ಡಿವೋರ್ಸ್ ಬೆನ್ನಲ್ಲೇ ಮಾಜಿ ಪತಿಗೆ ಶಾಕ್​ ಕೊಟ್ಟ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ!

ಜೈಪುರ: ಕಳೆದ ವರ್ಷ ಪತಿಯಿಂದ ಡಿವೋರ್ಸ್​ ಪಡೆದಿದ್ದ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರು ಎರಡನೇ ಮದುವೆಯನ್ನು ಖಚಿತಪಡಿಸಿದ್ದಾರೆ.

2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್​​ ಖಾನ್​ ಅವರು ಎರಡನೇ ರ್ಯಾಂಕ್​ ಪಡೆದಿದ್ದರು. ತರಬೇತಿ ಸಮಯದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ, 2018ರಲ್ಲಿ ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್​ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮದುವೆಯಾದ ಎರಡು ವರ್ಷಗಳ ಬಳಿಕ 2020ರ ನವೆಂಬರ್ ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್​ ತಿಂಗಳಲ್ಲಿ ದಂಪತಿಯ ಡಿವೋರ್ಸ್​ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಇದೀಗ ಇಬ್ಬರು ಮಾಜಿ ದಂಪತಿಗಳಾಗಿದ್ದಾರೆ.

ಡಿವೋರ್ಸ್​ ಪಡೆದ ಬೆನ್ನಲ್ಲೇ ಟೀನಾ ಡಾಬಿ ಅವರು ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ಸೇವೆಯಲ್ಲಿ ತನಗಿಂತ ಮೂರು ವರ್ಷ ಹಿರಿಯರಾದ ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಟೀನಾ ಮರು ಮದುವೆ ಆಗಲಿದ್ದಾರೆ. ಟ್ವಿಟರ್​​ನಲ್ಲಿ ಒಟ್ಟಿಗಿರುವ ಫೋಟೋವನ್ನು ಪೋಸ್ಟ್​ ಮಾಡಿ ಎರಡನೇ ಮದುವೆಯನ್ನು ಟೀನಾ ಖಚಿತಪಡಿಸಿದ್ದಾರೆ.

ಇನ್ನು ಮಾಜಿ ಪತಿ ಅಥರ್​ ಖಾನ್​ ಮತ್ತು ಟೀನಾ ಡಾಬಿ ಮದುವೆ ಬಹಳ ಅದ್ಧೂರಿಯಾಗಿ ನಡೆದಿತ್ತು. ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಆಶೀರ್ವದಿಸಿದ್ದರು. ಇವರಿಬ್ಬರ ಮದುವೆ ಭಾರೀ ಸುದ್ದಿ ಸಹ ಆಗಿತ್ತು.

ಟೀನಾ ಡಾಬಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಖಾನ್ ಎಂಬ​ ಸರ್​ನೇಮ್​ ತೆಗೆದು ಹಾಕಿದಾಗಿನಿಂದ ಇಬ್ಬರ ನಡುವಿನ ವಿವಾಹ ಸಂಬಂಧ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಅದೇ ಸಮಯದಲ್ಲಿ ಅಥರ್​ ಸಹ ಇನ್​ಸ್ಟಾಗ್ರಾಂನಲ್ಲಿ ಟೀನಾ ಅವರನ್ನು ಅನ್​ಫಾಲೋ ಮಾಡಿದ್ದು, ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿ ನೀಡಿತ್ತು.

ಇನ್ನು ಟೀನಾ ಡಾಬಿ ಮತ್ತು ಅಥರ್​ ಖಾನ್​ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ದಂಪತಿಗೆ ಶುಭಕೋರಿದರೆ, ಹಿಂದು ಮಹಾಸಭಾ, ಐಎಎಸ್​ ಅಧಿಕಾರಿಗಳಿಬ್ಬರ ಮದುವೆಯನ್ನು ಲವ್​ ಜಿಹಾದ್ ಎಂದು​ ಕರೆದಿತ್ತು. ಇದೀಗ ಮೊದಲ ಮದುವೆಯನ್ನು ಮುರಿದುಕೊಂಡಿರುವ ಟೀನಾ ಎರಡನೇ ಮದುವೆ ಮೂಲಕ ಹೊಸ ಜರ್ನಿ ಆರಂಭಿಸಲು ಸಿದ್ಧರಾಗಿದ್ದಾರೆ. (ಏಜೆನ್ಸೀಸ್​)

ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!

ಕೆಜಿಎಫ್‌ ಚಾಪ್ಟರ್ 2 ಸಿನಿಮಾಗೆ ಯಶ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?

Samantha Brand Value: ಜಾಹೀರಾತಿಗೆ, ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಪಡೆಯೋದು ಎಷ್ಟು ಲಕ್ಷ?

Share This Article

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…