More

    ಅಂಗನವಾಡಿ ಕಾರ್ಯಕರ್ತೆ ಬಂಧನ: 4 ಮನೆ, 14 ನಿವೇಶನ ಆಕೆಯ ಒಟ್ಟು ಆಸ್ತಿ ಮೌಲ್ಯ ಕಂಡು ಅಧಿಕಾರಿಗಳೇ ಶಾಕ್​!

    ಭುವನೇಶ್ವರ್​: ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ದೊಡ್ಡ ದೊಡ್ಡ ಅಧಿಕಾರಿಗಳು ಹಾಗೂ ಉದ್ಯಮಿಗಳು ಮತ್ತು ಸಿನಿಮಾ ಕಲಾವಿದರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ಪಡೆ ದಾಳಿ ಮಾಡುವುದನ್ನು ನೋಡಿದ್ದೇವೆ. ಆದರೆ, ಅಂಗನವಾಡಿ ಕಾರ್ಯಕರ್ತೆ ಮೇಲೆ ದಾಳಿ ನಡೆಯುತ್ತದೆ ಅಂದ್ರೆ ಅಚ್ಚರಿಯಾಗುವುದು ಸಾಮಾನ್ಯ.

    ಹೌದು, ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಅಂಗನವಾಡಿ ಕಾರ್ಯಕರ್ತೆ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಆಕೆಯ ಹೆಸರಿನಲ್ಲಿದ್ದ ಸಂಪತ್ತನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಕೇವಲ ಲಕ್ಷದಲ್ಲಿ ಅಲ್ಲ, ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿರುವ ಆಕೆ ಹೊಂದಿದ್ದಾಳೆ.

    ಅಂಗನವಾಡಿ ಕಾರ್ಯಕರ್ತೆ ಹೆಸರು ಕಬಿತಾ ಮಥನ್​. ಈಕೆ ಭುವನೇಶ್ವರದ ಕೊರಡಕಂಟ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಭ್ರಷ್ಟಾಚಾರ ಆರೋಪದ ಮೇಲೆ ಆಕೆಯನ್ನು ಒಡಿಶಾ ಭ್ರಷ್ಟಾಚಾರ ನಿಗ್ರಹ ಪಡೆ ಬಂಧಿಸಿದೆ. ಅಲ್ಲದೆ, ಆಕೆಗೆ ಸಂಬಂಧಿಸಿದ 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.

    ಮಾಡುವುದು ಅಂಗನವಾಡಿ ಕೆಲಸ. ಆದರೆ, ಆಕೆಯ ಲೆಕ್ಕವಿಲ್ಲದ ಆದಾಯ ಮತ್ತು ಆಕೆಯ ಬೆಳವಣಿಗೆಯು ಎಲ್ಲರನ್ನು ದಿಗ್ಭ್ರಾಂತಗೊಳಿಸಿತ್ತು. ಈ ಬಗ್ಗೆ ಅನಾಮಧೇಯರ ಹೆಸರಿನಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10 ಡಿಎಸ್​ಪಿ ಮತ್ತು 5 ಇನ್ಸ್​ಪೆಕ್ಟರ್ಸ್ ಒಳಗೊಂಡ ತಂಡವು ಭುವನೇಶ್ವರದ ಖುರ್ದ, ಕೇಂದ್ರಪದ ಮತ್ತು ಜಗತ್ಸಿಂಗ್​ಪುರ್​ ಸೇರಿದಂತೆ ಒಟ್ಟು 6 ಏರಿಯಾಗಳದಲ್ಲಿ ದಾಳಿ ನಡೆಸಿದೆ.

    ದಾಳಿಯ ವೇಳೆ ನಾಲ್ಕು ಮನೆ, 14 ನಿವೇಶನ, ಒಂದು ಕಾರು, 3 ದ್ವಿಚಕ್ರ ವಾಹನ, ಸುಮಾರು 2.2 ಲಕ್ಷ ರೂ. ಜೀವವಿಮೆ, ಸುಮಾರು 6.36 ಮೌಲ್ಯದ 212 ಗ್ರಾಂ ಚಿನ್ನಾಭರಣ ಹಾಗೂ ಇತರೆ ಸ್ಥಿರ ಮತ್ತು ಚರಾಸ್ಥಿ ಸೇರಿ ಒಟ್ಟು 4 ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಕಬಿತಾ ಮಥನ್​ ಮತ್ತು ಆಕೆಯ ಕುಟುಂಬದವರು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಆಕೆಯ ಬಂಧನವಾಗಿದ್ದು, ಆದಾಯದ ಮೂಲ ಯಾವುದು? ಹೇಗೆ ಸಂಪಾದನೆ ಮಾಡಿದ್ದಾರೆ? ಯಾವ ರೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬಿತ್ಯಾದಿ ಮಾಹಿತಿಯನ್ನು ತೆಗೆಯಲು ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)

    6ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕಾಮುಕ ಆತ್ಮಹತ್ಯೆಗೆ ಶರಣು: ರೈಲ್ವೆ ಹಳಿ ಮೇಲೆ ಶವ ಪತ್ತೆ

    ತನ್ನ ವಿಡಿಯೋದಿಂದ ಸಸ್ಪೆಂಡ್​ ಆಗಿ, ಸರ್ಕಾರಿ ಕೆಲ್ಸಕ್ಕೆ ಗುಡ್​ ಬೈ ಹೇಳಿದ ಲೇಡಿ ಪೇದೆಗೆ ಬಂತು ಬಂಪರ್​ ಆಫರ್​!​

    VIDEO| ಟ್ರಾಫಿಕ್​ ಸಿಗ್ನಲ್​ನಲ್ಲಿ ಸವಾರರ ಮುಂದೆ ಸೊಂಟ ಬಳುಕಿಸಿದ ಯುವತಿಗೆ ಪೊಲೀಸ್​ ಇಲಾಖೆ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts