More

    ಯೋಧನ ಮೃತದೇಹ ಹಸ್ತಾಂತರಿಸಿ ಹಿಂತಿರುಗುತ್ತಿದ್ದ ಪೊಲೀಸ್​ ಸಿಬ್ಬಂದಿಯ ಪ್ರಾಣ ಹೊತ್ತೊಯ್ದ ಜವರಾಯ..!

    ಶ್ರೀಕಾಕುಳಂ: ಓರ್ವ ಸಬ್​ ಇನ್ಸ್​ಪೆಕ್ಟರ್​ ಸೇರಿದಂತೆ ನಾಲ್ವರು ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಸಾ ಬಳಿಯಿರುವ ಹೆದ್ದಾರಿ-16ರಲ್ಲಿ ಸೋಮವಾರ ನಡೆದಿದೆ.

    ಪೊಲೀಸ್​ ಜೀಪ್​ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಜೆ. ಕೃಷ್ಣುಡು (ಎಆರ್​-ಎಸ್​ಐ) (58), ವೈ ಬಾಬು ರಾವ್​ (53), ಟಿ. ಆಂಟೋನಿ (50) (ಹೆಡ್​ ಕಾನ್ಸ್​ಟೇಬಲ್​ಗಳು​) ಮತ್ತು ಪಿ. ಜನಾರ್ಧನ ರಾವ್​ (ಕಾನ್ಸ್​ಟೇಬಲ್​-ಚಾಲಕ) (47) ಎಂದು ಗುರುತಿಸಲಾಗಿದೆ.

    ಘಟನೆ ಬಗ್ಗೆ ಪೊಲೀಸ್​ ಮಹಾನಿರ್ದೇಶಕ ಡಿ. ಗೌತಮ್​ ಸಾವಂಗ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಭೈರಿ ಸಾರಂಗಪುರಂನಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಶ್ರೀಕಾಕುಳಂಗೆ ಹಿಂತಿರುಗುವಾಗ ನಾಲ್ವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮತ್ತು ಶ್ರೀಕಾಕುಳಂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಡಿಜಿಪಿ ಸೂಚನೆ ನೀಡಿದ್ದಾರೆ.

    ನಾಲ್ವರು ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಪೊಲೀಸ್​ ಇಲಾಖೆಗೆ ನಷ್ಟವಾಗಿದೆ ಎಂದು ಡಿಜಿಪಿ ಸಾವಂಗ್​ ಹೇಳಿದ್ದಾರೆ. ಮೃತರ ಕುಟುಂಬದ ನೆರವಿಗೆ ಇಲಾಖೆ ನಿಲ್ಲಲಿದೆ ಎಂದು ಅಭಯ ನೀಡಿದ್ದು, ಆಂಧ್ರ ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಸಹ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಅವರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. (ಏಜೆನ್ಸೀಸ್​)

    ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣ: ನಟಿ ರಾಗಿಣಿ, ಸಂಜನಾ ಸೇರಿ ಹಲವರ ಡ್ರಗ್ಸ್ ಸೇವನೆ ಖಚಿತ

    ಸ್ಥಳೀಯ ಹೋರಾಟಗಾರರ ಗುಂಡೇಟಿಗೆ ತಾಲಿಬಾನ್​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರು ಫಿನಿಶ್​..!

    ಮಕ್ಕಳಿಗೆ ಮೂರನೇ ಅಲೆ ಅಪಾಯ ಆತಂಕ; ಎನ್​ಐಡಿಎಂ ವರದಿ, ಎಚ್ಚರಿಕೆ ಅಕ್ಟೋಬರ್​ನಲ್ಲಿ ಉತ್ತುಂಗದ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts