More

    ಬಗೆದಷ್ಟು ಹೊರ ಬರ್ತಿದೆ ಅಕ್ರಮ ಸಂಪತ್ತು: ನಟಿ ಅರ್ಪಿತಾಳ ಮನೆಯಲ್ಲಿದ್ದ 4 ಐಷಾರಾಮಿ ಕಾರುಗಳು ನಾಪತ್ತೆ

    ಕೋಲ್ಕತ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಜುಲೈ 22ರಂದು ಸಚಿವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಇದಾದ ಬಳಿಕ ನಿನ್ನೆ (ಜುಲೈ 28) ಅರ್ಪಿತಾಗೆ ಸಂಬಂಧಿಸಿದ ಮತ್ತೊಂದು ಫ್ಲ್ಯಾಟ್​ನಲ್ಲಿ ಮತ್ತೆ 28 ಕೋಟಿ ರೂಪಾಯಿ ನಗದು ದೊರೆತಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಅರ್ಪಿತಾ ಮನೆಯಲ್ಲಿದ್ದ ನಾಲ್ಕು ಐಷಾರಾಮಿ ಕಾರುಗಳು ನಾಪತ್ತೆಯಾಗಿವೆ.

    ಕೋಲ್ಕತದ ಡೈಮಂಡ್​ ಸಿಟಿ ಕಾಂಪ್ಲೆಕ್ಸ್​ನಲ್ಲಿರುವ ಅಪಾರ್ಟ್​ಮೆಂಟ್​ನಿಂದ ನಾಲ್ಕು ಕಾರುಗಳು ನಾಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ಕಾರುಗಳನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ನಾಲ್ಕು ಕಾರುಗಳಲ್ಲೂ ಹಣ ತುಂಬಿತ್ತು ಎಂದು ಹೇಳಲಾಗಿದೆ. ಅರ್ಪಿತಾ ಮನೆಯಲ್ಲಿ ಹುಡುಕಿದಷ್ಟು ಅಕ್ರಮ ಸಂಪತ್ತು ಸಿಗುತ್ತಿದೆ. ಇದುವರೆಗೂ 50 ಕೋಟಿ ರೂಪಾಯಿಗು ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ.

    ನಿನ್ನೆ ನಡೆದ ದಾಳಿಯಲ್ಲಿ ನಗದು ಹಣ ಮಾತ್ರವಲ್ಲದೆ 2 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನ ಸಹ ಪತ್ತೆಯಾಗಿದೆ. ಮೊದಲ ದಾಳಿಯ ಬೆನ್ನಲ್ಲೇ ಅರ್ಪಿತಾಳನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

    ತಮ್ಮ ಮನೆಯಲ್ಲಿ ದೊರೆತ ರಾಶಿ ರಾಶಿ ದುಡ್ಡಿನ ಬಗ್ಗೆ ಮಾತನಾಡಿರುವ ಅರ್ಪಿತಾ, ಆ ಹಣವೆಲ್ಲಾ ಸಚಿವ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎಂದಿದ್ದಾರೆ. ಆಕೆಗೆ ಸಂಪರ್ಕ ಹೊಂದಿರುವ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಇಡಲಾಗಿತ್ತು ಎಂಬುದು ತಿಳಿದುಬಂದಿದೆ. ಮನೆಯಿಂದ ಒಂದು ಅಥವಾ ಎರಡು ದಿನಗಳಲ್ಲಿ ಹಣದ ರಾಶಿಯನ್ನು ಸ್ಥಳಾಂತರಿಸುವ ಯೋಜನೆಯನ್ನು ವಿಚಾರಣೆ ಸಮಯದಲ್ಲಿ ಅರ್ಪಿತಾ ಬಹಿರಂಗಪಡಿಸಿದ್ದಾಳೆ. ಆದರೆ, ಇಡಿ ದಾಳಿಯು ಆಕೆಯ ಯೋಜನೆಯನ್ನು ತಲೆಕೆಳಗಾಗಿಸಿದೆ.

    ಏನಿದು ಹಗರಣ?
    ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಇಡಿ, ಜುಲೈ 22ರಂದು ಅರ್ಪಿತಾ ಮನೆ ಮೇಲೆ ದಿಢೀರ್​ ದಾಳಿ ಮಾಡಿತು. ಈ ವೇಳೆ 21 ಕೋಟಿ ರೂಪಾಯಿ ನಗದು ಹಾಗೂ 20ಕ್ಕೂ ಹೆಚ್ಚು ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

    ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

    ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು? ಪ್ರವೀಣ್​ಗೆ ಮೊದಲೇ ಸಿಕ್ಕಿತ್ತಾ ಸಾವಿನ ಸುಳಿವು? ಸಹೋದರ ನೀಡಿದರು ಸ್ಫೋಟಕ ಹೇಳಿಕೆ

    VIDEO| ವಿದ್ಯಾರ್ಥಿಯನ್ನು ದುರ್ಬಳಕೆ ಮಾಡಿಕೊಂಡ ಶಿಕ್ಷಕಿ: ತರಗತಿಯೊಳಗೆ ನಡೆಯಿತು ದುರ್ವರ್ತನೆ

    ಇವರೇ ನೋಡಿ ಪಾಕ್​ ಪೊಲೀಸ್​ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿದ ಮೊದಲ ಹಿಂದು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts