಕೇಂದ್ರವನ್ನು ಟಾರ್ಗೇಟ್ ಮಾಡಿರುವ ಸಂಗತಿಯನ್ನು ರೆಕಾರ್ಡೆಡ್​​ ಫ್ಯೂಚರ್​ ಹೆಸರಿನ​ ಖಾಸಗಿ ಗುಪ್ತಚರ ಇಲಾಖೆ ಬುಧವಾರ ವರದಿ ಮಾಡಿದೆ.

    ಇತ್ತೀಚಿನ ತಿಂಗಳುಗಳಲ್ಲಿ ಆಯಾ ರಾಜ್ಯಗಳಲ್ಲಿ ಗ್ರಿಡ್ ನಿಯಂತ್ರಣ ಮತ್ತು ವಿದ್ಯುಚ್ಛಕ್ತಿ ಸರಬರಾಜು ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಕನಿಷ್ಠ ಏಳು ಭಾರತೀಯ ಸ್ಟೇಟ್ ಲೋಡ್ ಡೆಸ್ಪ್ಯಾಚ್ ಕೇಂದ್ರಗಳನ್ನು (SLDC) ಗುರಿಯಾಗಿಸಿಕೊಂಡು ಹ್ಯಾಕ್​ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಈ ಗುರಿಯು ಭೌಗೋಳಿಕವಾಗಿ ಕೇಂದ್ರೀಕೃತವಾಗಿದೆ. ಗುರುತಿಸಲಾದ ಎಸ್‌ಎಲ್‌ಡಿಸಿಗಳು ಉತ್ತರ ಭಾರತದಲ್ಲಿ ನೆಲೆಗೊಂಡಿವೆ. ಲಡಾಖ್‌ನಲ್ಲಿನ ವಿವಾದಿತ ಭಾರತ-ಚೀನಾ ಗಡಿಯ ಸಮೀಪದಲ್ಲಿವೆ ಎಂದು ರೆಕಾರ್ಡೆಡ್​​ ಫ್ಯೂಚರ್​ ತಿಳಿಸಿದೆ.

    ಪವರ್ ಗ್ರಿಡ್ ಸ್ವತ್ತುಗಳ ಜತೆಗೆ ರಾಷ್ಟ್ರೀಯ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಮತ್ತು ಬಹುರಾಷ್ಟ್ರೀಯ ಲಾಜಿಸ್ಟಿಕ್ಸ್ ಕಂಪನಿಯ ಭಾರತೀಯ ಅಂಗಸಂಸ್ಥೆಗೂ ಇದೇ ಬೆದರಿಕೆ ಎದುರಾಗಿದೆ. ನಾವು ಈ ವರದಿಯನ್ನು ಪ್ರಕಟಿಸುವ ಮುನ್ನ ತಮ್ಮ ಸಂಶೋಧನೆಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಸಿದ್ದೇವೆ ಎಂದು ರೆಕಾರ್ಡೆಡ್ ಫ್ಯೂಚರ್ ಹೇಳಿದೆ.

    ರೆಕಾರ್ಡೆಡ್​​ ಫ್ಯೂಚರ್​, ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳಿಂದ ಬರುವ ಬೆದರಿಕೆಗಳನ್ನು ಗುರುತಿಸುವಲ್ಲಿ ಪರಿಣತಿಯನ್ನು ಹೊಂದಿರುವ ವಿಶ್ವದ ದೊಡ್ಡ ಸಂಸ್ಥೆಯಾಗಿದೆ. ಚೀನಾದ ದಾಳಿಕೋರರು ನಿರ್ಣಾಯಕ ಮೂಲಸೌಕರ್ಯ ವ್ಯವಸ್ಥೆಗಳ ಸುತ್ತಲಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ 18 ತಿಂಗಳುಗಳಲ್ಲಿ ಭಾರತದಲ್ಲಿ ರಾಜ್ಯ ಮತ್ತು ಪ್ರಾದೇಶಿಕ ಲೋಡ್ ಡೆಸ್ಪ್ಯಾಚ್ ಕೇಂದ್ರಗಳ ಮೇಲೆ ನಿರಂತರ ಟಾರ್ಗೆಟ್​ ಮಾಡಲಾಗಿದ್ದು, ಮಾಹಿತಿ ಕಳ್ಳತನ ನಡೆದಿದೆ ಎಂದು ಈ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್​)

    ಕುವೈತ್​ ಬೆನ್ನಲ್ಲೇ ಬೀಸ್ಟ್​ ಚಿತ್ರಕ್ಕೆ ತಮಿಳುನಾಡಲ್ಲೂ ಎದುರಾಯ್ತು ಸಂಕಷ್ಟ: ಬ್ಯಾನ್​ ಆಗುತ್ತಾ ವಿಜಯ್​ ಸಿನಿಮಾ?

    ಏನಿದು ಸ್ಯಾಮ್​? ಮಾಜಿ ಪತಿಯ ಫೋಟೋ ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಸಮಂತಾ..!

    ಪ್ರೇಯಸಿಗಾಗಿ ಪರಿಚಯಸ್ಥರ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts