More

    VIDEO| ನಟಿಯೊಂದಿಗೆ ಆರ್​ಜಿವಿ ಡ್ಯಾನ್ಸ್​ ವಿಡಿಯೋ ವೈರಲ್: ಏನಿದು ಅಸಹ್ಯ ಅಂದ್ರು ನೆಟ್ಟಿಗರು!​

    ಮುಂಬೈ: ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಇದೀಗ ಇನಾಯಾ ಸುಲ್ತಾನರೊಂದಿಗೆ ವರ್ಮಾ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ವರ್ಮಾ ಗುರಿಯಾಗಿದ್ದಾರೆ.

    ವರ್ಮಾ ಅವರ ವಿಡಿಯೋವನ್ನು ಹೊಲಸಾದ, ಅತ್ಯಂತ ಕಳಪೆ ಮತ್ತು ಅಶ್ಲೀಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನು ವಿಡಿಯೋ ವಿಚಾರಕ್ಕೆ ಬರುವುದಾದರೆ, ಇಬ್ಬರು ಯಾವುದೋ ಒಂದು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿರುವ ವಿಡಿಯೋ ಇದಾಗಿದೆ. ವಿಡಿಯೋವನ್ನು ರಾಮ್​ ಗೋಪಾಲ್​ ವರ್ಮಾ ಕೂಡ ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಇನಾಯಾ ಸುಲ್ತಾನರ ಅನ್​ವೆರಿಫೈಡ್​ ಟ್ವಿಟರ್​ ಖಾತೆಯಲ್ಲೂ ಪೋಸ್ಟ್​ ಮಾಡಲಾಗಿದೆ.

    ಎಲ್ಲವನ್ನು ಒಪ್ಪಿಗೆಯಿಂದಲೇ ಮಾಡಿದರೆ ಸಮಸ್ಯೆಯಿಲ್ಲ, ಇಲ್ಲವಾದರೆ ಇದು ಅಪರಾಧ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಹೀಗೆ ಅನೇಕ ನೆಟ್ಟಿಗರು ವರ್ಮಾ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್​ ಮೂಲಕ ವರ್ಮಾ ಸ್ಪಷ್ಟನೆಯನ್ನು ನೀಡಿದ್ದಾರೆ. ಎಂದಿನಂತೆ ತಮ್ಮದೇ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿರುವ ವರ್ಮಾ, ಹಲೋ ಗಯ್ಸ್​ ಈ ವಿಡಿಯೋದಲ್ಲಿರುವುದು ನಾನಲ್ಲ ಮತ್ತು ಕೆಂಪುಡುಗೆಯಲ್ಲಿರುವುದು ಇನಾಯಾಳಲ್ಲ ಎಂದು ಮತ್ತೊಮ್ಮೆ ನಾನು ಸ್ಪಷ್ಟಪಡಿಸುತ್ತೇನೆ. ನನ್ನಾಣೆಗೂ ವಿಡಿಯೋದಲ್ಲಿರುವುದು ಅಮರಿಕ ಅಧ್ಯಕ್ಷ ಜೋ ಬೈಡೆನ್​ ಎಂದಿದ್ದಾರೆ.

    ವರ್ಮಾ ಟ್ವೀಟ್​ ವಿರುದ್ಧವೂ ಕಿಡಿಕಾರಿರುವ ನೆಟ್ಟಿಗರು, ಅದು ಡ್ಯಾನ್ಸ್ ಮಾಡುವ ವಿಡಿಯೋ ಆಗಿರಲಿಲ್ಲ ಆದರೆ ನೀವೆಲ್ಲರೂ ಅವಳ ಮೇಲೆ ಹೋಗುವ ಒಂದು ನಯವಾದ ಕ್ರಿಯೆಯಾಗಿತ್ತು. ನೀವು ತುಂಬಾ ಕುಡಿದಿರುವುದನ್ನು ನಾವು ನೋಡಬಹುದು. ಇದು ಭಯಂಕರವಾಗಿತ್ತು ಎಂದಿದ್ದಾರೆ. (ಏಜೆನ್ಸೀಸ್​)

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ತನಿಖಾಧಿಕಾರಿಗಳಿಗೆ ತಲೆನೋವಾದ ಸಂತ್ರಸ್ತೆಯ ನಡೆ!

    ಹೊಸ ಡ್ರೋನ್ ನಿಯಮಕ್ಕೆ ಕೇಂದ್ರ ಸರ್ಕಾರ ಅಸ್ತು; ಹಲವು ನಿಯಮಗಳಲ್ಲಿ ಸಡಿಲಿಕೆ ಇನ್ನು ಭದ್ರತಾ ಅನುಮತಿ ಬೇಕಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts