More

    ದೆಹಲಿಯ ಗುಡಿಸಲು ಪ್ರದೇಶದಲ್ಲಿ ಅಗ್ನಿ ಅವಘಡ: 7 ಮಂದಿ ಸಜೀವ ದಹನ, 60 ಗುಡಿಸಲುಗಳು ಸುಟ್ಟು ಭಸ್ಮ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗೋಕುಲ್​ಪುರಿ ಏರಿಯಾದ ಗುಡಿಸಲು ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 7 ಮಂದಿ ಸಜೀವ ದಹನವಾಗಿದ್ದು, ಸುಮಾರು 60 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.

    ತಡರಾತ್ರಿ 1 ಗಂಟೆ ಸುಮಾರಿಗೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ದೂರವಾಣಿ ಕರೆ ಸ್ವೀಕರಿಸಿದರು. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಸುಮಾರು 13 ಅಗ್ನಿಶಾಮಕ ವಾಹನ ದೌಡಾಯಿಸಿ, ಕೆಲವೇ ಗಂಟೆಗಳಲ್ಲಿ ಬೆಂಕಿಯನ್ನು ನಂದಿಸಿದವು.

    ಈ ಬಗ್ಗೆ ಮಾತನಾಡಿರುವ ದೆಹಲಿಯ ಅಗ್ನಿಶಾಮಕ ನಿರ್ದೇಶಕ ಅತುಲ್ ಗಾರ್ಗ್, ಗುರುತು ಸಿಕ್ಕಿದ 7 ಸುಟ್ಟ ದೇಹಗಳನ್ನು ಹೊರತೆಗೆದಿದ್ದೇವೆ. ಮೃತರು ಮಲಗಿದ್ದ ವೇಳೆ ಅವಘಡ ಸಂಬಂಧಿಸಿದ್ದರಿಂದ ಮತ್ತು ಬೆಂಕಿ ವೇಗವಾಗಿ ಹರಡಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. 60 ಗುಡಿಸಲುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ಹಿಂದಿನ ಕಾರಣಗಳು ನಮಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.

    ಘಟನೆಯ ಬೆನ್ನಲ್ಲೇ ಟ್ವೀಟ್​ ಮೂಲಕ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸಂತಾಪ ಸೂಚಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಮುಖಂಡ ಹಾಗೂ ಈಶಾನ್ಯ ದೆಹಲಿಯ ಸಂಸದ ಮನೋಜ್​ ತಿವಾರಿ, ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ, ಮೃತರಿಗೆ ತಲಾ ಒಂದೊಂದು ಕೋಟಿ ಅನುದಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

    ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್​ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

    ಪಾಕ್​ ಯುವತಿ ಜತೆ ಮದ್ವೆಯಾದ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆಸಿದ ಕೇರಳದ M.Tech ವಿದ್ಯಾರ್ಥಿ!

    4 ರಾಜ್ಯಗಳ ಚುನಾವಣಾ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ: ಮಮತಾ ಬ್ಯಾನರ್ಜಿ ಕೊಟ್ಟ ವಿವರಣೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts