More

    ನಾನು ಯಾರನ್ನೂ ಎಲ್ಲಿಗೂ ಕಳಿಸುತ್ತಿಲ್ಲ, ನೀವೂ ಕೂಡ ಯಾಮಾರಬೇಡಿ ಅಂದ್ರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​!

    ಬೆಳಗಾವಿ: ರಾಜ್ಯದಲ್ಲಿ ವಿಧಾನ ಪರಿಷತ್​ ಚುನಾವಣಾ ಕಣ ರಂಗೇರಿದೆ. ಡಿ.10ರಂದು ಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಅಭ್ಯರ್ಥಿಗಳಿಂದು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಬೆಳಗಾವಿಯಲ್ಲಿ ಟೂರ್​ ಪಾಲಿಟಿಕ್ಸ್​ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಮತದಾರರನ್ನು ಅಭ್ಯರ್ಥಿಗಳು ಟೂರ್‌ಗೆ ಕಳಿಸುತ್ತಿದ್ದಾರಾ? ಎಂಬ ಅನುಮಾನ ಮೂಡಿದ್ದು, ಇದರ ಬೆನ್ನಲ್ಲೇ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರು ಟೂರ್‌ಗೆ ಕರೆದಿದ್ದಾರೆ ಎಂದು ಹೇಳಿ ಕೆಲವು ಜನ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರನ್ನೂ ಟೂರ್‌ಗೆ ಕಳಿಸುತ್ತಿಲ್ಲ, ತಾವೂ ಕೂಡ ಯಾಮಾರಬೇಡಿ ಎಂದಿದ್ದಾರೆ. ಅಲ್ಲದೆ, ಎಲ್ಲಿಗೂ ಹೋಗದೇ ಇಲ್ಲೇ ಇದ್ದು ಡಾ.ಬಾಬಾ ಸಾಹೇಬ್​ ಅಂಬೇಡ್ಕರ್ ನೀಡಿರುವ ನಿಮ್ಮ ಮತದಾನದ ಹಕ್ಕು ಚಲಾಯಿಸಿ ಎಂದು ಕರೆ ನೀಡಿದ್ದಾರೆ.

    ಯಾವುದೇ ಒತ್ತಡಕ್ಕೆ ಮತ್ತು ಯಾವುದೇ ಧಮ್ಕಿಗೆ ನೀವು ಹೆದರುವ ಅವಶ್ಯಕತೆ ಇಲ್ಲ. ನಾನಂತೂ ಎಲ್ಲಿಯೂ ಯಾರನ್ನೂ ಟೂರ್‌ಗೆ ಕಳಿಸುತ್ತಿಲ್ಲ. ನ್ಯಾಯಯುತವಾದ ಮತ್ತು ಶುದ್ಧ ಚುನಾವಣೆಯನ್ನು ನಾವು ಮಾಡೋಣ. ಎಲ್ಲರೂ ನನಗೆ ಸಹಾಯ ಮಾಡಿ, ಸಹಕಾರ ಮಾಡಿ ಮತ್ತು ಆಶೀರ್ವಾದ ಮಾಡಿ, ನಿಮ್ಮ ಜೊತೆ ನಿಮ್ಮ ಮನೆ ಮಗಳಾಗಿ ನಾನು ಯಾವತ್ತೂ ಇರ್ತೀನಿ ಎಂದು ಭರವಸೆ ನೀಡಿದ್ದಾರೆ.

    ನನ್ನ ಸಹೋದರ, ನನ್ನ ಕಾಂಗ್ರೆಸ್ ಪಕ್ಷ, ನನ್ನ ಕಾಂಗ್ರೆಸ್ ಮುಖಂಡರು ನಿಮ್ಮ ಜೊತೆಗಿರ್ತಾರೆ. ಸತೀಶ್ ಜಾರಕಿಹೊಳಿ ಹಾಗೂ ಪ್ರಕಾಶ್ ಹುಕ್ಕೇರಿ ಆಶೀರ್ವಾದ ಸೇರಿದಂತೆ ಎಲ್ಲ ಮುಖಂಡರ ಆಶೀರ್ವಾದ ನಮ್ಮ ಜೊತೆಗಿರುವಾಗ ಹೆದರುವ ಅವಶ್ಯಕತೆ ಇಲ್ಲ. ಧನ್ಯವಾದಗಳು ಜೈ ಚನ್ನಮ್ಮ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ವಿಡಿಯೋ ಮುಗಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬ್ರಾಲೆಸ್​ ಫೋಟೋಶೂಟ್​: ಚಿತ್ರರಂಗ ಬಿಡುವಂತೆ ನಟಿ ಪಾಯಲ್​ ರಜಪೂತ್​ಗೆ ತಾಯಿಯ ತಾಕೀತು!

    ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

    ವರ್ತನೆ ಬದಲಾಗದಿದ್ದರೆ ಜೋಕೆ: ಪಕ್ಷದ ಸಂಸದರಿಗೆ ಪ್ರಧಾನಿ ಮೋದಿ ಎಚ್ಚರಿಕೆ; ಕಲಾಪದಲ್ಲಿ ಗದ್ದಲ ಮುಂದುವರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts