More

    ಅನ್ಯಕೋಮಿನ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಹಿಂದು ಯುವಕನ ಮೇಲೆ ಹಲ್ಲೆ: ವಿಡಿಯೋ ವೈರಲ್​!

    ಬೆಂಗಳೂರು: ಅನ್ಯಕೋಮಿನ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಹಿಂದು ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಡೈರಿ ಸರ್ಕಲ್​ನಲ್ಲಿ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಮಹೇಶ್ ಎಂಬಾತನ ಮೇಲೆ ಅನ್ಯಕೋಮಿನ ಕೆಲ ಪುಡಾರಿಗಳು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇನ್ನೊಂದು ಸಾರಿ ಬುರ್ಕಾ ಹಾಕೊಂಡಿರುವವರನ್ನು ಕೂರಿಸಿಕೊಂಡು ಹೋದ್ರೆ ಅಷ್ಟೇ ಎಂದು ಅವಾಜ್​ ಕೂಡ ಹಾಕಿದ್ದಾರೆ. ಮಹೇಶ್ ಬ್ಯಾಂಕ್ ವೊಂದರ ನೌಕರ. ಮಹೇಶ್​ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಮುಸ್ಲಿಂ ಮಹಿಳೆ ಮತ್ತು ಮಹೇಶ್ ಸಹೋದ್ಯೋಗಿಗಳು. ಮಹಿಳೆಯನ್ನು ಮನೆಗೆ ಡ್ರಾಪ್ ಮಾಡೋ ವೇಳೆ ಹಿಂಬಾಲಿಸಿ ಬಂದು ಹಲ್ಲೆ ಮಾಡಿದ್ದಾರೆ. ಶುಕ್ರವಾರ ನಡೆದಿರುವ ಘಟನೆ ಇದಾಗಿದೆ.

    ಇದೇ ವೇಳೆ ಮಹಿಳೆಗೂ ಅವಾಜ್​ ಹಾಕಿರುವ ಪುಂಡರು ಏನಮ್ಮ ನಿನ್ ಹೆಸರು? ನಿನಗೆ ನಾಚಿಕೆಯಾಗಲ್ವಾ… ಈ ಜಗತ್ತಲ್ಲಿ ಏನಾಗ್ತಿದೆ ಅಂತಾ ಗೊತ್ತಿಲ್ವಾ? ಇಂಥವರ ಜತೆ ಹೋಗಬಾರದು ಅಂತಾ ಗೊತ್ತಾಗಲ್ವಾ ನಿನಗೆ ಎಂದು ಏರು ಧ್ವನಿಯಲ್ಲಿ ಹೆದರಿಸಿದ್ದಾರೆ.

    ಏನ್ ಅಣ್ಣ ನಿನ್ ಸಮಸ್ಯೆ? ನಾನು ಇದೇ ದಾರಿಯಲ್ಲಿ ಮನೆಗೆ ಹೊರಟಿದ್ದೆ. ನನಗೆ ಮದುವೆ ಆಗಿದೆ ಅಂದರೂ ಬಿಡದ ಪುಂಡರು ಬೈಕ್​ನಿಂದ ಕೆಳಗೆ ಇಳಿಯೋ ಅಂತ ಮಹೇಶ್ ಅನ್ನೋನಿಗೆ ಧಮ್ಕಿ ಹಾಕಿ ಥಳಿಸಿದ್ದಾರೆ. ಬುರ್ಕಾ ಹಾಕೊಂಡು ಬೇರೊಬ್ಬನ ಜತೆ ಹೋಗೊದು ತಪ್ಪು ಎಂದು ವಾದಿಸಿದ್ದಾರೆ. ಬಳಿಕ ಯುವತಿ ಕುಟುಂಬಸ್ಥರಿಗೆ ಕರೆ ಮಾಡಿಯೂ ಪುಂಡರು ಆವಾಜ್ ಹಾಕಿದ್ದಾರೆ.

    ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಡ್ರಾಪ್​ ನೀಡಿರಬಹುದು ಅದಕ್ಕೆ ಈ ರೀತಿ ವರ್ತಿಸೋದು ಸರಿಯಲ್ಲ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕೆಂದು ನೆಟ್ಟಿಗರು ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್​)

    ತಿರುಪತಿ ಭೇಟಿ ವೇಳೆ ಪತ್ರಕರ್ತರ ಮೇಲೆ ಸಮಂತಾ ಗರಂ: ನಿಮಗೆ ಬುದ್ಧಿ ಇಲ್ವಾ ಎಂದ ಸೌತ್​ ಬ್ಯೂಟಿ

    ಆನೇಕಲ್​ ಹೊರವಲಯದಲ್ಲಿ ರೇವ್​ ಪಾರ್ಟಿ: ಅರ್ಧಂಬಂರ್ಧ ಬಟ್ಟೆ ಹಾಕಿ ನಶೆಯಲ್ಲಿ ತೇಲುತ್ತಿದ್ದ ಯುವಕ-ಯುವತಿಯರಿಗೆ ಶಾಕ್​!

    ಎಫ್​ಡಿಎನಲ್ಲೂ ಡೀಲ್?; ಪೆನ್ಸಿಲ್​ನಿಂದ ಉತ್ತರ ತುಂಬಿರುವ 80ಕ್ಕೂ ಹೆಚ್ಚು ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts