More

    ಟಿಕೆಟ್​ ದರ ಇಳಿಕೆ ವಿರೋಧಿಸುವವರೇ ಬಡವರ ನಿಜವಾದ ಶತ್ರುಗಳು: ಸಿನಿಮಂದಿಗೆ ಆಂಧ್ರ ಸಿಎಂ ತಿರುಗೇಟು

    ವಿಜಯವಾಡ: ಸಿನಿಮಾ ಟಿಕೆಟ್​ ದರದ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯ ಮೇಲೆ ಆಂಧ್ರ ಸರ್ಕಾರ ದಮನ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಸ್ವತಃ ಆಂಧ್ರದ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಅವರು ಟಿಕೆಟ್​ ದರ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ ಟಿಕೆಟ್​ ದರ ಇಳಿಕೆ ವಿರುದ್ಧ ಮಾತನಾಡುತ್ತಿರುವವರಿಗೆ ತಿರುಗೇಟು ನೀಡಿರುವ ಸಿಎಂ ಜಗನ್​, ಬಡವರಿಗೆ ಸಹಾಯ ಮಾಡಲು ಟಿಕೆಟ್​ ದರ ಇಳಿಕೆ ಮಾಡಲಾಗಿದೆ. ಆದರೆ, ಸಿನಿಮಾದ ಕೆಲವು ಮಂದಿ ಇದರ ವಿರುದ್ಧವಾಗಿದ್ದಾರೆ. ಯಾರು ದರ ಇಳಿಕೆ ವಿರುದ್ಧ ಮಾತನಾಡುತ್ತಾರೋ ಅವರೆ ಬಡವರ ನಿಜವಾದ ಶತ್ರುಗಳು ಎಂದಿದ್ದಾರೆ.

    ಇತ್ತೀಚೆಗಷ್ಟೇ ಆಂಧ್ರ ಸಿಎಂ ಜಗನ್​ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಪಿ ಸಿನಿಮಾಟೋಗ್ರಫಿ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಸರ್ಕಾರದ ಹೊಸ ಆದೇಶದಲ್ಲಿ ಮುನ್ಸಿಪಾಲಿಟಿ, ಮುನ್ಸಿಪಲ್​ ಕಾರ್ಪೊರೇಷನ್​, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಸಿನಿಮಾ ಟಿಕೆಟ್​ ದರದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಮುನ್ಸಿಪಲ್​ ಕಾರ್ಪೊರೇಷನ್​ ವ್ಯಾಪ್ತಿಯ ಮಲ್ಟಿಪ್ಲೆಕ್ಸ್​ನಲ್ಲಿ ಗರಿಷ್ಠ 250 ಮತ್ತು ಕನಿಷ್ಠ 75 ರೂ. ಇದೆ. ಅದನ್ನು ಎಸಿ ಥಿಯೇಟರ್​ಗಳಲ್ಲಿ ಗರಿಷ್ಠ 100 ಮತ್ತು ಕನಿಷ್ಠ 40 ರೂ.ಗೆ ಇಳಿಸಲಾಗಿದೆ ಮತ್ತು ನಾನ್​ ಎಸಿ ಥಿಯೇಟರ್​ನಲ್ಲಿ ಗರಿಷ್ಠ 60 ಮತ್ತು ಕನಿಷ್ಠ 20ಕ್ಕೆ ಇಳಿಸಲಾಗಿದೆ.

    ವಿತರಕರ ಆಕ್ರೋಶ
    ತೆಲಂಗಾಣದ ಚಿತ್ರಮಂದಿರಗಳಲ್ಲಿ ವಾಹನ ಪಾರ್ಕಿಂಗ್​ ದರ 30 ರೂಪಾಯಿ ಇದೆ. ಆದರೆ, ಆಂಧ್ರದಲ್ಲಿ ಟಿಕೆಟ್​ ಬೆಲೆ ಬಾಲ್ಕನಿ 20, ಫಸ್ಟ್​ ಕ್ಲಾಸ್​ 15 ಹಾಗೂ ಸೆಕೆಂಡ್​ ಕ್ಲಾಸ್​ 10 ರೂ. ಇದೆ. ಸರ್ಕಾರದ ಟಿಕೆಟ್​ ಬೆಲೆ ಇಳಿಸಿರುವ ಪರಿಣಾಮ ಮೂಲ ಖರ್ಚು ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಅಸಮಾಧಾನ ಹೊರಹಾಕಿದ್ದಾರೆ.

    ಕಡಿಮೆ ಟಿಕೆಟ್​ ದರ ನಿಗದಿಯಿಂದಾಗಿ ಆಂಧ್ರದದಲ್ಲಿ ಅನೇಕ ಸಿನಿಮಾ ಮಂದಿರಗಳನ್ನು ಬಂದ್​ ಮಾಡಲಾಗಿದೆ. ಟಿಕೆಟ್​ ದರ ಮಾತ್ರವಲ್ಲದೆ, ಸಿನಿಮಾ ಹಾಲ್​ ಸುರಕ್ಷತಾ ಕ್ರಮಗಳ ಬಗ್ಗೆಯೂ ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು, ಸುರಕ್ಷತಾ ಕ್ರಮ ಪಾಲಿಸದ 15 ಚಿತ್ರಮಂದಿಗಳನ್ನು ಸರ್ಕಾರ ಸೀಜ್​ ಮಾಡಿದೆ.

    ಆಂಧ್ರ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ ತೆಲುಗು ಚಿತ್ರರಂಗ ಕೂಡ ಕೋರ್ಟ್​ ಮೆಟ್ಟಿಲೇರಿದೆ. ಅಲ್ಲದೆ, ನಾನಿ ಸೇರಿದಂತೆ ಅನೇಕ ನಟರು ಕೂಡ ಸರ್ಕಾರದ ಕ್ರಮವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಸದ್ಯ ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಆರ್​ಆರ್​ಆರ್​ ಮತ್ತು ರಾಧೆ ಶ್ಯಾಮ್​ ಚಿತ್ರದ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.

    ಇನ್ನು ಕರೊನಾ ವೈರಸ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ಹಲವು ನಿರ್ಬಂಧಗಳನ್ನು ಈಗಾಗಲೇ ಸರ್ಕಾರ ಹೇರಿದೆ. ಶಾಲೆ, ಕಾಲೇಜು, ಥಿಯೇಟರ್​ ಮತ್ತು ಜಿಮ್​ಗಳನ್ನು ಮುಚ್ಚಿಸಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. (ಏಜೆನ್ಸೀಸ್​)

    ತೆಲಂಗಾಣದ ಥಿಯೇಟರ್​ ಪಾರ್ಕಿಂಗ್​ ದರಕ್ಕಿಂತ ಕಡಿಮೆ ಆಂಧ್ರದ ಸಿನಿಮಾ ಟಿಕೆಟ್​ ಬೆಲೆ: ಬಾಲ್ಕನಿಗೆ 20 ರೂ.

    ಇಂಥಾ ಸಾವು ಯಾರಿಗೂ ಬೇಡ: ಪೆಟ್ರೋಲ್ ಖಾಲಿಯಾಯ್ತೆಂದು ಬೈಕ್​ ನಿ​ಲ್ಲಿಸಿದ ಯುವಕನ ಶವ ಬಾವಿಯಲ್ಲಿ ಪತ್ತೆ

    ಯಾವ ಕೆಲ್ಸವೂ ಚಿಕ್ಕದಲ್ಲ: ಸೈಕಲ್​ನಲ್ಲಿ ಕಾಫಿ ಮಾರುವ ಈ ಇಂಜಿನಿಯರ್ ಕತೆ ಕೇಳಿದ್ರೆ​ ಮನಕಲಕುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts