More

    ಮದ್ಯ ಖರೀದಿಸಲು ಹಣಕ್ಕಾಗಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳನಿಗೆ ಕ್ಷಣಾರ್ಧದಲ್ಲೇ ಬೆನ್ನತ್ತಿದ ಕರ್ಮಫಲ!

    ನವದೆಹಲಿ: ಮಾಡಿದ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ. ಅವರವರ ಕರ್ಮ ಫಲವನ್ನು ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ ದೊರೆಯುತ್ತದೆ ಎಂಬ ಹಿರಿಯರ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಆಂಧ್ರಪ್ರದೇಶದ ದೇವಸ್ಥಾನವೊಂದರಲ್ಲಿ ಆಭರಣಗಳನ್ನು ಕದಿಯಲು ಮುಂದಾದ ಕಳ್ಳನೊಬ್ಬ ಆಭರಣ ಕದ್ದು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ತಾನೇ ಕೊರೆದ ಗೋಡೆಯ ರಂಧ್ರದಲ್ಲಿ ಸಿಲುಕಿ ಹೊರಬರಲಾಗದೇ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಶ್ರೀಕಾಕುಲಂನ ಕಂಚಿಲಿ ಮಂಡಲ ವ್ಯಾಪ್ತಿಯ ಜದುಪುಡಿ ಗ್ರಾಮದಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಕಳ್ಳನನ್ನು ಆರ್​. ಪಾಪಾ ರಾವ್​ ಎಂದು ಗುರುತಿಸಲಾಗಿದೆ. ಮದ್ಯದ ದಾಸನಾಗಿರುವ ಪಾಪಾ ರಾವ್​ ಹಣಕ್ಕಾಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಜದುಪುಡಿ ಗ್ರಾಮದಲ್ಲಿರುವ ಎಲ್ಲಮ್ಮ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟ ಕಳ್ಳ ದೇವಸ್ಥಾನದ ಗೋಡೆಯಲ್ಲಿದ್ದ ಕಿಟಕಿಯನ್ನು ಸೇರಿದಂತೆ ರಂಧ್ರವನ್ನು ಕೊರೆದಿದ್ದಾನೆ. ಬಳಿಕ ದೇವಸ್ಥಾನದ ಒಳಗೆ ನುಗ್ಗಿ 20 ಗ್ರಾಂ ಬೆಳ್ಳಿಯ ಆಭರಣವನ್ನು ಕದ್ದಿದ್ದಾನೆ. ಇದಾದ ಬಳಿಕ ದೇವಸ್ಥಾನದಿಂದ ಪರಾರಿಯಾಗಲು ರಂಧ್ರದಿಂದ ಹೊರಬರುವಾಗ ಅಲ್ಲಿಯೆ ಸಿಲುಕಿದ್ದಾನೆ. ಎಷ್ಟೇ ಪ್ರಯತ್ನಪಟ್ಟರು ರಂಧ್ರದಿಂದ ಹೊರಬರಲಾಗದೇ ಆತ ಒದ್ದಾಡಿದ್ದಾನೆ. ಬಳಿಕ ಸಹಾಯಕ್ಕಾಗಿ ಕೂಗಿಕೊಳ್ಳುವುದನ್ನು ಕೇಳಿ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಆತನ ಸ್ಥಿತಿಯನ್ನು ನೋಡಿ ಸ್ಥಳೀಯರು ಅವಕ್ಕಾಗಿದ್ದಾರೆ.

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪತ್ರಕರ್ತ ಸೂರ್ಯ ರೆಡ್ಡಿ ಎಂಬುವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯ ಪೊಲೀಸರು ಪಾಪಾ ರಾವ್​ನನ್ನು ಬಂಧಿಸಿದ್ದಾರೆ. ಇನ್ನು ಪಾಪಾ ರಾವ್ ತನ್ನ ಮದ್ಯದ ಬೇಡಿಕೆಗಳನ್ನು ಪೂರೈಸಲು ಕಳ್ಳತನ ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲ ಈತ ತನ್ನ ತಾಯಿಯ ಮನೆಯಿಂದಲೇ ಎಲ್‌ಪಿಜಿ ಸಿಲಿಂಡರ್ ಅನ್ನು ಕದ್ದು, ಮದ್ಯವನ್ನು ಖರೀದಿಸಿದ್ದನು.

    ದೇವಸ್ಥಾನದಲ್ಲಿ ಕಳುವಾದ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    5 ದೋಸೆ 2 ಮೊಟ್ಟೆಗೆ 184 ರೂ.! ದುಬಾರಿ ಬ್ರೇಕ್​ಫಾಸ್ಟ್​ ವಿರುದ್ಧ ದೂರು ಕೊಟ್ಟ MLAಗೆ ಜಿಲ್ಲಾಧಿಕಾರಿಯಿಂದ ಶಾಕ್​!

    ಕುವೈತ್​ ಬೆನ್ನಲ್ಲೇ ಬೀಸ್ಟ್​ ಚಿತ್ರಕ್ಕೆ ತಮಿಳುನಾಡಲ್ಲೂ ಎದುರಾಯ್ತು ಸಂಕಷ್ಟ: ಬ್ಯಾನ್​ ಆಗುತ್ತಾ ವಿಜಯ್​ ಸಿನಿಮಾ?

    ಏನಿದು ಸ್ಯಾಮ್​? ಮಾಜಿ ಪತಿಯ ಫೋಟೋ ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಸಮಂತಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts