More

    ಆ ಹೀರೋ ನಿಜಕ್ಕೂ ಹಾಟ್​! ಸೌತ್​ ನಟನ ಬಗ್ಗೆ ಬೋಲ್ಡ್​ ಕಾಮೆಂಟ್​ ಮಾಡಿದ ಬಾಲಿವುಡ್​ ಬ್ಯೂಟಿ

    ಮುಂಬೈ: ಅತ್ರಂಗಿ ರೇ ಚಿತ್ರದ ಮೂಲಕ ಸಾರಾ ಅಲಿ ಖಾನ್​, ಧನುಷ್​ ಮತ್ತು ಅಕ್ಷಯ್ ಕುಮಾರ್​ ಒಟ್ಟಿಗೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಬೆಳ್ಳಿಪರದೆಯಲ್ಲದೆ, ನೇರವಾಗಿ ಡಿಸ್ನಿ ಹಾಟ್​ಸ್ಟಾರ್​ ಮೂಲಕ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಡಿಸೆಂಬರ್​ 24ರಿಂದ ಸಿನಿಮಾವೂ ಪ್ರಸಾರವಾಗಲಿದ್ದು, ಅಭಿಮಾನಿಗಳು ಮೂವರನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ​

    ರೊಮ್ಯಾಂಟಿಕ್​ ಸಿನಿಮಾದಲ್ಲಿ ಸಾರಾ ಅಲಿ ಖಾನ್​ ನಾಯಕಿ ಪಾತ್ರವನ್ನು ಮಾಡಿದ್ದರೆ, ಧನುಷ್​ ಮತ್ತು ಅಕ್ಷಯ್​ ಕುಮಾರ್ ನಾಯಕಿಯನ್ನು ಪ್ರೀತಿಯ ಬಲೆ ಬೀಳಿಸಿಕೊಳ್ಳಲು ಪೈಪೋಟಿಗೆ ಬೀಳುವ ನಾಯಕರಾಗಿದ್ದಾರೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇತ್ತೀಚೆಗಷ್ಟೇ ಸಾರಾ ಮಾಧ್ಯಮ ಸಂದರ್ಶನವೊಂದಲ್ಲಿ ಭಾಗವಹಿಸಿದ್ದರು. ಈ ವೇಳೆ ತೆಲುಗು ನಟ ವಿಜಯ್​ ದೇವರಕೊಂಡ​ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ಸಾರಾ ನೀಡಿದ್ದಾರೆ.

    ದಕ್ಷಿಣ ಭಾರತದ ಸಿನಿಮಾ ಹೀರೋಗಳ ಜತೆ ನಟಿಸುವುದಾದರೆ, ನೀವು ಯಾವ ನಟನೊಂದಿಗೆ ತೆರೆಹಂಚಿಕೊಳ್ಳಲು ಬಯಸುತ್ತೀರಾ ಎಂಬ ಮಾಧ್ಯಮ ಪ್ರಶ್ನೆ ಸಾರಾಗೆ ಎದುರಾಯಿತು. ಈ ವೇಳೆ ಉತ್ತರಿಸಿದ ಅವರು ನಾನು ವಿಜಯ ದೇವರಕೊಂಡ ಜತೆಯಲ್ಲಿ ನಟಿಸಲು ಬಯಸುತ್ತೇನೆಂದರು. ಅವರೊಬ್ಬ ಶ್ರೇಷ್ಠ ನಟ. ಅವರು ಕೂಲ್​ ಮಾತ್ರವಲ್ಲ ನಿಜಕ್ಕೂ ತುಂಬಾ ಹಾಟ್ ಎನ್ನುವ ಮೂಲಕ ಬೋಲ್ಡ್​ ಕಾಮೆಂಟ್​ ಮಾಡಿದ್ದಾರೆ.

    ಈ ಹಿಂದೆಯೂ ಸಾರಾ ವಿಜಯ್​ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಅರ್ಜುನ್​ ರೆಡ್ಡಿ ಸಿನಿಮಾ ಮೂಲಕ ಎಲ್ಲೆಡೆ ಮನೆ ಮಾತಾಗಿರುವ ವಿಜಯ್​ ದೇವರಕೊಂಡ ಇದೀಗ ಪೂರಿ ಜಗನ್ನಾಥ್​ ನಿರ್ದೇಶನದ “ಲೈಗರ್​” ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. (ಏಜೆನ್ಸೀಸ್​)

    71ನೇ ವಸಂತಕ್ಕೆ ಕಾಲಿಟ್ಟ ತಲೈವಾಗೆ ಶುಭಾಶಯಗಳ ಮಹಾಪೂರ: ರಜನಿ ಬಗ್ಗೆ ನಿಮಗೆ ತಿಳಿಯಬೇಕಾದ 12 ವಿಶೇಷ ಸಂಗತಿಗಳು!

    ಜೂನಿಯರ್​ ಎನ್​ಟಿಆರ್​​ ಧರಿಸಿರುವ ಈ ವಾಚ್​ನ​ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತಿರಾ..!

    ಹಾಸ್ಯನಟ ಸಂಜು ಬಸಯ್ಯ ಅವರದ್ದು 8 ವರ್ಷಗಳ ಪ್ರೀತಿ! ಪ್ರೇಯಸಿ ಜೊತೆಗಿನ ಫೋಟೋಗಳು ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts