More

    ಕರುಳಿನ ಕರೆಗೆ ಓಗೊಟ್ಟ ಸಿಎಂ ಬೊಮ್ಮಾಯಿ‌: ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಮನ ಮಿಡಿಯುವ ದೃಶ್ಯ

    ಬೆಂಗಳೂರು: ಕರುಳಿನ ಕರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಓಗೊಟ್ಟು, ಹುಟ್ಟು ಅಂಗವಿಕಲ ಮಗುವಿನ ಪೋಷಣೆಗೆ ಪರಿಹಾರ ನೀಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.

    ಆರ್ ಟಿ ನಗರದ ಖಾಸಗಿ ನಿವಾಸದ ಬಳಿ ಸಿಎಂ ಬೊಮ್ಮಾಯಿ‌ ಪ್ರತಿದಿನ ಬೆಳಗ್ಗೆ ಜನತಾದರ್ಶನ ನಡೆಸುತ್ತಾರೆ. ನಾಡಿನ ದೊರೆ ಬಳಿ ದೂರು-ದುಮ್ಮಾನ, ಬೇಡಿಕೆಗಳ ಮನವಿಪತ್ರ ಹಿಡಿದು ಅಹವಾಲು ಸಲ್ಲಿಸಲು ಜನರು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ. ಆದರೆ ಭಾನುವಾರದ ಸಿಎಂ ಬೊಮ್ಮಾಯಿ‌ ಜನತಾ ದರ್ಶನದ ದೃಶ್ಯವು ನೆರೆದವರ ಮನ ಮಿಡಿಯಿತು. ಕೊಡಗು ಜಿಲ್ಲೆ ಶನಿವಾರಸಂತೆಯಿಂದ ಹುಟ್ಟು ಅಂಗವಿಕಲ ಜಯರಾಮ್ ನನ್ನು ಹೊತ್ತುಕೊಂಡು ತಾಯಿ ರುಕ್ಮಿಣಿ ಧಾವಿಸಿದ್ದಳು.

    ಮಗುವಿನ ಪೋಷಣೆಯ ತಾಪತ್ರಯವನ್ನು ನಿವೇದಿಸಿಕೊಂಡು ಸರ್ಕಾರದಿಂದ 5,000 ರೂ. ನೆರವು ನೀಡಿದರೆ, ನೆಮ್ಮದಿ ಜೀವನಕ್ಕೆ ಆಸರೆಯಾಗುತ್ತದೆ ಎಂದು ಮೊರೆಯಿಟ್ಟಳು. ಮಗುವಿನ ಪರಿಸ್ಥಿತಿ, ತಾಯಿ ಸಂಕಷ್ಟಕ್ಕೆ ಸಿಎಂ ಬೊಮ್ಮಾಯಿ‌ ತಕ್ಷಣ ಸ್ಪಂದಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದರು. ಅಗತ್ಯ ವಿವರ ಪಡೆದು ತಕ್ಷಣವೇ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕೆಂದು ಆದೇಶಿಸಿದರು.

    ಮುಖ್ಯಮಂತ್ರಿ ಸಾವಧಾನದಿಂದ ಕಷ್ಟ ಆಲಿಸುವ ಜತೆಗೆ ಪರಿಹಾರ ನೀಡಲು ಸೂಚಿಸಿದ್ದರಿಂದ ರುಕ್ಮಿಣಿ ಮೊಗದಲ್ಲಿ ನಿರಾಳ ಭಾವ. ಮಗನನ್ನು ಎತ್ತಿಕೊಂಡೇ ಬೊಮ್ಮಾಯಿ‌ಗೆ ಕೃತಜ್ಞತೆ ಸಲ್ಲಿಸಿದರು.

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್​: ಅರಮನೆಯ ಮೈದಾನದಲ್ಲಿ ನೆರವೇರಿತು ಅದ್ಧೂರಿ ವಿವಾಹ

    ಮುರಿದುಬೀಳುತ್ತಾ ಪತಿ-ಪತ್ನಿ ಸಂಬಂಧ? ಡಿವೋರ್ಸ್ ವದಂತಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಧನಶ್ರೀ!

    ಈವರೆಗೂ ಐದು ಮಂದಿಯನ್ನು ಕೊಂದಿದ್ದೇವೆ… ಮಾಜಿ ಬಿಜೆಪಿ ಶಾಸಕನ ಸ್ಫೋಟಕ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts