More

    VIDEO| ನೋಡ ನೋಡುತ್ತಿದ್ದಂತೆ ಪ್ರಯಾಣಿಕರ ಸಮೇತ ನೀರುಪಾಲಾದ ಸರ್ಕಾರಿ ಬಸ್​..!

    ಯವತ್ಮಾಲ್​ (ಮಹಾರಾಷ್ಟ್ರ): ಎಂಟು ಪ್ರಯಾಣಿಕರಿದ್ದ ಮಹಾರಾಷ್ಟ್ರದ ಸರ್ಕಾರಿ ಬಸ್ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಚಲಿಸುವಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಘಟನೆ ಮಂಗಳವಾರ ಬೆಳಗ್ಗೆ ಯವತ್ಮಾಲ್​ ಜಿಲ್ಲೆಯ ಉಮರ್ಖೇದ್​ ಪಟ್ಟಣದಲ್ಲಿ ನಡೆದಿದೆ.

    ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚಾಲಕ ಬಸ್​ ಚಲಾಯಿಸಿಕೊಂಡು ಹೋಗಿದ್ದೇ ಅನಾಹುತಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸರ್ಕಾರಿ ಬದ್​ ನಾಂದೇಡ್​ನಿಂದ ನಾಗ್ಪುರಕ್ಕೆ ತೆರಳುತ್ತಿತ್ತು. ನಡುವೆ ಉಮರ್ಖೇದ್​ನಲ್ಲಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಭಾರಿ ಮಳೆಯ ಪ್ರವಾಹದಿಂದ ಉಕ್ಕಿ ಹರಿಯುತ್ತಿತ್ತು. ನೀರಿನಲ್ಲಿ ಕೆಲವೇ ದೂರ ಸಾಗಿದ ಬಸ್​, ಸೇತುವೆ ಹೋಗುತ್ತಿದ್ದಂತೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ.

    ಕೊಚ್ಚಿ ಹೋಗುತ್ತಿದ್ದ ಬಸ್​ ಮರವೊಂದರ ಕೊಂಬೆಗೆ ಸಿಲುಸಿಕೊಂಡಿದೆ. ಹೇಗೋ ನಾಲ್ವರು ಪ್ರಯಾಣಿಕರು ಬಸ್​ನ ರೂಫ್​ ಏರಿ ಬಚಾವ್​ ಆಗಿದ್ದಾರೆ. ಇನ್ನು ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇನ್ನೊಬ್ಬ ಪ್ರಯಾಣಿಕ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ.

    ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು, ರಾಜ್ಯ ಸಾರಿಗೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ತಂಡಗಳು ಸುತ್ತಮುತ್ತಲಿನ ಹಳ್ಳಿಗಳ ಯುವಕರೊಂದಿಗೆ ರಕ್ಷಣಾ ಕಾರ್ಯ ನಡೆಸುತ್ತಿದೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಲೋಕಮಾತ ನ್ಯೂಸ್​)

    ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್​ಗೌಡ ರಾಜೀನಾಮೆ: ಸಂಸದ ಜಿಎಸ್​ಬಿ, ಸಚಿವ ಮಾಧುಸ್ವಾಮಿ ಹೆಸರು ತಳುಕು

    ಅತ್ಯಾಚಾರ ಸಂತ್ರಸ್ತೆಯ ಜೀವ ಉಳಿಸಿದ ನಟಿ ಜ್ಯೋತಿಕಾ ಸಿನಿಮಾ: ಸಂಬಂಧಿಯ ಕರಾಳ ಮುಖ ಬಿಚ್ಚಿಟ್ಟ ಬಾಲಕಿ

    ಏಷ್ಯಾದ ಅತಿದೊಡ್ಡ ಸುರಂಗ ಮಾರ್ಗ ಶೀಘ್ರ ಮುಕ್ತಾಯ: ಚೀನಾ-ಪಾಕ್‌ ಗಡಿಯಲ್ಲಿರೋ ಇದಕ್ಕಿದೆ ಹಲವಾರು ವಿಶೇಷತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts