More

    ಕುಡಿತ ಬಿಡಿ, ಉತ್ತಮ ಜೀವನ ನಡೆಸಿ

    ಜೇವರ್ಗಿ: ಮದ್ಯಪಾನ ಮನುಷ್ಯನನ್ನು ಸರ್ವನಾಶ ಮಾಡುತ್ತದೆ. ಒಮ್ಮೆ ಕುಡಿತದ ಚಟಕ್ಕೆ ಬಲಿಯಾದರೆ ಇಡೀ ಕುಟುಂಬವೇ ಬೀದಿಗೆ ಬರಲಿದೆ. ಹೀಗಾಗಿ ಮದ್ಯ ಬಿಟ್ಟು, ಉತ್ತಮ ಜೀವನ ನಡೆಸಿ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಕರೆ ನೀಡಿದರು.

    ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಿAದ ಶನಿವಾರ ಹಮ್ಮಿಕೊಂಡಿದ್ದ 1734ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿ, ಕುಡಿತದ ಚಟಕ್ಕೆ ಬಲಿಯಾದರೆ ಮನೆ, ಹೊಲ ಹಾಗೂ ಒಡವೆಗಳನ್ನೆಲ್ಲ ಮಾರುವ ಸ್ಥಿತಿಗೆ ಬರುತ್ತೀರಿ. ಕುಡಿತದಿಂದ ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ಸಿಗಲ್ಲ. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮದ್ಯಪಾನವನ್ನು ಬಿಡುವುದರ ಮೂಲಕ ಜೀವನ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ದಿನೇಶ ಎನ್. ಮಾತನಾಡಿ, 8 ದಿನಗಳವರೆಗೆ ಶಿಬಿರ ನಡೆಯಲಿದ್ದು, ಜೇವರ್ಗಿ ತಾಲೂಕಿನ ವಿವಿಧೆಡೆಯ 100ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
    ಶಾಖಾಪುರದ ಶ್ರೀ ಡಾ. ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

    ಸಿಪಿಐ ರಾಜೇಸಾಬ್ ನದಾಫ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಪ್ರಮುಖರಾದ ಸಂಗಣ್ಣ ದೇಸಾಯಿ, ಡಾ.ಪಿ.ಎಂ.ಮಠ, ಐ.ಎಸ್.ಹಿರೇಮಠ, ರವಿ ಕೋಳಕೂರ, ರುದ್ರಗೌಡ ಪಾಟೀಲ್, ಕಮಲಾಕ್ಷ, ರಾಜೇಶ ಕೆ., ಸಂತೋಷ, ಕೃಷ್ಣಮೂರ್ತಿ, ಮಂಜುನಾಥ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಸುನೀಲ ಬಳ್ಳುಂಡಗಿ, ಜಯಲಕ್ಷ್ಮೀ, ರಾಜೇಶ, ರಮೇಶ, ನಿರ್ಮಲಾ, ಶಾಮ, ನಾಗಪ್ಪ, ಮಂಜುಳಾ, ಶಿವಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts