More

    5 ದೋಸೆ 2 ಮೊಟ್ಟೆಗೆ 184 ರೂ.! ದುಬಾರಿ ಬ್ರೇಕ್​ಫಾಸ್ಟ್​ ವಿರುದ್ಧ ದೂರು ಕೊಟ್ಟ MLAಗೆ ಜಿಲ್ಲಾಧಿಕಾರಿಯಿಂದ ಶಾಕ್​!

    ಆಲಪ್ಪುಳ: ದುಬಾರಿ ಬ್ರೇಕ್​ಫಾಸ್ಟ್​ ನೀಡಿದ ಹೋಟೆಲ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೇರಳದ ಆಲುಪ್ಪುಳ ಕ್ಷೇತ್ರದ ಶಾಸಕ ಚಿತ್ತರಂಜನ್​ ಇಟ್ಟಿರುವ ಬೇಡಿಕೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದಿರುವ ಜಿಲ್ಲಾಧಿಕಾರಿ ರೇಣು ರಾಜ್​, ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೂ ತಿಳಿಸಿರುವುದಾಗಿ ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿ ನೀಡಿದ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಶಾಸಕ ಚಿತ್ತರಂಜನ್​ ಪ್ರಕಾರ ಹೋಟೆಲ್​ ಒಂದು ಐದು ದೋಸೆ ಮತ್ತು ಎರಡು ಮೊಟ್ಟೆ ಕರಿಗೆ 184 ರೂಪಾಯಿ ಚಾರ್ಜ್​ ಮಾಡಿದರು. ದುಬಾರಿ ಹಣವನ್ನು ಚಾರ್ಜ್​ ಮಾಡಿದ್ದಾರೆ, ಹೋಟೆಲ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬೇಡಿಕೆ ಇಟ್ಟು ದೂರು ದಾಖಲಿಸಿದ್ದರು. ಅಲ್ಲದೆ, ಶಾಸಕರು ಮಾಡಿದ್ದ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಚಿವರ ಮಟ್ಟದಲ್ಲೂ ಬಹಳ ಚರ್ಚೆಯಾಗಿತ್ತು.

    ಸ್ವಲ್ಪ ಫ್ಯಾನ್​ ಗಾಳಿಯನ್ನು ಜೋರು ಮಾಡಿದರೆ ತಟ್ಟೆಯಿಂದ ಹಾರಿ ಹೋಗುವಷ್ಟು ತೆಳುವಾಗಿದ್ದ ದೋಸೆಗೆ ಒಂದಕ್ಕೆ 15 ರೂಪಾಯಿ ಚಾರ್ಜ್​ ಮಾಡಿದರು. ಅಲ್ಲದೆ, ಮೊಟ್ಟೆಯ ಮೇಲೆ ಹಾಕುವ ಅಲ್ಪ ಪ್ರಮಾಣದ ಗ್ರೇವಿಗೂ 4.5 ರೂಪಾಯಿ ಚಾರ್ಜ್​ ಮಾಡಲಾಗಿತ್ತು. ಎರಡು ಮೊಟ್ಟೆ 50 ರೂಪಾಯಿ ಚಾರ್ಜ್​ ಮಾಡಿದ್ದರು. ಅದು ಸ್ಟಾರ್​ ಹೋಟೆಲ್​ ಆಗಿರಲಿಲ್ಲ. ಎಸಿ ಕೂಡ ಇರಲಿಲ್ಲ. ಆದರೆ, ಜಾಹಿರಾತಿನಲ್ಲಿ ಎಸಿ ಇದೆ ಎಂದು ಬರೆದುಕೊಂಡಿದ್ದಾರೆ. ಊಟದ ಮೆನು ಕೂಡ ಅಲ್ಲಿಲ್ಲ ಎಂದು ಚಿತ್ತರಂಜನ್​ ಪೊಸ್ಟ್​ ಮಾಡಿದ್ದಾರೆ.

    ಕೆಲವು ಹೋಟೆಲ್‌ಗಳಲ್ಲಿ ಎರಡು ಕರಿಗಳೊಂದಿಗೆ ಸಸ್ಯಾಹಾರಿ ಊಟಕ್ಕೆ 100 ರೂ. ಚಾರ್ಜ್​ ಮಾಡಲಾಗುತ್ತದೆ. ಕೆಲವು ಸ್ಥಳೀಯ ಹೋಟೆಲ್‌ಗಳು ಒಂದು ಚಹಾವನ್ನು 5 ರೂ. ಮತ್ತು ಊಟ 30 ರೂ.ಗೆ ನೀಡುವ ಸಮಯದಲ್ಲಿ ಇಷ್ಟೊಂದು ಹಣ ಚಾರ್ಜ್​ ಮಾಡುವುದು ನಿಜಕ್ಕೂ ಶೋಷಣೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಕುವೈತ್​ ಬೆನ್ನಲ್ಲೇ ಬೀಸ್ಟ್​ ಚಿತ್ರಕ್ಕೆ ತಮಿಳುನಾಡಲ್ಲೂ ಎದುರಾಯ್ತು ಸಂಕಷ್ಟ: ಬ್ಯಾನ್​ ಆಗುತ್ತಾ ವಿಜಯ್​ ಸಿನಿಮಾ?

    ಏನಿದು ಸ್ಯಾಮ್​? ಮಾಜಿ ಪತಿಯ ಫೋಟೋ ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಸಮಂತಾ..!

    ಹೆಣ್ಣು ಮಗು ಜನಿಸಿದ ಖುಷಿ: ಹೆಲಿಕಾಪ್ಟರ್​ ಮೂಲಕ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts