More

    ಗಣೇಶ ಮೂರ್ತಿ ನಿಮಜ್ಜನ ವೇಳೆ 7 ಮಂದಿ ದುರಂತ ಸಾವು: ಅಪ್ಪನೊಂದಿಗೆ ನೀರಿಗಿಳಿದ ಪುತ್ರನೂ ನೀರುಪಾಲು

    ಚಂಡೀಗಢ: ಗಣೇಶ ನಿಮಜ್ಜನ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಹರಿಯಾಣದಲ್ಲಿ ಶುಕ್ರವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸೋನಿಪತ್​ನಲ್ಲಿ ಮೂವರು ಮತ್ತು ಮಹೇಂದ್ರಗಢದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆಗಸ್ಟ್​ 31ರಂದು ಆರಂಭವಾದ ಗಣೇಶ ಹಬ್ಬಕ್ಕೆ ಹರಿಯಾಣದಲ್ಲಿ ನಿನ್ನೆ ತೆರೆಬಿದ್ದಿದೆ. ರಾಜ್ಯಾದ್ಯಂತ ಸಾಕಷ್ಟು ಗಣೇಶನ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ನೀರಿನಲ್ಲಿ ಬಿಡಲಾಯಿತು.

    ಸೋನಿಪತ್​ನ ಮಿಮಾರ್ಪುರ್​ ಘಾಟ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಪುತ್ರ ಮತ್ತು ಸೋದರಸಂಬಂಧಿಯೊಂದಿಗೆ ಗಣೇಶ ಮೂರ್ತಿಯನ್ನು ಹಿಡಿದು ನೀರಿನಲ್ಲಿ ಇಳಿದಾಗ ಮೂವರು ಸಹ ನೀರುಪಾಲಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಹೇಂದ್ರಗಢದಲ್ಲಿ ಸುಮಾರು 9 ಮಂದಿ ಗಣೇಶ ಮೂರ್ತಿಯನ್ನು ಬಿಡಲು ಝಾಗಡಾಲಿ ಗ್ರಾಮದ ಕನಿನಾ ಮತ್ತು ರೆವಾರಿ ರಸ್ತೆಯ ಪಕ್ಕದಲ್ಲಿರುವ ಕಾಲುವೆಯ ನೀರಿಗೆ ಇಳಿದರು. ಈ ವೇಳೆ ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ 4 ಮಂದಿ ನೀರುಪಾಲಾಗಿದ್ದಾರೆ. ಕಾಲುವೆಯ ನೀರಿನಿಂದ ಎಂಟು ಮಂದಿಯನ್ನು ರಾತ್ರಿಯೇ ಹೊರಗೆಳೆಯಲಾಯಿತು. ಇದರಲ್ಲಿ 4 ಮಂದಿ ಮೃತಪಟ್ಟಿದ್ದಾರೆ.

    ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ಕಾಲುವೆಯಲ್ಲಿ ಮುಳುಗಿ ಹಲವರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಮೃತರ ಕುಟುಂಬದವರ ಜೊತೆ ನಾವೆಲ್ಲರೂ ನಿಂತಿದ್ದೇವೆ. NDRF ತಂಡವು ಅನೇಕ ಜನರನ್ನು ಮುಳುಗುವಿಕೆಯಿಂದ ರಕ್ಷಿಸಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಹರಿಯಾಣ ಸಿಎಂ ಎಂ.ಎಲ್​. ಖಟ್ಟರ್ ಟ್ವೀಟ್​ ಮಾಡಿದ್ದಾರೆ.

    ಮಹಾಮಾರಿ ಕರೊನಾ ಸಾಂಕ್ರಾಮಿಕ ಪ್ರೇರಿತ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷ ಆಚರಣೆಯನ್ನು ಮೊಟಕುಗೊಳಿಸಲಾಗಿತ್ತು. ನಿರ್ಬಂಧಗಳು ಮುಕ್ತವಾಗಿ ಈ ವರ್ಷ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. (ಏಜೆನ್ಸೀಸ್​)

    ರಾಹುಲ್​ ಗಾಂಧಿಯ ಟೀ ಶರ್ಟ್​ ಅಣುಕಿಸಿದ ಬಿಜೆಪಿಗೆ ಕಾಂಗ್ರೆಸ್​ ಕೊಟ್ಟ ತಿರುಗೇಟು ಹೀಗಿದೆ….

    ಬೋರ್​ವೆಲ್​ನಲ್ಲಿ ಲೂಟಿ: ನಕಲಿ ಫೋಟೋ ಮತ್ತು ಬಿಲ್

    ದೇವರ ಆಟ ಬಲ್ಲವರಾರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts