More

    ಟೆನಿಸ್ ದಂತಕತೆ ರೋಜರ್‌ ಫೆಡರರ್ ವಿದಾಯದ ಪಂದ್ಯ: ಫೆಡರರ್​ ಜೊತೆ ಕಣ್ಣೀರಿಟ್ಟ ನಡಾಲ್, ವಿಡಿಯೋ ವೈರಲ್

    ನವದೆಹಲಿ: ಸ್ವಿಡ್ಜರ್​ಲೆಂಡ್‌ ಲೆಜಂಡರಿ ಆಟಗಾರ, ಟೆನಿಸ್​​ ದಂತಕಥೆ ರೋಜರ್‌ ಫೆಡರರ್ ತಮ್ಮ ಎರಡು ದಶಕಗಳ ಟೆನಿಸ್​​ ಜಗತ್ತಿಗೆ ನಿವೃತ್ತಿ ಘೋಷಿಸಿದ್ದು, ಕಣ್ಣೀರಿನ ವಿದಾಯ ಹೇಳಿದ್ದಾರೆ.

    ರಾಫೆಲ್ ನಡಾಲ್ ಅವರೊಂದಿಗೆ ನಡೆದ ಕೊನೆಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ರೋಜರ್, ಭಾರವಾದ ಹೃದಯದಿಂದಲೇ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ ರಾಫೆಲ್ ನಡಾಲ್ ಅಹ ಭಾವುಕಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಇವರ ಈ ನಿರ್ಧಾರ ಕೇಳಿ ರಾಫೆಲ್ ನಡಾಲ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ಇಬ್ಬರು ದಿಗ್ಗಜರ ಅಳು, ಸ್ನೇಹಕ್ಕೆ ಇಡೀ ಟೆನಿಸ್ ಜಗತ್ತೇ ಸಾಕ್ಷಿಯಾಗಿತ್ತು. ಪಂದ್ಯ ಮುಕ್ತಾಯದ ಬಳಿಕ ರೋಜರ್ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗಿ ತಮ್ಮ ಟೆನಿಸ್ ವೃತ್ತಿಬದುಕನ್ನು ಸ್ಮರಿಸಿದರು.

    ಯಾವ ಪ್ರತಿಸ್ಪರ್ಧಿಗಳು ಪರಸ್ಪರ ಈ ರೀತಿಯಾಗಿ ಭಾವುಕರಾಗುತ್ತಾರೆ. ಇದುವೇ ಕ್ರೀಡಾ ಸೌಂದರ್ಯ. ಇದು ನನ್ನ ಪಾಲಿಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರವಾಗಿದೆ. ಇದನ್ನು ಗೌರವಿಸುವುದನ್ನು ಬಿಟ್ಟು ಬೇರೇನೂ ಇಲ್ಲ ಎಂದು ವಿರಾಟ್​ ಕೊಯ್ಲಿ ಹೇಳಿದರು.

    ರೋಜರ್ ಫೆಡರರ್-ರಾಫೆಲ್ ನಡಾಲ್ ಎದುರು ರೆಸ್ಟ್‌ ಆಫ್‌ ದಿ ವರ್ಲ್ಡ್​ ತಂಡದ ಫ್ರಾನ್ಸೆಸ್‌ ಟಿಯಾಫೋ ಮತ್ತು ಜ್ಯಾಕ್‌ ಸಾಕ್‌ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಗೆಲುವು ದಾಖಲಿಸಿತು.

    ಸದ್ಯ 41 ವರ್ಷ ಪ್ರಾಯದ ರೋಜರ್, ತಾನು 24 ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾಗಿ ಹೇಳಿಕೊಂಡಿದ್ದಾರೆ. 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಫೆಡರರ್‌ 2022ರ ಲೇವರ್ ಕಪ್ ಬಳಿಕ ಸಿಂಗಲ್ಸ್ ಟೆನಿಸ್‌ನಿಂದ ನಿವೃತ್ತಿ ಹೊಂದಿದರು. ಕಳೆದ ಸೆ.15ರಂದೇ ವಿದಾಯ ಘೋಷಿಸಿದರು. ಇಂದು ನಡೆದ ಪಂದ್ಯವು ಅವರ ವಿದಾಯದ ಪಂದ್ಯವಾಗಿತ್ತು.

    ಟೆನಿಸ್ ದಂತಕತೆ ರೋಜರ್‌ ಫೆಡರರ್ ವಿದಾಯದ ಪಂದ್ಯ: ಫೆಡರರ್​ ಜೊತೆ ಕಣ್ಣೀರಿಟ್ಟ ನಡಾಲ್, ವಿಡಿಯೋ ವೈರಲ್

    ಟೆನಿಸ್ ದಂತಕತೆ ರೋಜರ್‌ ಫೆಡರರ್ ವಿದಾಯದ ಪಂದ್ಯ: ಫೆಡರರ್​ ಜೊತೆ ಕಣ್ಣೀರಿಟ್ಟ ನಡಾಲ್, ವಿಡಿಯೋ ವೈರಲ್

    ಕೈಯಲ್ಲಿ ಗನ್​ ಹಿಡಿದು ನಡುಕ ಹುಟ್ಟಿಸಿದ ಯುವಕನನ್ನು ಕಷ್ಟಪಟ್ಟು ಸೆರೆಹಿಡಿದ್ರೆ ಕೊನೇಲಿ ಕಾದಿತ್ತು ರೋಚಕ ಟ್ವಿಸ್ಟ್​!

    ಮಂಗಳೂರು ಹಾಸ್ಟೆಲ್​ನಿಂದ ಮೂವರು ವಿದ್ಯಾರ್ಥಿನಿಯರು ಮಿಸ್ಸಿಂಗ್​: ಪೊಲೀಸರ ನಿದ್ದೆಗೆಡಿಸಿದ್ದವರು ಕೊನೆಗೂ ಸಿಕ್ಕರು!

    VIDEO: ಯುವತಿಯ ಹತ್ಯೆ; ಬಿಜೆಪಿ ನಾಯಕನ ಪುತ್ರನ ರೆಸಾರ್ಟ್​ ಮೇಲೆ ಬುಲ್ಡೋಜರ್​- ನ್ಯಾಯ ಎಲ್ಲರಿಗೂ ಒಂದೇ ಎಂದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts