More

    ಅಷ್ಟೆಲ್ಲಾ ರಾಜಕಾರಣ ಗೊತ್ತಿರೋನು ಯಾಕೆ ಆತ್ಮಹತ್ಯೆ ಮಾಡ್ಕೊಂಡ? ಅನುಮಾನ ವ್ಯಕ್ತಪಡಿಸಿದ ಸಿಟಿ ರವಿ

    ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಕುರಿತು ಬಿಜೆಪಿ ನಾಯಕ ಸಿ.ಟಿ ರವಿ ಅವರು ಅನುಮಾನ ಹೊರಹಾಕಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಶ್ವರಪ್ಪ ರಾಜೀನಾಮೆ ಕುರಿತು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

    ಡಿವೈಎಸ್ಪಿ ಗಣಪತಿ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲಿಕೆ ಮಾಡಲು ಬರುವುದಿಲ್ಲ. ಸಮಾಜದಲ್ಲಿ ಸತ್ತವರ ಪರ ಸ್ವಾಭಾವಿಕವಾಗಿ ಕರುಣೆ ಇರುತ್ತದೆ. ಶಾಸಕನಾಗಿ ನಾನೇ ರಿಸ್ಕ್ ತೆಗೆದುಕೊಂಡು 5-10 ಲಕ್ಷದ ಕೆಲಸವನ್ನ ಮಾಡಿಸಿದ್ದೇನೆ. ಕೋಟಿಗಟ್ಟಲೆ ಕಾಮಗಾರಿಯನ್ನು ಮಂಜೂರು ಆಗದೇ ಕೆಲಸ ಮಾಡೋಕೆ ಬರುತ್ತಾ? ಎಂದು ಪ್ರಶ್ನಿಸಿದರು.

    ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತ ಇರೋದು ಸ್ಪಷ್ಟವಾಗಿದೆ. ಸಂತೋಷನನ್ನು ನಮ್ಮ ಪಕ್ಷದ ಕಾರ್ಯಕರ್ತ ಅಂತಾನೂ ಹೇಳುತ್ತಾರೆ. ರಾಹುಲ್ ಗಾಂಧಿ ಹೆಸರು ನಕಲು ಮಾಡಿ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದ ಅಂತಾ ಕೂಡ ಹೇಳುತ್ತಾರೆ. ಸಾವು ದುರದೃಷ್ಟಕರ, ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

    ಸಂತೋಷ್ ಪಾಟೀಲ್ ದೆಹಲಿ ಹೋಗಿ ಸುದ್ದಿಗೋಷ್ಠಿ ಮಾಡುತ್ತಾರೆ. ಸಾಮಾನ್ಯ ವ್ಯಕ್ತಿಗಳು ದೆಹಲಿಗೆ ಹೋಗಿ ಸುದ್ದಿಗೋಷ್ಠಿ ಮಾಡಲು ಆಗುತ್ತಾ? ಅಷ್ಟೆಲ್ಲಾ ರಾಜಕಾರಣ ಗೊತ್ತಿರುವವನು ಆತ್ಮಹತ್ಯೆಗೆ ಯಾಕೆ ಶರಣಾದ? ನಿಜವಾಗಲೂ ಆತ್ಮಹತ್ಯೆ ನಡೆದಿದ್ಯಾ? ಇಲ್ಲಾ ಇದರ ಹಿಂದೆ ಬೇರೆ ಏನಾದರೂ ಇದೆಯಾ? ಈ ಎಲ್ಲದರ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು. ಸಾವಿನ ಹಿಂದೆ ಕಾಣದ ಕೈಗಳೋ, ಕಾಣುವ ಕೈಗಳೊ ಅಥವಾ ಕೈಗಳೇ ಇದೆಯಾ ಎಂಬುದು ತನಿಖೆ ನಂತರ ಗೊತ್ತಾಗಬೇಕು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಗುತ್ತಿಗೆದಾರ ಸಂತೋಷ್ ಸಾವಿನ ಕಿಂಗ್​ಪಿನ್​ ಡಿಕೆಶಿ! ಶುದ್ಧ ತನಿಖೆ ನಡೆಸಿದ್ರೆ ಒಂದೇ ದಿನದಲ್ಲಿ ಬಯಲಾಗುತ್ತೆ: ಕಾಳಿ ಸ್ವಾಮಿ

    ಇತ್ತೀಚೆಗಷ್ಟೇ MBBS​ ಮುಗಿಸಿದ್ದ ಮಾಜಿ ಶಾಸಕರ ಪುತ್ರಿ ನೇಣಿಗೆ ಶರಣು

    ಮೊಟ್ಟ ಮೊದಲ ಬಾರಿಗೆ ಸಚಿವೆಯಾಗುವ ಮೂಲಕ ತನ್ನ ಮೇಲಿನ ಕಳಂಕ ತೊಡೆದು ಹಾಕಿದ ನಟಿ ರೋಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts