More

    ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ ಆಗುತ್ತಾ? ಸಿಎಂ ಬೊಮ್ಮಾಯಿ‌ ಹೇಳಿದ್ದೇನು?

    ಬೆಂಗಳೂರು: ರಾಜಕೀಯ ಅಂಗಳದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿರುವ ಮತಾಂತರ ನಿಷೇಧ ಮಸೂದೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗುತ್ತದೆಯೆ‌ ? ಎಂಬ ಪ್ರಶ್ನೆ ಕುತೂಹಲದ ತುದಿಗಾಲ ಮೇಲೆ ನಿಲ್ಲಿಸಿದೆ.

    ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾತನಾಡುವ ವೇಳೆ, ಮತಾಂತರ ನಿಷೇಧ ವಿಧೇಯಕಕ್ಕೆ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದರತ್ತ ಗಮನಸೆಳೆದಾಗ ವಿರೋಧ ಪಕ್ಷ ಅಲ್ಲವೆ ? ವಿರೋಧಿಸುವುದು ಸಹಜವೆಂದರು.

    ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುತ್ತದೆಯೆ ? ಎಂಬ ಮತ್ತೊಂದು ಪ್ರಶ್ನೆಗೆ ಬೊಮ್ಮಾಯಿ‌ ಏನನ್ನೂ ಹೇಳಲಿಲ್ಲ. ಅಧಿವೇಶನ ನಡೆಸುವುದಕ್ಕೆ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.

    ಅಯೋಧ್ಯೆಗೆ ಸಿಎಂ
    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಡಿ.14ರಂದು ಆಯೋಜಿಸಿರುವ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ಬೊಮ್ಮಾಯಿ‌ ಭಾಗವಹಿಸಲಿದ್ದಾರೆ. ಬೆಳಗಾವಿ ಅಧಿವೇಶನದ ಮೊದಲ ದಿನ ಭಾಗವಹಿಸಿ ಸಂಜೆ ಅಯೋಧ್ಯೆಗೆ ಪ್ರಯಾಣ ಬೆಳೆಸಲಿದ್ದು, ಡಿ.14ರ ಸಂಜೆ ಮರಳುವುದಾಗಿ ತಿಳಿಸಿದ ಬೊಮ್ಮಾಯಿ‌, ಮೂರು ದಿನ ಅಲ್ಲ, ಒಂದೇ ದಿನ ಎಂದು ಸ್ಪಷ್ಟಪಡಿಸಿದರು.

    ಸಮರ್ಥನೆ
    ಅತ್ಯುನ್ನತ ತಂತ್ರಜ್ಞಾನ, ತ್ವರಿತವಾಗಿ ವರದಿ ನೀಡುವುದಕ್ಕೆ ತಗುಲುವ ವೆಚ್ಚ ಆಧರಿಸಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರೊನಾ ಪರೀಕ್ಷಾ ವರದಿ ಒಂದು ತಾಸಿನಲ್ಲಿ ನೀಡುವುದಕ್ಕೆ 3,000 ರೂ ಶುಲ್ಕ ನಿಗದಿಪಡಿಸಲಾಗಿದೆ. ತಮಿಳುನಾಡಿನಲ್ಲಿ ನಮಗಿಂತಲೂ ಜಾಸ್ತಿಯಿದೆ ಎಂದು ಸಿಎಂ ಬೊಮ್ಮಾಯಿ‌ ಸಮರ್ಥಿಸಿಕೊಂಡರು.

    ಶಿಕ್ಷಕನ ತಲೆ ಮೇಲೆ ಕಸದಬುಟ್ಟಿ ಹಾಕಿ ಪುಂಡಾಟ ಮೆರೆದಿದ್ದ 6 ವಿದ್ಯಾರ್ಥಿಗಳ ವಿರುದ್ಧ ದಾಖಲಾಯ್ತು ಪೊಲೀಸ್​ ಕೇಸ್​

    ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ

    ಕೃಷ್ಣಾ ನದಿ ನೀರಲ್ಲಿ ಮುಳುಗಿ ಗುರೂಜಿ ಮತ್ತು 5 ವಿದ್ಯಾರ್ಥಿಗಳು ಸಾವು! ಓರ್ವ ವಿದ್ಯಾರ್ಥಿ ಸಾವನ್ನೇ ಜಯಿಸಿ ಬಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts