More

    VIDEO| ದೇಶದ ಹಲವೆಡೆ ವರುಣನ ಆರ್ಭಟ! ಕಾಲುವೆಯಂತಾದ ರಸ್ತೆಗಳು; ಧರೆಗುರುಳಿದ ಬೃಹತ್​ ನೀರಿನ ಟ್ಯಾಂಕರ್​

    ರಾಂಚಿ: ದೇಶದ ಹಲವೆಡೆ ವರುಣನ ಆರ್ಭದ ಮುಂದುವರಿದಿದೆ. ಪಶ್ಚಿಮ ಬಂಗಾಳ, ಹರಿಯಾಣ, ಜಾರ್ಖಂಡ್​ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ಹಲವೆಡೆ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿವೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮಳೆ ಸಂಬಂಧ ಅವಘಡಗಳಿಂದ 9 ಮಂದಿ ಅಸುನೀಗಿದ್ದಾರೆ.

    ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ 3, ಮಂಡಿ ಜಿಲ್ಲೆಯ ಪಾಂಡೊ ಪ್ರದೇಶದ ಬಳಿ ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿದೆ. ಸದ್ಯ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಸಾಗುತ್ತಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ನಿನ್ನೆ ಅಸನ್ಸೋಲ್‌ನ ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಪಶ್ಚಿಮ ಮೆದಿನಾಪುರ್​ನಲ್ಲೂ ಇದೆ ಸ್ಥಿತಿ ನಿರ್ಮಾಣವಾಗಿದೆ. ಬಂಗಾಳದಲ್ಲಿ ಕಲಿಮ್​ಪೊಂಗ್​ ಜಿಲ್ಲೆಯ ಮಮ್ಖೋಲಾದಲ್ಲಿ ಪ್ರವಾಹದ ನೀರಿಗೆ ಕಾರ್ಮಿಕ ಕ್ಯಾಂಪ್​ ಕೂಡ ಕೊಚ್ಚಿ ಹೋಗಿದೆ.

    ಹರಿಯಾಣದಲ್ಲೂ ವರುಣ ಆರ್ಭಟಿಸಿದ್ದು, ಯುಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕರ್ನಲ್​ ಜಿಲ್ಲೆಯಲ್ಲಿ ಅನೇಕ ಜಮೀನುಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಡೀ ರಾಜಧಾನಿಯನ್ನು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಸಣ್ಣ ಕಾಲುವೆಗಳಂತಾಗಿದ್ದು, ಪ್ರವಾಹದ ನೀರು ಎಲ್ಲೆಡೆ ನುಗ್ಗಿದೆ. ರಸ್ತೆ ಪಕ್ಕ ಪಾರ್ಕ್​ ಮಾಡಿರುವ ಕಾರುಗಳು ಕೂಡ ಜಲಾವೃತಗೊಂಡಿದೆ.

    ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸೇತುವೆ ಕೊಚ್ಚಿ ಹೋಗಿದ್ದು, ಸ್ಥಳೀಯ ಗ್ರಾಮಸ್ಥರು ಮತ್ತು ವಿಪತ್ತು ರಕ್ಷಣಾ ತಂಡದ ಸದಸ್ಯರು ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಿ ಕೀಲಾಂಗ್‌ಗೆ ಕರೆದೊಯ್ದರು. ಇನ್ನು ಗುಜರಾತಿನ ಜುನಾಗಢದ ಖಿರ್ಸರ ಗ್ರಾಮದಲ್ಲಿ 40 ವರ್ಷ ಹಳೆಯದಾದ ಬೃಹತ್​ ವಾಟರ್​ ಟ್ಯಾಂಕರ್​ ಕುಸಿದು ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

    ಹಲವೆಡೆ ವರುಣ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದೆ. ಕರೊನಾ ಕಾಲದಲ್ಲಿ ಮಳೆಯ ಆರ್ಭಟ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮಳೆ ಹೀಗೆ ಮುಂದುವರಿದರೆ ಸಾಕಷ್ಟು ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಹೀಗಾಗಿ ನದಿ ಪಾತ್ರದ ಜನರನಲ್ಲಿ ಭಾರೀ ಪ್ರವಾಹದ ಭೀತಿ ಉಂಟಾಗಿದೆ. (ಏಜೆನ್ಸೀಸ್​)

    ಪ್ರೇಯಸಿ ಕೋಣೆಗೆ ನುಗ್ಗಿದ ಪ್ರಿಯಕರ! ವರ್ಷದ ಹಿಂದಷ್ಟೇ ಆಗಿದ್ದ ಪರಿಚಯ ದುರಂತದಲ್ಲಿ ಅಂತ್ಯ

    ಫೇಸ್​ಬುಕ್​ ಪರಿಚಯ; ಉದ್ಯಮಿಯನ್ನು ಮನೆಗೆ ಆಹ್ವಾನಿಸಿದ ಮಹಿಳೆಯಿಂದ ನಡೆದಿತ್ತು ಭಾರೀ ಸಂಚು

    ಯಾರಾಗಲಿದ್ದಾರೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​? ಸಣ್ಣ ಸುಳಿವು ಕೊಟ್ರಾ ಕಾರ್ಯಕ್ರಮದ ನಿರ್ದೇಶಕರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts