More

    ಸಹ-ಸಂಸ್ಥಾಪಕರಾದ ರಾಯ್ ದಂಪತಿ ಗಮನಕ್ಕೂ ತರದೇ ಅದಾನಿ ಗ್ರೂಪ್​ ಎನ್​ಡಿಟಿವಿ ಷೇರು ಖರೀದಿಸಿದ್ಹೇಗೆ?

    ನವದೆಹಲಿ: ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಎನ್​ಡಿಟಿವಿಯಲ್ಲಿ ಈಗಾಗಲೇ ಪರೋಕ್ಷವಾಗಿ ಶೇಕಡ 29.18 ಷೇರು ಖರೀದಿಸಿರುವ ಅದಾನಿ ಸಮೂಹದ ಕಂಪನಿ, ಇನ್ನೂ ಶೇಕಡ 26 ಷೇರುಗಳನ್ನು ಹೆಚ್ಚುವರಿಯಾಗಿ ಖರೀದಿಸಲು ಆಫರ್​ ನೀಡಿದೆ. ಇದರ ನಡುವೆ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ)ಗೆ ಎನ್​ಡಿಟಿವಿ ನೋಟಿಸ್​ ಕಳುಹಿಸಿದ್ದು, ಎನ್​ಡಿಟಿವಿ ಖರೀದಿಯ ಬಗ್ಗೆ ಅದರ ಸಂಸ್ಥಾಪಕಾರದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಜತೆ​ ಯಾವುದೇ ಚರ್ಚೆಯಾಗಲಿ, ಒಪ್ಪಿಗೆಯಾಗಲಿ ಪಡೆದಿಲ್ಲ ಎಂದು ಹೇಳಿದೆ.

    ಎನ್​ಡಿಟಿವಿಯಲ್ಲಿ ರಾಯ್​ ದಂಪತಿ 32.26 ಷೇರು ಹೊಂದಿದೆ. ಅವರು ವೈಯಕ್ತಿಕವಾಗಿ ಮತ್ತು ಅವರ ಕಂಪನಿ ಆರ್​ಆರ್​ಪಿಆರ್​ ಹೋಲ್ಡಿಂಗ್​ ಪ್ರೈವೆಟ್​ ಲಿಮಿಟೆಡ್ ಮುಖಾಂತರ ಎನ್​ಡಿಟಿವಿಯ ಒಟ್ಟು ಪಾವತಿಸಿದ ಷೇರು ಬಂಡವಾಳ​ದಲ್ಲಿ ಶೇ. 61.45 ರಷ್ಟು ಷೇರು ಹೊಂದುವ ಮೂಲಕ ಎನ್​ಡಿಟಿವಿಯಲ್ಲಿ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಆದರೆ, ಎನ್​ಡಿಟಿವಿ ಷೇರು ಖರೀದಿಯ ಬಗ್ಗೆ ಅದಾನಿ ಗ್ರೂಪ್​, ರಾಯ್​ ದಂಪತಿಯ ಜೊತೆ ಚರ್ಚೆಯೇ ನಡೆಸಿಲ್ಲ. ನಮ್ಮಗೆ ಗೊತ್ತಿಲ್ಲದೆಯೇ ಖರೀದಿ ಮಾಡಿದ್ದಾರೆ ಎಂದು ಎನ್​ಡಿಟಿವಿ ನೋಟಿಸ್​ನಲ್ಲಿ ತಿಳಿಸಿದೆ.

    ಅದಾನಿ ಗ್ರೂಪ್ NDTV ಅನ್ನು ಖರೀದಿಸಿದ್ದು ಹೇಗೆ?
    ಸಂಸ್ಥಾಪಕರ ಒಪ್ಪಿಗೆಯನ್ನೇ ಪಡೆಯದ ಮೇಲೆ ಅದು ಹೇಗೆ ಎನ್​ಡಿಟಿವಿ ಷೇರುಗಳನ್ನು ಅದಾನಿ ಗ್ರೂಪ್​ ಖರೀದಿಸಿತು ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ. ಅದಾನಿ ಗ್ರೂಪ್​ ಪರೋಕ್ಷವಾಗಿ 29.18 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಅಂದರೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಒಡೆತನದ ಎಎಮ್​ಜಿ(AMG) ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ (AMNL)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ವಿಶ್ವಪ್ರದನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL) ಮೂಲಕ ಈ ಷೇರು ಖರೀದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 2009 ಮತ್ತು 2010 ರಲ್ಲಿ ವಿಸಿಪಿಎಲ್​, ಎನ್​ಡಿಟಿವಿಯ ಪ್ರವರ್ತಕ ಕಂಪನಿಯಾದ ಆರ್​ಆರ್​ಪಿಆರ್​ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿತು. ಆರ್​ಆರ್​ಪಿಆರ್​ ಹೋಲ್ಡಿಂಗ್‌ಗೆ 403.85 ಕೋಟಿ ಸಾಲವನ್ನು ರಾಯ್ ದಂಪತಿಗಳು ಹೊಂದಿದ್ದರು. ಈ ಬಡ್ಡಿ ರಹಿತ ಸಾಲದ ಬದಲಾಗಿ, ಆರ್​ಆರ್​ಪಿಆರ್​, ವಿಸಿಪಿಎಲ್​ಗೆ ವಾರಂಟ್‌ಗಳನ್ನು ನೀಡಿತು. ಈ ವಾರಂಟ್‌ಗಳ ಮೂಲಕ, ಆರ್​ಆರ್​ಪಿಆರ್​ನಲ್ಲಿ ವಿಸಿಪಿಎಲ್​ 99.9 ಶೇಕಡಾ ಪಾಲನ್ನು ತೆಗೆದುಕೊಳ್ಳಬಹುದು. ವಿಸಿಪಿಎಲ್​ ಖರೀದಿಸಿದ ನಂತರ ಅದಾನಿ ಗ್ರೂಪ್ ಈ ವಾರಂಟ್‌ಗಳನ್ನು ಚಲಾಯಿಸಿದೆ ಎಂದು ಹೇಳಲಾಗುತ್ತಿದೆ.

    ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೖವೇಟ್​ ಲಿ., ಎಎಂಜಿ ಮೀಡಿಯಾ ನೆಟ್​ವರ್ಕ್ಸ್ ಮತ್ತು ಅದಾನಿ ಎಂಟರ್​ಪ್ರೈಸಸ್ ಸಂಸ್ಥೆಗಳು 294 ಕೋಟಿ ರೂಪಾಯಿ ಮೌಲ್ಯದ 1,67,62,530 ಷೇರುಗಳನ್ನು ಖರೀದಿಸುವುದಾಗಿ ತಿಳಿಸಿವೆ. ಪ್ರತಿ ಷೇರಿನ ಮುಖಬೆಲೆ 4 ರೂಪಾಯಿ ಆಗಿದೆ. (ಏಜೆನ್ಸೀಸ್​)

    ಹನಿಟ್ರ್ಯಾಪ್​ಗೆ ಬೀಳದ ಕಾಡಾನೆ: ಹೆಣ್ಣಾನೆಯೊಂದಿಗೆ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಎಸ್ಕೇಪ್​!

    ಮೊಸಳೆ ವೇಗವಾಗಿ ಓಡೋದನ್ನ ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ

    ಡಿವೋರ್ಸ್​ ವದಂತಿಗೆ ಬ್ರೇಕ್​: 1 ತಿಂಗಳು ತವರಿಗೆ ಹೋಗ್ತೀನೆಂದು ಹೆಂಡ್ತಿ ಹೇಳಿದ್ದಕ್ಕೆ ಕುಣಿದು ಕುಪ್ಪಳಿಸಿದ ಚಹಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts